ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಮಾಘ ಮಾಸ /
ಶುಕ್ಲ ಪಕ್ಷ / ದ್ವಿತೀಯ ತಿಥಿ/
ಬುಧವಾರ/ ಧನಿಷ್ಠ/ಶತಭಿಷ ನಕ್ಷತ್ರ /
ದಿನಾಂಕ: 06.02.2019
°~•~°~•~°~•~°~•~°~•~°
ಮೇಷ
ಕೈಗೊಂಡ ಕೆಲಸ ಕಾರ್ಯದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರಲಿದ್ದು, ಅಧಿಕ ಲಾಭ ಗಳಿಸುವಿರಿ. ಸಂಪಾದಿಸಿದ ಹಣವನ್ನು ದುರ್ವಿನಿಯೋಗ ಮಾಡದೇ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಲಹಗಳನ್ನು ಎದುರಿಸಬೇಕಾಗುತ್ತದೆ. ಮಾತಿನ ಮೂಲಕ ಕಲಹ ಉಂಟಾಗುವ ಸಾಧ್ಯತೆ ಇದ್ದು, ಮಾತಿನ ಬಗ್ಗೆ ಗಮನವಿರಲಿ. ಶ್ವಾಸ ಸಂಬಂಧಿ, ರಕ್ತ ಸಂಬಂಧಿ ತೊಂದರೆಗಳು ಮತ್ತು ಅಲರ್ಜಿ ಬರುವಂತಹ ಸಾಧ್ಯತೆಗಳಿದ್ದು ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಕೊರತೆ ಕಂಡುಬರುತ್ತಿದ್ದು ಉದಾಸೀನತೆಯನ್ನು ತೊರೆದು, ಗುರುಹಿರಿಯರ ಮಾರ್ಗದರ್ಶನದಂತೆ ಮುನ್ನಡೆದಲ್ಲಿ ಶುಭ.
ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.
ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ
ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯ-ಪಾದಾರವಿನ್ದೇ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥
°~•~°~•~°~•~°~•~°~•~°
ವೃಷಭ
ಉತ್ತಮ ಅಭಿವೃದ್ಧಿಯೊಂದಿಗೆ ಕೆಲಸ ಕಾರ್ಯಗಳು ಮುಂದುವರೆಯಲಿದೆ. ಹೊಸ ಆಲೋಚನೆಗಳು ಮತ್ತು ಕಾರ್ಯವೈಖರಿ ನಿಮ್ಮನ್ನು ಮುನ್ನಡೆಸಲಿವೆ. ಉತ್ತಮ ಲಾಭದಾಯಕವಾಗಿ ಕೆಲಸ ಒದಗಿಬರಲಿದೆ. ಧನ ಸಂಪಾದನೆಯಾಗಲಿದ್ದು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ. ವಾಹನ ಓಡಾಟದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುವ ಸಾಧ್ಯತೆ. ಮೈ, ಕೈ, ಗಂಟುನೋವು ಮುಂತಾದ ತೊಂದರೆಗಳು ಬರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದಲ್ಲಿ ಶುಭವಾಗಲಿದೆ.
ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.
ಜಪಿಸಲು:
ಸರ್ವದೇವಮಯೇ ದೇವಿ
ಸರ್ವದೇವೈ-ರಲಂಕೃತೇ |
ಮಾತರ್ಮಮಾ-ಭಿಲಷಿತಂ
ಸಫಲಂ ಕುರು ನಂದಿನಿ ||
°~•~°~•~°~•~°~•~°~•~°
ಮಿಥುನ
ಮಾಡುತ್ತಿರುವಂತಹ ಕೆಲಸ ಕಾರ್ಯ ನಿಧಾನಗತಿಯಲ್ಲಿ ಮುಂದುವರೆಯಲಿದ್ದು ಉದಾಸೀನತೆಯಿಂದಾಗಿ ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ ಸಾಧಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುವುದು. ಉದರ ಸಂಬಂಧಿ, ರಕ್ತದ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಪರಿಶ್ರಮದ ಅಗತ್ಯವಿದೆ.
ಪರಿಹಾರ
ನರಸಿಂಹನ ಆರಾಧನೆಯನ್ನು ಮಾಡಿ.
ಜಪಿಸಲು:
ದೇವತಾಕಾರ್ಯ-ಸಿದ್ಧ್ಯರ್ಥಂ
ಸಭಾಸ್ತಂಭ-ಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಂ
ನಮಾಮಿ ಋಣಮುಕ್ತಯೇ ||
°~•~°~•~°~•~°~•~°~•~°
ಕರ್ಕಾಟಕ
ವ್ಯಾವಹಾರಿಕ ಕ್ಷೇತ್ರದಲ್ಲಿ ಅನುಕೂಲತೆಗಳು ಒದಗಿಬರಲಿದೆ. ಭೂ ಸಂಬಂಧಿ ಕೆಲಸ ಮಾಡುವವರಿಗೆ ಉತ್ತಮ ಏಳಿಗೆ ಕಂಡುಬರಲಿದೆ. ವಿನಾಕಾರಣ ಖರ್ಚುವೆಚ್ಚ ಒದಗಿ ಬರಲಿದ್ದು ಜಾಗರೂಕತೆಯಿಂದ ವ್ಯವಹರಿಸಿ. ವಿನಾಕಾರಣ ಅಪವಾದಗಳು ಬರುವುದು. ದಾಂಪತ್ಯ ಜೀವನದಲ್ಲಿ ಬರುವ ಕಲಹದಿಂದಾಗಿ ಮನಶ್ಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮೈ, ಕೈ, ಗಂಟುನೋವುಗಳು, ಮಲಬದ್ಧತೆ, ಮೂತ್ರಕೋಶದಲ್ಲಿ ತೊಂದರೆ ಮುಂತಾದವು ಬರುವ ಲಕ್ಷಣಗಳಿದ್ದು ಜಾಗರೂಕತೆಯಿಂದ ಇರಬೇಕು. ಹೆಚ್ಚು ನೀರನ್ನು ಸೇವನೆ ಮಾಡಿ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಏಳಿಗೆ ಪಡೆಯುವಿರಿ.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:
°~•~°~•~°~•~°~•~°~•~°
ಸಿಂಹ
ಬಯಸಿದ ಕೆಲಸ ದೊರಕುವುದರಿಂದ ಮುನ್ನಡೆ ಸಾಧ್ಯವಾದರೂ, ಸಂಪಾದಿಸಿದ ಹಣ ವಿನಾಕಾರಣ ವೆಚ್ಚವಾಗುವುದರಿಂದ ಮನಶ್ಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ. ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ-ಭಾಗ್ಯಗಳು ಒದಗಿಬರುವುದು. ಉದರ ಸಂಬಂಧಿ ತೊಂದರೆಗಳು ಕಂಡುಬರುವ ಲಕ್ಷಣಗಳಿವೆ. ವಿದ್ಯಾರ್ಥಿಗಳು ಉದಾಸೀನತೆಯನ್ನು ಬಿಟ್ಟು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.
ಪರಿಹಾರ
ಶಿವನ ಆರಾಧನೆ ಅಗತ್ಯ.
ಜಪಿಸಲು:
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||
°~•~°~•~°~•~°~•~°~•~°
ಕನ್ಯಾ
ಕೈಗೆತ್ತಿಕೊಂಡ ಕಾರ್ಯವು ಸಫಲತೆಯನ್ನು ಕಾಣಲಿದ್ದು ಹೊಸ ಆಲೋಚನೆಗಳಿಗೆ ಮನ ಮಾಡುವಿರಿ. ನೂತನ ಗೃಹ, ವಾಹನಗಳಿಗೆ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ವಾಹನ ಪ್ರಯಾಣದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ಲಭಿಸುವುದು. ಶೀತ, ಜ್ವರ, ತಲೆನೋವು ಮುಂತಾದ ತೊಂದರೆಗಳು ಬರುವ ಲಕ್ಷಣ ಕಂಡುಬರುತ್ತದೆ. ವಿದ್ಯಾರ್ಥಿಗಳು ಆಲಸಿತನ ಬಿಟ್ಟು ಹಿರಿಯರ ಆದೇಶದಂತೆ ಶ್ರದ್ಧೆಯಿಂದ ಮುನ್ನಡೆದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಮಕ್ಕಳ ಓಡಾಟದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು.
ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ
ಜಪಿಸಲು:
ವಸುದೇವಸುತಂ ದೇವಂ
ಕಂಸಚಾಣೂರ-ಮರ್ದನಮ್ |
ದೇವಕೀ-ಪರಮಾನಂದಂ
ಕೃಷ್ಣಂ ವಂದೇ ಜಗದ್ಗುರುಮ್ ||
°~•~°~•~°~•~°~•~°~•~°
ತುಲಾ
ಉದ್ಯೋಗ, ವ್ಯವಹಾರಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರಲಿದ್ದು ಸಂತೋಷ ಅನುಭವಿಸುವಿರಿ. ಹಣಕಾಸಿನ ವಿಚಾರದಲ್ಲಿಯೂ ಏಳಿಗೆ ಲಭಿಸುತ್ತದೆ. ಸ್ನೇಹಿತರ ಆಗಮನವು ಮನಸ್ಸಂತೋಷ ಗೊಳಿಸುತ್ತದೆ. ಉತ್ತಮ ಆರೋಗ್ಯ ಪಡೆಯುವಿರಿ. ದಾಂಪತ್ಯ ಜೀವನದಲ್ಲಿ ಸುಖ,ಶಾಂತಿ ನೆಲೆಸುವುದು. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಉತ್ತಮ ಅಂಕವನ್ನು ಪಡೆದು ಗುರುಹಿರಿಯರ ಮೆಚ್ಚುಗೆಗೆ ಪಾತ್ರರಾಗುವಿರಿ.
ಪರಿಹಾರ
ದುರ್ಗಾದೇವಿಯ ಆರಾಧನೆಯಂದ ಶುಭ.
ಜಪಿಸಲು:
ಸರ್ವರೂಪಮಯೀ ದೇವೀ
ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಂ
ನಮಾಮಿ ಪರಮೇಶ್ವರೀಮ್ ||
°~•~°~•~°~•~°~•~°~•~°
ವೃಶ್ಚಿಕ
ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಡೆತಡೆಗಳಿದ್ದರೂ ನಿಮ್ಮ ಕಾರ್ಯಕ್ಷಮತೆಯಿಂದಾಗಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ. ಉತ್ತಮ ಸಂಪಾದನೆಯಾದರೂ ವಿನಾಕಾರಣ ಖರ್ಚುವೆಚ್ಚ ಒದಗಿಬರುವುದು. ಜಾಗರೂಕತೆಯಿಂದ ವ್ಯವಹರಿಸಿ. ಆರೋಗ್ಯದಲ್ಲಿ ಉತ್ತಮ ಬದಲಾವಣೆ. ಕೋಪವನ್ನು ನಿಯಂತ್ರಣದಲ್ಲಿಡಿ. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುನ್ನಡೆಯಬೇಕು.
ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.
ಜಪಿಸಲು:
ಶರಣ್ಯಂ ಸರ್ವಲೋಕಾನಾಮ್
ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ:
ಸುಬ್ರಮಣ್ಯ-ಮುಪಾಸ್ಮಹೇ ||
°~•~°~•~°~•~°~•~°~•~°
ಧನು
ಕೈಗೊಂಡ ಕೆಲಸ ಕಾರ್ಯದಲ್ಲಿ ಮುನ್ನಡೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಮಾತಿನ ಮೂಲಕವಾಗಿ ಜಗಳ ಉಂಟಾಗುವ ಸಾಧ್ಯತೆಗಳಿದ್ದು ಜಾಗರೂಕತೆಯಿಂದ ವರ್ತಿಸಿ. ವಿನಾಕಾರಣ ಖರ್ಚುವೆಚ್ಚ ಒದಗಿಬರುವುದು. ಸೇವಿಸಿದ ಆಹಾರದಿಂದಾಗಿ ಆರೋಗ್ಯ ಹದಗೆಡುವ ಲಕ್ಷಣಗಳಿದ್ದು ಆಹಾರದ ಬಗ್ಗೆ ಗಮನ ಇರಲಿ. ದಾಂಪತ್ಯ ಜೀವನದಲ್ಲಿ ಶುಭ. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ಮುಂದುವರಿದಲ್ಲಿ ಏಳಿಗೆ ಲಭ್ಯವಾಗಲಿದೆ. ಹಿರಿಯರ ಆದೇಶದಂತೆ ಮುಂದುವರಿಯಿರಿ, ಹಿರಿಯರನ್ನು ಗೌರವಿಸಿ.
ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು ಪಡೆಯಿರಿ.
ಜಪಿಸಲು:
ಅಖಂಡಮಂಡಲಾಕಾರಂ
ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ
ತಸ್ಮೈ ಶ್ರೀಗುರವೇ ನಮಃ ||
°~•~°~•~°~•~°~•~°~•~°
ಮಕರ
ಮಾಡುತ್ತಿರುವಂತಹ ಕೆಲಸದಲ್ಲಿ ಹಿನ್ನಡೆ ಕಂಡು ಬರಲಿದ್ದು ಮನಶ್ಶಾಂತಿ ಕಳೆದುಕೊಳ್ಳುವಿರಿ. ಆರ್ಥಿಕ ಏಳಿಗೆ ಕಾಣುವಿರಿ. ಕುಟುಂಬದಲ್ಲಿ ಶಾಂತಿ ನೆಲೆಸುವುದು. ಶ್ವಾಸ ಸಂಬಂಧಿ ತೊಂದರೆ, ಅಲರ್ಜಿಗಳು, ಮೈ-ಕೈ ನೋವು ಮುಂತಾದವು ಬರುವಂತಹ ಲಕ್ಷಣಗಳಿವೆ. ದಾಂಪತ್ಯ ಜೀವನದಲ್ಲಿ ಸುಖ. ಭೂಲಾಭ, ವಾಹನಲಾಭ. ಭೂಸಂಬಂಧಿ ಕಾರ್ಯದಲ್ಲಿ ತೊಡಗಿರುವವರಿಗೆ ಲಾಭ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುನ್ನಡೆಯಬೇಕು.
ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.
ಜಪಿಸಲು:
ಶುದ್ಧಸ್ಫಟಿಕ-ಸಂಕಾಶಂ
ಶುದ್ಧವಿದ್ಯಾ-ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ
ಸದಾಶಿವಮಹಂ ಭಜೇ ||
°~•~°~•~°~•~°~•~°~•~°
ಕುಂಭ
ಕೆಲಸ ಕಾರ್ಯಗಳಲ್ಲಿ ಅತ್ಯುತ್ತಮ ಏಳಿಗೆ ಕಂಡುಬರಲಿದೆ. ಆರ್ಥಿಕವಾಗಿಯೂ ಮುನ್ನಡೆ ಸಾಧಿಸುತ್ತೀರಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಹಣ ವಿನಿಯೋಗಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಕಲಹಗಳನ್ನು ಎದುರಿಸಬೇಕಾಗುತ್ತದೆ. ಶೀತ, ಜ್ವರ, ತಲೆನೋವು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆಹಾರದ ಬಗ್ಗೆ ನಿಗಾ ಇರಲಿ. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಮಾತ್ರ ಮೇಲೆ ಬರಲು ಸಾಧ್ಯ.
ಪರಿಹಾರ
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.
ಜಪಿಸಲು:
ಅಂಜನಾಗರ್ಭ-ಸಂಭೂತ
ಕಪೀಂದ್ರ-ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ
ಹನುಮಾನ್ ರಕ್ಷ ಮಾಂ ಸದಾ ||
°~•~°~•~°~•~°~•~°~•~°
ಮೀನ
ವ್ಯಾವಹಾರಿಕ ಮುನ್ನಡೆ ಕಂಡುಬಂದರೂ ಮನಶ್ಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಹಣಕಾಸಿನ ಅಭಿವೃದ್ಧಿಯಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಗೊಳ್ಳುವುದು. ಮಕ್ಕಳ ದೂರ ಪ್ರಯಾಣವು ಮನಸಿಗೆ ದುಃಖ ನೀಡುವುದು. ಉದರ ಸಂಬಂಧಿ, ಅಲರ್ಜಿಗಳು ಬರುವಂತಹ ಲಕ್ಷಣಗಳಿದ್ದು ಜಾಗರೂಕರಾಗಿರಬೇಕು. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳಿಗೆ ಉತ್ತಮ ಏಳಿಗೆ ಕಂಡುಬರಲಿದೆ.
ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.
ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ / ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ
°~•~°~•~°~•~°~•~°~•~°
{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}