ಶ್ರೀ ರಾಮಚಂದ್ರಾಪುರ ಮಠದ ಅಂಗಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದಕ್ಕೆ ಸಮಾಜದ ಸ್ವಾಸ್ಥ್ಯ ಸಂಕಲ್ಪದ 15 ಸಾರ್ಥಕ ವರ್ಷಗಳ ಸಂಭ್ರಮ. ಈ ಹಿನ್ನಲೆಯಲ್ಲಿ ಸಮಾಜದ ಜತೆಗೆ ಬೆರೆಯುವ , ಸಮಾಜಕ್ಕೆ ಸ್ವಾಸ್ಥ್ಯ ಅರಿವು ಮೂಡಿಸುವ ಕಾರ್ಯಕ್ರಮವೇ ” ವಿಷ ಮುಕ್ತ ಅಡುಗೆ ಮನೆ ~ ಮುಕ್ತ ಮಾತು ” .
ಸಮಾಜದ ಗಣ್ಯರು , ವಿಷಯ ತಜ್ಞರ ಸಂಧಿಸುವ ಅಪೂರ್ವ ಕಾರ್ಯಕ್ರಮ ಸರಣಿಗೆ ಇತ್ತೀಚೆಗೆ ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕಿ ಶೋಭಾ ಮಳವಳ್ಳಿ ಅವರು ಆಗಮಿಸಿದ್ದರು. ಹಾಗೆಯೇ ಮುಕ್ತ ಸಂವಾದ ನಡೆಸಲು ಖ್ಯಾತ ಹಿನ್ನಲೆ ಧ್ವನಿ ಕಲಾವಿದರು , ನಿರೂಪಕ ಬಡೆಕ್ಕಿಲ ಪ್ರದೀಪ್ ಮತ್ತು ಅವರ ತಂಡ ನಮ್ಮೊಂದಿಗೆ ಜತೆಯಾದರು.

ನಮ್ಮ ಆಹಾರ ರಾಸಾಯನಿಕ ಮುಕ್ತವಾಗಿ ಇರಲೇಬೇಕಾದ ಮಹತ್ವದ ಬಗ್ಗೆ ಶೋಭಾ ಅವರು ವಿವರವಾಗಿ ಮಾತನಾಡಿದರು. ಸಮಾಜದಲ್ಲಿ ದೊರೆಯುವ ಅಗ್ಗದ ಆಹಾರ ವಸ್ತುಗಳು ಹೇಗೆ ಜನರ ಆರೋಗ್ಯಕ್ಕೆ ಮಾರಕವಾಗಿದೆ ಎನ್ನುವ ಗಂಭೀರ ಚಿಂತನೆಯನ್ನೂ ನಡೆಸಿದರು. ವಿಶೇಷವಾಗಿ ಮಕ್ಕಳ ಆರೋಗ್ಯಯುತ ಆಹಾರ ಕ್ರಮಗಳು ಹೇಗೆ ಹೆತ್ತವರು ಕಾಳಜಿ ಮಾಡಬೇಕು ಎನ್ನುವ ಬಗ್ಗೆ ಒತ್ತಿ ಹೇಳಿದರು. ಗ್ರಾಮರಾಜ್ಯ ಸಂಸ್ಥೆಯ ಉತ್ಪನ್ನಗಳನ್ನು ತಾವು ಅನೇಕ ವರ್ಷಗಳಿಂದ ಬಳಸಿ , ರಾಜಿಯಿಲ್ಲದ ಗುಣಮಟ್ಟ ಉಳಿಸಿಕೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶ್ರೀಸಂಸ್ಥಾನದವರ ಸಂಕಲ್ಪದ ಯೋಜನೆ ಸಮಾಜದ ಪ್ರತೀ ಮನೆಗೆ ತಲುಪುವ ಹಾಗಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಶಶಾಂಕ ಕಂಗಿಲ , ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.