ನ್ಯಾ. ಶಿವರಾಜ್ ಪಾಟೀಲ್
ಸಮುದಾಯದ ಸಂಘಟನೆಗಳು ತಪ್ಪಲ್ಲ, ನಮ್ಮ ಸಂತೋಷಕ್ಕಾಗಿ ಸಂಘಟನೆಗಳು ಬೇಕು ಹೊರತು ಬೇರೆಯವರಿಗೆ ದುಃಖ ನೀಡಲಲ್ಲ. ಸಂಘಟನೆ ಅಭಿವೃದ್ಧಿಗೆ ಕಾರಣವಾಗಬೇಕು ಹೊರತು ಮತ್ತೊಬ್ಬರಿಗೆ ಮಾರಕವಾಗಬಾರದು. ಈ ದಿಶೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಂಘಟನೆಗಳಿಗೆ ನನ್ನ ಸಹಮತಿ ಇದೆ. ಹವ್ಯಕ ಮಹಾಸಭೆ ಈ ದಿಶೆಯಲ್ಲಿ ತೊಡಗಿಸಿಕೊಂಡಿದೆ ಎಂಬುದು ನನ್ನ ಅಭಿಪ್ರಾಯ.
ಹವ್ಯಕ ಸಮಾಜ ಈ ರೂಪದಲ್ಲಿ ಸಂಘಟಿತವಾಗಿ 75 ವರ್ಷಗಳಾಗಿದೆ. ಇಲ್ಲಿಯ ವರೆಗಿನ ಕಾರ್ಯಗಳನ್ನು ಅವಲೋಕನ ಮಾಡಿಕೊಂಡು ಮುಂದೇನು ಮಾಡಬಹುದು ಎಂಬ ಕುರಿತು ಆಲೋಚಿಸಬೇಕು. ಮುಂದೆ ನಡೆಯುವ ಗೋಷ್ಠಿಗಳು ಈ ದಿಶೆಯಲ್ಲಿ ಬೆಳಕು ಚೆಲ್ಲಲಿ. ಅಮೃತಮಹೋತ್ಸವದ ಸಂದರ್ಭದಲ್ಲಿ ‘ಅಮೃತ ವರ್ಷಿಣಿ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿರುವುದು ಸಂತಸದ ವಿಚಾರ.
ಹವ್ಯಕ ಸಮಾಜ 100% ಸುಶಿಕ್ಷಿತ ಎಂಬುದಯ ನಿಜಕ್ಕೂ ಹೆಮ್ಮೆಯ ವಿಚಾರ. ಎಲ್ಲ ಸಮಾಜಗಳಿಗೆ ಇದು ಮಾದರಿಯಾಗಬೇಕು. ಹವ್ಯಕ ಸಮಾಜಕ್ಕೆ ನಾನು ಈ ಮೂಲಕ ಒಂದು ಕರೆಯನ್ನು ಕೊಡಲು ಬಯಸುತ್ತೇನೆ. ನೀವು ಈ ನಾಡಿನಲ್ಲಿ, ಈ ದೇಶದಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಪಣತೊಡಬೇಕು. ಸಮಸ್ಥ ದೇಶದಲ್ಲಿ ಅಕ್ಷರ ಜಾಗೃತಿ ಮೂಡಿಸುವ ಕೆಲಸ ನಿಮ್ಮ ಸಮಾಜದಿಂದಾಗಲಿ ಎಂದರು.