ಮೊದಲ ಮಳೆ

ದುಂಡನೆಯ ಬೆವರ ಹನಿಯೊಂದು ಹಣೆಯ ಮೇಲಿಂದ ಸರ್ರನೇ ಜಾರಿ, ಕಣ್ರೆಪ್ಪೆಯ ತುದಿಯಿಂದ ಜೋತು, ಕಣ್ಣೊಳಗೇ ಇಳಿದು ಒಂದು ಕ್ಷಣ ಅವನ ದೃಷ್ಟಿಯನ್ನು ಮಂಜಾಗಿಸಿತ್ತು. ಚಿಗುರು ಮೀಸೆಯ ಮೇಲೆಲ್ಲ ಸಾಲುಗಟ್ಟಿ ನಿಂತ ಬೆವರ ಹನಿಗಳು ಆಗೊಮ್ಮೆ ಈಗೊಮ್ಮೆ ತುಟಿಯ ಮೇಲಿಳಿದು ಉಗುಳನ್ನು ಉಪ್ಪಾಗಿಸುತ್ತಿದ್ದವು. ಎಲೆಗಳಿಲ್ಲದೇ ಬೆತ್ತಲಾಗಿರುವ ಮನೆಯ ಮುಂದಿನ ಮಾಮರಗಳು ಅಲುಗಾಟವಿಲ್ಲದೇ ಮಂಕಾಗಿ ನಿಂತಿದ್ದವು. ಆರಾಮ ಕುರ್ಚಿಯಲ್ಲಿ ಬುಸ್ಸೆಂದು ಪವಡಿಸಿದ ಅಪ್ಪ ಬೀಸಣಿಗೆಯನ್ನು ಬೀಸಿಕೊಳ್ಳುತ್ತಾ “ಅಬ್ಬಾ, ಉರಿಯೇ!” ಎಂದು ತನಗೆ ತಾನೇ ಗೊಣಗಿಕೊಳ್ಳುತ್ತಿದ್ದರು. ಮುಂಬಾಗಿಲ ಬಳಿ ತೋರಣದಂತೆ ಬೆಳೆದು […]

Continue Reading

ಘಟನೆಗಳ ಘೋಷಯಾತ್ರೆ

ದಿನ ಬೆಳಗಾದರೆ ಸಂಜೆಯವರೆಗೆ ನಮ್ಮ ಕಣ್ಣ ಮುಂದೆ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ. ಆ ದಿನ ನಾವೆಷ್ಟು ನಿರತರಾಗಿರಬೇಕು, ಏನೇನು ಮಾಡಬೇಕು, ಎಷ್ಟು ರೇಗಾಡಬೇಕು, ಎಷ್ಟು ನಲಿದಾಡಬೇಕು, ಯಾರ್ಯಾರನ್ನು ಸಂಧಿಸಬೇಕು, ಯಾವಾಗ ಉಣಬೇಕು, ಯಾವಾಗ ಮಲಗಬೇಕು, ಎಲ್ಲವನ್ನೂ ಸಾಲು ಸಾಲಾಗಿ ನಡೆದು ಹೋಗುವ ಘಟನೆಗಳೇ ನಿರ್ಧರಿಸುತ್ತವೆ! ಜೀವನದುದ್ದಕ್ಕೂ ನಮ್ಮ ಕಣ್ಣ ಮುಂದೆ ನಡೆದು ಹೋಗುವ ಘಟನೆಗಳಿಗೆ ನಾವು ಯಾವ ರೀತಿಯಲ್ಲಿ ಸ್ಪಂದಿಸುತ್ತೇವೆ, ಅವು ನಮ್ಮ ಮನಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಮೇಲೆಯೇ ನಮ್ಮ […]

Continue Reading

ಎಲ್ಲಿಂದಲೋ ಬಂದವನು

ಪಡಸಾಲೆಯಲ್ಲಿರುವ ಹಳೆಯದಾದ ತನ್ನ ಮರದ ಕುರ್ಚಿಯ ಮೇಲೆ ಕುಳಿತು ಪಂಚಾಂಗ ಪುಸ್ತಕದ ಪುಟಗಳನ್ನು ತಿರುವುತ್ತಿದ್ದರು ಶಾಸ್ತ್ರಿಗಳು. ಹೆಗಲ ಮೇಲೆ ಇಳಿ ಬಿಟ್ಟಿದ್ದ ಕರವಸ್ತ್ರವನ್ನು ಆಗಾಗ್ಗೆ ಕೈಯಲ್ಲೆತ್ತಿ ಬೀಸಿಕೊಳ್ಳುತ್ತಾ, ತಲೆಯ ಮೇಲೆ ನಿಧಾನವಾಗಿ ಸುತ್ತುತ್ತಿದ್ದ ಫ್ಯಾನ್ ಕಡೆ ದೃಷ್ಟಿ ಹಾಯಿಸಿ ಬೆವರೊರೆಸಿಕೊಳ್ಳುತ್ತಿದ್ದರು ಅವರು. ಸಂಕ್ರಾಂತಿಗಿನ್ನೂ ಹದಿನೈದು ದಿನಗಳಿವೆ. ಆಗಲೇ ಬಿಸಿಲ ಕಾವು ಅದೆಷ್ಟು ಏರುತ್ತಿದೆ! ಅಂಗಳದತ್ತ ದೃಷ್ಟಿ ಹಾಯಿಸಿ ಯೋಚಿಸುತ್ತಲೇ ಇದ್ದರು ಶಾಸ್ತ್ರಿಗಳು.   ಕಳೆದ ವಾರ ಬಂದ ಜ್ವರದ ಆಯಾಸ ಇನ್ನೂ ಅವರನ್ನು ಬಿಟ್ಟು ಹೋಗಿರಲಿಲ್ಲ. ಅಂಗಳದಲ್ಲಿ […]

Continue Reading

ಸಾವಿನೊಳಗೊಂದು ಜೀವನದ ಕಲ್ಪನೆ

ಅವನು ಮರಣಶಯ್ಯೆಯಲ್ಲಿ ಮಲಗಿದ್ದನು. ಘಳಿಗೆ ಘಳಿಗೆಗೂ ಅದಾವುದೋ ಒಂದು ಶೀತಲ ಹೊದಿಕೆಯು ಅವನನ್ನು ಆವರಿಸಿ ಬರುತ್ತಿತ್ತು. ಕಣ್ಣ ಮುಂದೆಲ್ಲ ಬರೀ ಕತ್ತಲು. ಗೋಡೆಯ ಮೇಲಿರುವ ಗಡಿಯಾರವು ಅದಾವುದೋ ಒಂದು ನಿಶ್ಚಿತ ಘಳಿಗೆಯೆಡೆಗೆ ಮುನ್ನುಗ್ಗುತ್ತಿರುವಂತೆ ಟಿಕ್ ಟಿಕ್ ಎಂದು ಸದ್ದು ಮಾಡುತ್ತಲೇ ಇತ್ತು. ಸುತ್ತಲೂ ಕುಳಿತು ಗೋಳೋ ಎಂದು ಅಳುತ್ತಿದ್ದರು ಅವನ ಮನೆಯ ಮಂದಿ. “ಅಷ್ಟಕ್ಕೂ ಸತ್ಹೋಗೋ ಪ್ರಾಯ ಎಲ್ಲಿ ಆಗಿತ್ತು ಇವನಿಗೆ? ಮದುವೆಯ ಪ್ರಾಯ ಆಗಿ ನಿಂತಿದ್ದಾಳೆ ಮಗಳು. ಇರೋ ಒಬ್ಬನೇ ಮಗ. ಇನ್ನೂ ತನ್ನ ಕಾಲ […]

Continue Reading

ಗುಬ್ಬಚ್ಚಿ ಕಂಡ ಲೋಕ

ನಾನೊಂದು ಗುಬ್ಬಚ್ಚಿ. ಅದೋ, ಆ ಗುಡಿಸಲ ಸೂರಿನ ಸಂದಿಯಲ್ಲಿಯೇ ನನ್ನ ವಾಸ. ಈಗಲೂ ನೆನಪಿದೆ ನನಗೆ, ಅದೇ ಗುಡಿಸಲಿನ ಸೂರಿನೆಡೆಯಲ್ಲಿನ ಪುಟ್ಟ ಗೂಡಿನಲ್ಲಿ ಮೊಟ್ಟೆಯಿಂದ ಬಿರಿದೆದ್ದು ಮೊತ್ತ ಮೊದಲ ಬಾರಿಗೆ ಈ ಪ್ರಪಂಚವನ್ನು ನಾ ಕಂಡ ಆ ಕ್ಷಣ. ಮನೆಯೊಳಗೆ ಯಾರೂ ಇಲ್ಲದ ಸಮಯವನ್ನು ನೋಡಿ, ಭತ್ತದ ಮೂಟೆಯನ್ನು ಕುಕ್ಕಿ, ಅದರೊಳಗಿನ ಭತ್ತವನ್ನು ತಂದು ನನ್ನ ಬಾಯೊಳಗಿಡುತ್ತಿದ್ದಳು ಅಂದು ಅಮ್ಮ. ಒಂದು ದಿನ, ಅದು ಹೇಗೋ ಆ ದೃಶ್ಯವನ್ನು ಕಂಡನು ಆ ಮನೆಯ ಪುಟ್ಟ ಪೋರ. ಚಪ್ಪಾಳೆ […]

Continue Reading

ದೊಡ್ಡ ಗೌಡರ ಆಲದ ಮರವೂ, ಪಾರಿವಾಳವೂ

ಭುರ್ರ್..ರ್..ರ್..! ಅಬ್ಬಾ…ಸಂಜೆಗೆಂಪಿನ ಬಾನಂಗಳದಲ್ಲಿ ಕಪ್ಪು ಚುಕ್ಕೆಗಳ ಚಿತ್ರ ವಿಸ್ಮಯವೇ! ಸಂಜೆಯಾಯಿತೆಂದರೆ, ಆ ಪಾರಿವಾಳಗಳ ಸಮೂಹ ನರ್ತನವನ್ನು ನೋಡಲೆಂದೇ ಬಂದು ಸೇರುವರು ಅಲ್ಲಿ ಊರ ಜನರು. ಪಿಚಕಾರಿಯಂತೆ ಚಿಮ್ಮುವ ಸಾಗರದ ಅಲೆಗಳಂತೆ ಒಮ್ಮೆಲೇ ಬಾನೆತ್ತರಕ್ಕೆ ಏರಿ ಹರಡುವ ಪಕ್ಷಿ ಸಮೂಹವು, ಸಾಗರ ಮಧ್ಯಕ್ಕೆ ಇಳಿದು ಜಾರಿ ಶಾಂತವಾಗುವ ತೆರೆಗಳಂತೆ ಒಮ್ಮೆಲೇ ದೊಡ್ಡಗೌಡರ ಮನೆಯ ಮುಂದಿನ ಆ ಆಲದ ಮರದ ಮೇಲಿಳಿದು ಸುಮ್ಮನಾಗುತ್ತವೆ. ಪಾರಿವಾಳಗಳು ಬಾನೆತ್ತರಕ್ಕೆ ಏರಿದಂತೆಯೇ ನೆರೆದ ಜನರ ಹರ್ಷೋದ್ಗಾರವೂ ಮುಗಿಲು ಮುಟ್ಟುತ್ತದೆ. ಆ ಊರ ಜನರಿಗೆ ಅವು […]

Continue Reading

ಯೋಗಿ ಕಂಡ ಕನಸು

ವರುಷಗಳಿಂದ ಹಿಮಾಲಯದ ಆ ಚಳಿಯಲ್ಲಿ ಧ್ಯಾನಾಸಕ್ತನಾಗಿ ಹೆಪ್ಪುಗಟ್ಟಿ ಕುಳಿತಿದ್ದ ಯೋಗಿಗೊಂದು ಕನಸು ಬಿತ್ತು. ಆ ಕನಸಿನಲ್ಲಿ ಆತ ಕಂಡಿದ್ದು ದಟ್ಟ ಹಸಿರಿನಿಂದ ತುಂಬಿ ಕಂಗೊಳಿಸುವ ಪ್ರಶಾಂತವಾದ ಒಂದು ಲೋಕ. ಅಲ್ಲಿ ಫಲ ಬಿಡದ ಮಾಮರಗಳಿಲ್ಲ. ಪ್ರತಿಯೊಂದು ಹುಲ್ಲು ಕಡ್ಡಿಗಳಲ್ಲೂ ಹೂವುಗಳು ಅರಳಿ ನಿಂತಿವೆ. ಯಥೇಚ್ಛವಾಗಿ ಹರಿದು ಸಾಗರ ಸೇರುವ ತೊರೆ ನದಿಗಳಲ್ಲಿ ಕಲ್ಮಶವು ಲವಲೇಶವೂ ಇಲ್ಲ. ತಪೋವನ ತುಲ್ಯವಾದ ಆ ಪ್ರದೇಶದಲ್ಲಿ ಹೊಗೆಯಾಡುವ ಗುಡಿಸಲುಗಳೂ ಕಾಣಸಿಗುತ್ತವೆ ಅಲ್ಲಲ್ಲಿ. ಆ ಗುಡಿಸಲುಗಳ ಸುತ್ತ ಹರಡಿ ನಿಂತಿರುವ ವಿಶಾಲ ಹೊಲಗದ್ದೆಗಳಲ್ಲಿ […]

Continue Reading

ಎಲ್ಲರೊಳಗೂ ಇರುವ ಭಗವಂತ

ಝೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಋತ್ವಿಕ್ ಎಂಬ ಹೆಸರಿನ ಅಪ್ರತಿಮ ಗಾಯಕನೊಬ್ಬನಿದ್ದಾನೆ. ಅವನ ಹೆಸರನ್ನು ಇಲ್ಲಿ ಹೇಳುವುದಕ್ಕೊಂದು ಕಾರಣವಿದೆ.  ಸ್ಪರ್ಧೆಯಲ್ಲಿರುವ ಉಳಿದ ಗಾಯಕರು ಕಾಣುವ ಈ ಲೋಕವನ್ನು ಅವನು ಕಾಣುವುದೇ ಇಲ್ಲ. ಹುಟ್ಟಿನಿಂದ ಕುರುಡನಾಗಿರುವ ಆತ ನಮ್ಮ ನಿಮ್ಮ ನಡುವೆಯೇ ಇದ್ದರೂ ಜೀವಿಸುತ್ತಿರುವುದು ನಾದಲೋಕದಲ್ಲಿ. ಅವನು ಹಾಡುತ್ತಿರಬೇಕಾದರೆ, ಸುತ್ತಲೂ ಕುಳಿತು ತಲೆದೂಗುವ ಪ್ರೇಕ್ಷಕರ ಚಪ್ಪಾಳೆಗಳು, ನಿರ್ಣಾಯಕರಾಗಿ ಕುಳಿತ ಮಹಾನುಭಾವರ ಬಿಚ್ಚು ನುಡಿಗಳು ಅವನ ಕಿವಿಗಳಿಗೆ ಕೇಳಿಸುತ್ತವೆಯೇ ಹೊರತು, ಆ ಹಾಡಿಗೆ ಮೈಮರೆತು ತಲೆದೂಗುವ ಅವರ ಭಾವಾಭಿವ್ಯಕ್ತಿಯು […]

Continue Reading

ನಕ್ಷತ್ರಗಳ ಕಥೆ

ಕಿಟಕಿಯಾಚೆ ಆಗಸದಲ್ಲಿ ಮಿನುಗುವ ಕೋಟಿ ನಕ್ಷತ್ರಗಳನ್ನು ನೋಡುತ್ತಾ ಮಗುವೊಂದು ತಾಯಿಯಲ್ಲಿ ಪ್ರಶ್ನಿಸುತ್ತಿತ್ತು, “ಅಮ್ಮಾ, ನಕ್ಷತ್ರಗಳೇಕೆ ಮಿನುಗುತ್ತವೆ?” ತಾಯಿ ಉತ್ತರಿಸಿದಳು, “ಮಗನೇ, ನಕ್ಷತ್ರಗಳು ಮಿನುಗುವುದಿಲ್ಲ. ಅವು ನಿರಂತರವಾಗಿ ನಾನಾ ಬಗೆಯ ಕಿರಣಗಳನ್ನು ಹೊರಡಿಸುತ್ತಲೇ ಇರುತ್ತವೆ‌. ಆ ಕಿರಣಗಳು ಭೂಮಿಯ ಗುರುತ್ವಾಕರ್ಷಣ ಮಂಡಲವನ್ನು ಪ್ರವೇಶಿಸುವಾಗ ಛಿದ್ರವಾಗುತ್ತವೆ. ಆ ರೀತಿಯಲ್ಲಿ ಕಿರಣಗಳು ಛಿದ್ರವಾಗುವುದರಿಂದಲೇ ನಮ್ಮ ಕಣ್ಣಿಗದು ಮಿನುಗಿದಂತೆ ಗೋಚರಿಸುತ್ತದೆ.”   “ನಕ್ಷತ್ರಗಳೇಕೆ ಕಿರಣಗಳನ್ನು ಹೊರಡಿಸುತ್ತವೆ?” ಮತ್ತೆ ಕುತೂಹಲದಿಂದಲೇ ಪ್ರಶ್ನಿಸಿತು ಮಗು. ತಾಯಿ ತಾಳ್ಮೆಯಿಂದಲೇ ಉತ್ತರಿಸಿದಳು. “ಮಗೂ ಈ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ […]

Continue Reading

ಮುಸ್ಸಂಜೆ

ಅದೊಂದು ಕಡಲ ಕಿನಾರೆ. ಎಡೆಬಿಡದೆ ಬೀಸಿ ಬರುವ ತಂಗಾಳಿ, ಆ ಗಾಳಿಯೊಡನೆ ತೇಲಿ ಸಾಗಿ ಬಾನಂಚಿನಲ್ಲಿ ಮರೆಯಾಗುವ ಪಕ್ಷಿಗಳು, ಮೊರೆಯಿಟ್ಟು ದಡಕ್ಕಪ್ಪಳಿಸುವ ಬೆಳ್ನೊರೆಯ ತೆರೆಗಳು. ಇವೆಲ್ಲದರ ನಡುವೆ ಪಡುವಣ ದಿಕ್ಕಿನಲ್ಲಿ ಕೆಂಪಡರಿ ಕಣ್ಮರೆಯಾಗುವ ಸಂಧ್ಯಾ ಸೂರ್ಯನಂತೆ, ನಿತ್ಯವೂ ಅವರೀರ್ವರೂ ಅಲ್ಲಿ ಬಂದೇ ಬರುವರು. ಭೋರಿಡುವ ತೆರೆಗಳಪ್ಪಳಿಸುವ ಕಾರ್ಗಲ್ಲ ಕಿನಾರೆಯಲ್ಲೊಂದು ಪುಟ್ಟ ದೇಗುಲ. ದೇಗುಲದಿಂದ ಅನತಿ ದೂರದಲ್ಲೊಂದು ಸಕಲ ಸೌಲಭ್ಯಗಳಿರುವ ಹೈಟೆಕ್ ವೃದ್ಧಾಶ್ರಮ. ದೇಗುಲದಲ್ಲಿ ಅಪರಾಹ್ನದ ಮೊದಲ ಗಂಟೆ ಬಾರಿಸುವ ಹೊತ್ತು ಅವರೀರ್ವರೂ ಆ ವೃದ್ಧಾಶ್ರಮದಿಂದ ಹೊರಕ್ಕೆ ಅಡಿಯಿಡುವರು. […]

Continue Reading