ಅಮೃತಧಾರಾ ಗೋಶಾಲೆಯಲ್ಲಿ ಗಾಯತ್ರಿ ಹವನ

ಸುದ್ದಿ

ಬಜಕೂಡ್ಲು: ಬಜಕೂಡ್ಲುವಿನ ಶ್ರೀ ಅಮೃತಧಾರಾ ಗೋಶಾಲೆ, ಗೋಲೋಕದ ಗೋವರ್ಧನ ಧರ್ಮ ಮಂದಿರದಲ್ಲಿ ಪ್ರಾಕೃತಿಕ ವೈಪರೀತ್ಯಶಮನ, ದುರಿತನಿವಾರಣೆ, ಆರೋಗ್ಯಪ್ರಾಪ್ತಿ ಹಾಗೂ ಶ್ರದ್ಧಾ-ಮೇಧಾ-ಪ್ರಜ್ಞಾಪ್ರಾಪ್ತಿಯ ಉದ್ದೇಶದಿಂದ ಗಾಯತ್ರೀಹವನವನ್ನು ಆ.೧೬ರಂದು ಹಮ್ಮಿಕೊಳ್ಳಲಾಗಿತ್ತು.

 

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದ ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗ ವತಿಯಿಂದ ಪರಮಪವಿತ್ರವಾದ ಗಾಯತ್ರೀ ಪ್ರತಿಪತ್ (ಶ್ರಾವಣ ಕೃಷ್ಣ ಪ್ರತಿಪತ್) ನಂದು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ. ಮೂ. ಕೇಶವ ಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲ ಸಂಸ್ಕಾರ ಪ್ರಮುಖ ನವನೀತ ಪ್ರಿಯ ಕೈಪ್ಪಂಗಳ ಅವರ ಸಹಾಯದಿಂದ ಜರಗಿತು.

ಗಾಯತ್ರೀ ಹವನದ ಆಹುತಿಸಮರ್ಪಣೆಯಲ್ಲಿ ಗೋಶಾಲೆ ಅಧ್ಯಕ್ಷ ಜಗದೀಶ ಬಿ ಜಿ, ಸಂಘಟನಾ ಕಾರ್ಯದರ್ಶಿ ವಿನಯಕೃಷ್ಣ ಕಾನದಮೂಲೆ, ಎಣ್ಮಕಜೆ ವಲಯ ಸೇವಾ ವಿಭಾಗ ಪ್ರಮುಖ ಶಂಕರನಾರಾಯಣ ಪ್ರಕಾಶ ಅಬರಾಜೆ, ಕೃಷಿ ವಿಭಾಗ ಪ್ರಮುಖ ಗಣರಾಜ ಕಡಪ್ಪು, ಸಮಾಜ ಸುಕ್ಷೇಮ ಪ್ರಮುಖ ಶಿವಪ್ರಸಾದ ಪಳನೀರು, ಶ್ರೀಕಾರ್ಯಕರ್ತರಾದ ನಿರಂಜನ ಕಡಪ್ಪು ಹಾಗು ಶಿವಶಂಕರ ಭಟ್ಟ ಪೆರ್ಲ ಭಾಗಿಯಾಗಿ ಸಹಕರಿಸಿದರು. ಗೋಪೂಜೆ ಹಾಗು ಗೋಪಾಲಕೃಷ್ಣ ಪೂಜೆಯನ್ನು ಈ ಸಂಧರ್ಭದಲ್ಲಿ ನೆರವೇರಿಸಲಾಯಿತು.

Author Details


Srimukha

Leave a Reply

Your email address will not be published. Required fields are marked *