ಸಾಗರದ ಗೋಳಗೋಡಿನಲ್ಲಿ ಮಹಾರುದ್ರ ಹವನ ಸಂಪನ್ನ

ಶಿಕ್ಷಣ

ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ದೇಶದ ಯೋಧರನ್ನು ಭೀಭತ್ಸವಾಗಿ ಕೊಂದಾಗ ಇಡೀ ದೇಶವೇ ಕಂಬನಿ ಮಿಡಿದಿತ್ತು. ಇದೇ ಸಂದರ್ಭದಲ್ಲಿ ಗೋಳಗೋಡಿನ ತ್ರಯಂಬಕೇಶ್ವರ ದೇವಸ್ಥಾನದ ವೇ.ಮೂ.ದತ್ತಾತ್ರೇಯ ಭಟ್ಟರು ತಾವು ದಿನನಿತ್ಯ ಪೂಜಿಸುವ ಈಶ್ವರನಲ್ಲಿ ದೇಶದ ಸೈನಿಕರ ಒಳಿತಿಗಾಗಿ ಮಹಾರುದ್ರ ಹವನ ಮಾಡಿಸಿಕೊಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು ಸೈನಿಕರಿಗಾಗಿ ಮಾಡಿಕೊಂಡ ಈ ಮಹಾಕಾರ್ಯಕ್ಕೆ ಇಡೀ ಹವ್ಯಕ ಸಮಾಜವೇ ಬಹುಬೇಗನೆ ಸ್ಪಂದಿಸಿದ್ದರ ಫಲವಾಗಿ ಮಹಾರುದ್ರ ಹವನ ವಿಧ್ಯುಕ್ತವಾಗಿ ನಡೆಯಿತು. ಈ ದೊಡ್ಡ ಕಾರ್ಯ ನೆರವೇರಲು ಹವ್ಯಕ ಸಮಾಜದ ದೊಡ್ಡ ಕಾರ್ಯಪಡೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲಿರುಳೂ ಶ್ರಮ ಹಾಕಿತು. ವೇ.ಮೂ. ರವೀಶ ಶಾಸ್ತ್ರಿ. ವೇ.ಮೂ. ಗಣಪತಿಭಟ್ಟರ ನೇತೃತ್ವದಲ್ಲಿ ಉಳಿದ ವೈದಿಕರೂ ಕೂಡ ಯಾವುದೇ ಅಪೇಕ್ಷೆ ಇಲ್ಲದೆ ತುಂಬಾ ಶ್ರದ್ಧೆಯಿಂದ ಕಾರ್ಯ ಮಾಡಿಕೊಟ್ಟರು.

 

ನಮ್ಮ ಶ್ರೀಸಂಸ್ಥಾನದ ಅಪೇಕ್ಷೆಯಂತೆ ರುದ್ರ ಮಂತ್ರವನ್ನು ಕಲಿತ ಗ್ರಹಸ್ಥರೂ ಕೂಡ ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುದಾರರಾದರು.

ಈ ಪುಣ್ಯ ಕಾರ್ಯದಲ್ಲಿ ಶ್ರೀಭಾರತೀ ಗುರುಕುಲ ವಿದ್ಯಾರ್ಥಿಗಳು ಹಾಗು ಅಧ್ಯಾಪಕರೂ ಭಾಗಿಯಾಗಿದ್ದರು.

Author Details


Srimukha

Leave a Reply

Your email address will not be published. Required fields are marked *