ಗುರುವಿನೆಡೆಗೆ ಅವನ ನಡಿಗೆ

ಯಜ್ಞಕ್ಕೆಂದು ಕರೆದನವ ಭೂಮಿಯನ್ನು. ಸಸ್ಯಕ್ಕೆಂದು ಸ್ವರ್ಗವನ್ನು ಕರೆದ ಇಂದ್ರ. ಸಂಪತ್ತಿನ ವಿನಿಮಯದಿಂದ ಇಬ್ಬರೂ ಎರಡು ಭುವನಗಳನ್ನೂ ಪೋಷಿಸಿದರು.   ರಕ್ಷಕನಾದ ಅವನ ಯಶಸ್ಸನ್ನು ಕದಿಯಲಾಗಲಿಲ್ಲ ದೊರೆಗಳಿಗೆ. ಯಾಕೆಂದರೆ ಪರಸ್ವತ್ತುಗಳಿಂದ ಹಿಂದಿರುಗಿದ ಕಳ್ಳತನ ಶಬ್ದವಾಗಿ ಮಾತ್ರ ಉಳಿದಿತ್ತು.   ಸಜ್ಜನನಾದವ ದ್ವೇಷಿಯಾದರೂ ಅವನಿಗೆ ಸಮ್ಮತನಾಗಿದ್ದ. ರೋಗಿಗೆ ಔಷಧದಂತೆ. ದುಷ್ಟ ಪ್ರಿಯನಾಗಿದ್ದರೂ ತ್ಯಾಜ್ಯನಾಗಿದ್ದ ಅವನಿಗೆ. ಹಾವು ಕಡಿದ ಬೆರಳಿನಂತೆ.   ಸೃಷ್ಟಿಕರ್ತ ಮಹಾಭೂತಗಳಿಂದ ಅವನನ್ನು ಸೃಷ್ಟಿಸಿದ್ದನಷ್ಟೇ. ಹಾಗಾಗಿ ಅವನ ಗುಣಗಳೆಲ್ಲವೂ ಬೇರೆಯವರಿಗೆ ಅನುಕೂಲ ಒದಗಿಸಲೆಂದೇ ಇದ್ದವು.   ಸಮುದ್ರ ತೀರವೇ […]

Continue Reading

ಅವನೊಬ್ಬನೇ ಅವನಂಥವನು

ವೈವಸ್ವತ ಮನು ಎಂದೊಬ್ಬನಿದ್ದ. ಮನೀಷಿಗಳಿಗೆ ಮಾನನೀಯ ಆತ. ರಾಜರೆಲ್ಲರಿಗೆ ಮೊದಲಿಗ. ವೇದಗಳಿಗೆ ಪ್ರಣವವಿದ್ದಂತೆ ಇದ್ದನವ.   ಅವನ ಶುದ್ಧವಾದ ವಂಶದಲ್ಲಿ ಜನಿಸಿದ‌ ದಿಲೀಪ. ಕ್ಷೀರಸಾಗರದಲ್ಲಿ ಚಂದ್ರ ಉದಿಸಿ ಬಂದಂತೆ. ಶುದ್ಧರಲ್ಲೇ ಶುದ್ಧನವ. ರಾಜರಲ್ಲಿ ಚಂದ್ರನವ.   ವಿಶಾಲವಾದ ಎದೆಯವ. ವೃಷಭದಂಥ ಹೆಗಲಿನವ. ಶಾಲವೃಕ್ಷದಂತೆ ಎತ್ತರದವ. ಮಹಾಭುಜದವ. ತನ್ನ ಕಾರ್ಯಕ್ಕೆ ಅನುಗುಣವಾದ ದೇಹವಿರುವವ. ಕ್ಷಾತ್ತ್ರಧರ್ಮವೇ ಆಶ್ರಯಿಸಿಕೊಂಡಂತೆ ಇರುವವ.   ಎಲ್ಲರನ್ನೂ ಮೀರಿದ ಬಲ ಅವನದಾಗಿತ್ತು. ಎಲ್ಲ ಜೀವಿಗಳನ್ನು ತನ್ನ ತೇಜಸ್ಸಿನಿಂದ ಮೀರಿ ನಿಂತಿದ್ದನಾತ. ಎಲ್ಲರಿಗಿಂತ ಎತ್ತರದ ವ್ಯಕ್ತಿತ್ವದಿಂದ ಭೂಮಿಯನ್ನೇ […]

Continue Reading

ತಪ್ಪು ಮಾಡಿದವ ಯಮನಾದರೂ ಅಷ್ಟೇ!

ಕಾಲವನ್ನು ನಿರೀಕ್ಷಿಸುತ್ತಿದ್ದ ಸತ್ಯವತಿ ಒಂದು ದಿನ ಅಂಬಾಲಿಕೆಯ ಬಳಿ ಹೋದಳು. ಅಂಬಿಕೆಯ ಜೊತೆಗಿನ ಮಾತುಕತೆಯ ಪುನರಾವರ್ತನೆಯಾಯಿತು. ನಿಯೋಗದಿಂದ ಮಗುವನ್ನು ಪಡೆಯುವ ಮಾತು. ಅಂಬಾಲಿಕೆ ಒಪ್ಪಲ್ಲಿಲ್ಲ. ಸತ್ಯವತಿ ಬಿಡಲಿಲ್ಲ. ಧರ್ಮದ ಮಾತುಗಳು, ಹಳೆಯ ನಿದರ್ಶನಗಳು, ತರ್ಕಗಳು ಪರಸ್ಪರ ವಿನಿಮಯಗೊಂಡವು. ಕೊನೆಗೆ ಅಂಬಾಲಿಕೆ ತಲೆಬಾಗಿದಳು. ಸತ್ಯವತಿ ಸಂತಸಗೊಂಡಳು. ವ್ಯಾಸರನ್ನು ಆಹ್ವಾನಿಸಿದಳು.   ವ್ಯಾಸರು ಬಂದರು. ಅಂಬಾಲಿಕೆಯ ಶಯನಮಂದಿರವನ್ನು ಪ್ರವೇಶಿಸಿದರು. ವ್ಯಾಸರನ್ನು ಕಂಡ ಅಂಬಾಲಿಕೆ ಅಂಬಿಕೆಯಂತೆಯೇ ಭಯಗೊಂಡಳು. ನಡುಗಿದಳು, ಶರೀರವು ಬೆವರಿತು, ಬಿಳುಪೇರಿತು, ಬಿಳುಚಿಗೊಂಡಳು. ನಿರ್ವಿಕಾರಚಿತ್ತದಿಂದ ವ್ಯಾಸರು ಮಗುವನ್ನು ಅನುಗ್ರಹಿಸಿದರು. ಮುಂದಾಗುವುದನ್ನು […]

Continue Reading