ಉತ್ತರಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತರಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕಾರವಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಡಿ.30 ರಂದು ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಿತು.
ಶ್ರೀ ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ, ಸಾರ್ವಭೌಮ ಗುರುಕುಲಮ್ ಅಶೋಕೆ ಗೋಕರ್ಣದಿಂದ ಪ್ರತಿಭಾನ್ವಿತ ಮಕ್ಕಳು ಭಾಗವಹಿಸಿದ್ದು ಇಂಗ್ಲೀಷ್ ಭಾಷಣದಲ್ಲಿ ಸನತ್ ಕುಮಾರ್. ಸಿ .ಆರ್ ಪ್ರಥಮ ಸ್ಥಾನ,
ಕನ್ನಡ ಭಾಷಣದಲ್ಲಿ ಪೃಥ್ವಿನಾರಾಯಣ ಪ್ರಥಮ ಸ್ಥಾನ, ಸಂಸ್ಕೃತ ಭಾಷಣದಲ್ಲಿ ಧನ್ಯಾ ಜಿ ಬಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಜಾನಪದನೃತ್ಯದಲ್ಲಿ ಪ್ರಜ್ಞಾ ಮತ್ತು ತಂಡ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ರಸಪ್ರಶ್ನೆಯಲ್ಲಿ ಶ್ರೀಸಮರ್ಥ ಮತ್ತು ಪಂಚಮೀ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನೂ ಪರಮಪೂಜ್ಯ ಶ್ರೀಸಂಸ್ಥಾನದವರು ಆಶೀರ್ವದಿಸಿದ್ದಾರೆ. ವಿದ್ಯಾಪರಿಷತ್, ವಿವಿವಿ ಪ್ರಾಂಶುಪಾಲರು, ಮುಖ್ಯಶಿಕ್ಷಕರು, ಮತ್ತು ಬೋಧಕ-ಬೋಧಕೇತರವೃಂದದವರು ಅಭಿನಂದಿಸಿದ್ದಾರೆ.