ಮಾಣಿ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶಾಸನತಂತ್ರ ಸೇವಾಖಂಡ ಕಾರ್ಯಗಾರ – ೨ ೨೧/೦೯/೨೦೨೫ರಂದು ನಡೆಯಿತು.
ಬೆಳಗ್ಗೆ ಶ್ರೀರಾಮ ದೇವರ ಸನ್ನಿಧಿ ಮುಂಭಾಗದಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ಸಂಪನ್ಮೂಲ ಖಂಡದ ಶ್ರೀಸಂಯೋಜಕ ಹಾರಕರೆ ನಾರಾಯಣ ಭಟ್ ಹಾಗೂ ಮುಳ್ಳೇರಿಯ ಮಂಡಲ ಅಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ದೀಪಪ್ರಜ್ವಲಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ತಿಳಿಸಿಕೊಟ್ಟರು. ಶಾಸನ ತಂತ್ರದ ಕಾರ್ಯದರ್ಶಿ ಕೃಷ್ಣ ಪ್ರಸಾದ ಎಡಪ್ಪಾಡಿ ಶ್ರೀಮಠದ ಸಮಗ್ರ ಮಾಹಿತಿಯನ್ನು ನೀಡಿದರು. ಶ್ರೀಮಠದ ಆಡಳಿತ ವ್ಯವಸ್ಥೆಯಾದ ಶಾಸನತಂತ್ರದ ಮಾಹಿತಿಯನ್ನು ಸೇವಾಖಂಡ ಸಂಯೋಜಕ ಸುರೇಶ್ ಭಟ್ ನೀಡಿದರು. ಸೇವಾಖಂಡದ ಸ್ವರೂಪದ ಹಾಗೂ ವ್ಯಾಪ್ತಿಯ ಸಂಪೂರ್ಣ ಮಾಹಿತಿಯನ್ನು ಖಂಡದ ಶ್ರೀಸಂಯೋಜಕ ಕೇಶವ ಪ್ರಕಾಶ ಮುಣ್ಚಿಕಾನ ತಿಳಿಸಿದರು.
ಜಾರಿ ನಿರ್ದೇಶಾಲಯ ವಿಶೇಷ ನ್ಯಾಯವಾದಿ ಶ್ರೀಮಹೇಶ್ ಕಜೆ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೆ ಸ್ಪೂರ್ತಿಯುತ ಪ್ರೇರಣಾ ನುಡಿಗಳನ್ನಾಡಿ ಹುರಿದುಂಬಿಸಿದರು. ಶಾಸನತಂತ್ರ ಸಂಪನ್ಮೂಲ ಖಂಡದ ಮಾರ್ಗದರ್ಶಕ ಕೃಷ್ಣ ಪ್ರಸಾದ ಅಮ್ಮಂಕಲ್ಲು ವೇದಿಕೆಯಲ್ಲಿದ್ದರು. ೬೦ಕ್ಕೂ ಅಧಿಕ ಸೇವಾಖಂಡದ ಸೇವಾ ಬಿಂದುಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಉಪಸ್ಥಿತಿ ಪತ್ರ ನಿಡಲಾಯಿತು. ಮಂಗಳೂರು ಪ್ರಾಂತ್ಯ ಮೂರು ಮಂಡಲಗಳ ವಿವಿಧ ಪದಾಧಿಕಾರಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
ಸೇವಾ ಖಂಡದ ಕಾರ್ಯಕರ್ತರ ನಿರ್ಮಾಣ ವಿಭಾಗದ ಸಂಯೋಜಕ ರಕ್ಷಿತ್ ಮಿತ್ತೂರು ಸ್ವಾಗತಿಸಿದರು. ಉಪಖಂಡದ ವಿವರಣೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಖಂಡದ ಸಂಯೋಜಕಾರದ ಶಿವರಾಜ ಪೆರ್ಮುಖ ನಿರೂಪಿಸಿದರು. ಸಂಯೋಜಕ ಗೋಪಾಲಕೃಷ್ಣ ಭಟ್, ಮಾರ್ಗ ವಂದಿಸಿದರು.
ಶ್ರೀಸಂಯೋಜಕ
ಸಂಯೋಜಕರು
ಸೇವಾ ಖಂಡ