ಈಶಾವಾಸ್ಯಂ ನಿವಾಸದಲ್ಲಿ ಪ್ರತಿರುದ್ರ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆ ಸಂಪನ್ನ

ಸುದ್ದಿ

ನೀರ್ಚಾಲು: ಶ್ರೀಸಂಸ್ಥಾನದವರ ಅನುಗ್ರಹ ಆಶೀರ್ವಾದಗಳೊಂದಿಗೆ ಮಂಗಳೂರು ಹೋಬಳಿಯ ಮುಳ್ಳೇರಿಯಾ ಮಂಡಲಾಂತರ್ಗತ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ಕಿಳಿಂಗಾರು ವೇ.ಮೂ. ಬಾಲಕೃಷ್ಣ ಪ್ರಸಾದರ ನಿವಾಸ ಈಶಾವಾಸ್ಯಂ ನಲ್ಲಿ 02.04.2019ರಂದು ಶ್ರೀಮಠ ರಕ್ಷಾತ್ಮಕವಾದ ಧಾರ್ಮಿಕ ಕಾರ್ಯಕ್ರಮವು ಸಂಪನ್ನವಾಯಿತು.

ಮಹಾಮಂಡಲಾಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು ಧ್ವಜಾರೋಹಣ ಮಾಡಿ, ಶಂಖನಾದ ಗುರುವಂದನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು.
ಮಂಗಳೂರು ಉಪ್ಪಿನಂಗಡಿ ಮುಳ್ಳೇರಿಯಾ ಹವ್ಯಕ ಮಂಡಲಗಳಿಂದ ಬಂದು ಸೇರಿದ ರುದ್ರಾಧ್ಯಾಯಿಗಳಿಂದ ಪ್ರದೋಷ ಪ್ರತಿರುದ್ರ ಪಠಣವು ಜರಗಿತು.
ಮಾತೃ ವಿಭಾಗದವರಿಂದ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆಯು ಜರಗಿತು.

ಪ್ರದೋಷ ಕಾಲದಲ್ಲಿ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ಮನೆಯವರ ನೇತೃತ್ವದಲ್ಲಿ ಶ್ರೀ ರುದ್ರಕಲ್ಪದಲ್ಲಿ ವಿಧಿಸಿರುವಂತೆ ವಿವಿಧ ದ್ರವ್ಯಗಳಿಂದ ಪ್ರದೋಷ ರುದ್ರಾಭಿಷೇಕ ಪೂರ್ವಕ ಶಂಕರನಾರಾಯಣ ಪೂಜೆಯು ನೆರವೇರಿತು.

Author Details


Srimukha

Leave a Reply

Your email address will not be published. Required fields are marked *