ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಕೃಷ್ಣ ಪಕ್ಷ / ಷಷ್ಟಿ ತಿಥಿ /
ಶನಿವಾರ / ಹಸ್ತಾ ನಕ್ಷತ್ರ /
ದಿನಾಂಕ: 26.01.2019
°~•~°~•~°~•~°~•~°~•~°
ಮೇಷ
ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ತೊಂದರೆಗಳು ಕಂಡು ಬರುತ್ತದೆ. ಆರ್ಥಿಕವಾದ ಹಿನ್ನಡೆಯಿಂದಾಗಿ ಮನಃಶಾಂತಿ ಕಳೆದುಕೊಳ್ಳುತ್ತೀರಿ. ಶೀತ, ಜ್ವರ, ಅಲರ್ಜಿಗಳು ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಮುನ್ನಡೆ.
ಪರಿಹಾರ:
ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ ||
°~•~°~•~°~•~°~•~°~•~°
ವೃಷಭ
ನಿಮ್ಮ ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಕಾಣುವಿರಿ. ಆರ್ಥಿಕವಾಗಿ ಸಣ್ಣ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಕಲಹ. ದಾಂಪತ್ಯ ಜೀವನದಲ್ಲಿ ಸುಖ ಅನುಭವಿಸುತ್ತೀರಿ. ಆರೋಗ್ಯದಲ್ಲಿ ಮುನ್ನಡೆ. ಉತ್ತಮವಾದ ಮನಃಶಾಂತಿ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮವಾದ ಫಲ ಲಭ್ಯವಿದೆ.
ಪರಿಹಾರ
ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:
°~•~°~•~°~•~°~•~°~•~°
ಮಿಥುನ
ವ್ಯಾವಹಾರಿಕ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದ್ದು ಉತ್ತಮವಾದ ಕಾರ್ಯವೈಖರಿಯಿಂದ ಹಿರಿಯ ಅಧಿಕಾರಿಗಳನ್ನು ಮೆಚ್ಚಿಸುವಿರಿ. ಆರ್ಥಿಕ ಮುನ್ನಡೆ ಕಂಡುಬರುತ್ತದೆ. ಮನಃಶಾಂತಿ ಪಡೆಯುವಿರಿ. ಮಾನಸಿಕ ಗೊಂದಲ ನಿವಾರಣೆ ಆಗುವುದು. ವಾಹನ ಲಾಭ, ಭೂಲಾಭ ಮುಂತಾದ ಶುಭ ಲಕ್ಷಣ ಕಾಣುವುದು. ದಾಂಪತ್ಯದಲ್ಲಿ ಸಣ್ಣ ಕಲಹಗಳು ಏರ್ಪಡುತ್ತವೆ. ಜೀರ್ಣ, ಶ್ವಾಸ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುಂದುವರೆದಲ್ಲಿ ಏಳಿಗೆ ಇದೆ.
ಪರಿಹಾರ
ಶ್ರೀಕೃಷ್ಣನ ಆರಾಧನೆಯಿಂದ ಶುಭ.
ಜಪಿಸಲು:
ವಸುದೇವಸುತಂ ದೇವಂ
ಕಂಸಚಾಣೂರಮರ್ದನಮ್|
ದೇವಕೀಪರಮಾನನ್ದಂ
ಕೃಷ್ಣಂ ವನ್ದೇ ಜಗದ್ಗುರುಮ್ ||
°~•~°~•~°~•~°~•~°~•~°
ಕರ್ಕಾಟಕ
ವ್ಯಾವಹಾರಿಕ ಕ್ಷೇತ್ರದಲ್ಲಿ ಹಿರಿಯರಿಂದ ಸಹಾಯ ಒದಗಿ ಬರುವುದು. ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ. ಸಹೋದರರಿಂದ ಧನಲಾಭ. ಕುಟುಂಬದಲ್ಲಿ ವೈಮನಸ್ಸು ತೋರುವುದು. ದಾಂಪತ್ಯದಲ್ಲಿ ನಿಧಾನಗತಿಯ ಮುನ್ನಡೆ. ಆರೋಗ್ಯದಲ್ಲಿ ಮೈಕೈ ಗಂಟು ನೋವುಗಳು, ಮಲಬದ್ಧತೆ, ನರ ಸಂಬಂಧಿ ತೊಂದರೆ ಮುಂತಾದ ಕಾಯಿಲೆಗಳು ಬರುವ ಲಕ್ಷಣ ಇದೆ. ವಿದ್ಯಾರ್ಥಿಗಳಿಗೆ ಮುನ್ನಡೆ. ಹಿರಿಯರನ್ನು ಗೌರವಿಸಿ.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ
ದುರ್ಗೇದೇವಿ ನಮೋಸ್ತುತೇ ||
°~•~°~•~°~•~°~•~°~•~°
ಸಿಂಹ
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಮುನ್ನಡೆ. ಆರ್ಥಿಕವಾಗಿ ಏಳಿಗೆ ಕಂಡುಬರುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಗೊಳ್ಳುತ್ತದೆ. ಉದರ ಸಂಬಂಧಿ ತೊಂದರೆಗಳು, ತಲೆನೋವು, ಮಂಡಿ ನೋವು ಬರುವ ಲಕ್ಷಣಗಳಿದ್ದು ಆಹಾರದ ಬಗ್ಗೆ ನಿಗಾ ಇರಲಿ. ದಾಂಪತ್ಯದಲ್ಲಿ ಸುಖ. ವಿದ್ಯಾರ್ಥಿಗಳಿಗೆ ಉತ್ತಮ ಏಳಿಗೆ ಕಂಡುಬರುತ್ತದೆ.
ಪರಿಹಾರ
ಶಿವನ ಆರಾಧನೆ ಅಗತ್ಯ.
ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ
°~•~°~•~°~•~°~•~°~•~°
ಕನ್ಯಾ
ವ್ಯವಹಾರಿಕವಾಗಿ ಉತ್ತಮ ಮುನ್ನಡೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಮುನ್ನಡೆ. ಮನಃಶಾಂತಿ ಕಳೆದುಕೊಳ್ಳುವಿರಿ. ಆರೋಗ್ಯದಲ್ಲಿ ನಿಧಾನಗತಿಯ ಮುನ್ನಡೆ. ಕುಟುಂಬದಲ್ಲಿ ಕಲಹಗಳನ್ನು ಎದುರಿಸಬೇಕಾದೀತು. ದಾಂಪತ್ಯ ಜೀವನದಲ್ಲಿ ಸಣ್ಣ ಅಡೆತಡೆಗಳು ಕಂಡುಬರುವುದು. ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮದಿಂದ ಉತ್ತಮ ಫಲ ಲಭ್ಯ.
ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ ಶುಭ.
ಜಪಿಸಲು:
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ|
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||
°~•~°~•~°~•~°~•~°~•~°
ತುಲಾ
ವ್ಯವಹಾರಿಕ ಕ್ಷೇತ್ರದಲ್ಲಿ ಹಿನ್ನಡೆ ಕಂಡುಬರುವುದು. ಇದರಿಂದಾಗಿ ಮನಶ್ಶಾಂತಿ ಕಳೆದುಕೊಳ್ಳುತ್ತೀರಿ. ಆರ್ಥಿಕ ಮುನ್ನಡೆ. ಕುಟುಂಬದಲ್ಲಿ ಹೊಸ ಆಲೋಚನೆಗಳು ಎದ್ದುಕಾಣುವುದು. ಆರೋಗ್ಯದಲ್ಲಿ ನಿಧಾನಗತಿಯ ಮುನ್ನಡೆ. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳಿಗೆ ಮುನ್ನಡೆ.
ಪರಿಹಾರ
ದುರ್ಗಾದೇವಿಯ ಆರಾಧನೆಯಂದ ಶುಭ.
ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀ ಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ
°~•~°~•~°~•~°~•~°~•~°
ವೃಶ್ಚಿಕ
ಉದ್ಯೋಗ ಕ್ಷೇತ್ರದಲ್ಲಿ ನಿಧಾನಗತಿಯ ಮುನ್ನಡೆ ಇದ್ದರೂ ಕೂಡ ಅಧಿಕಲಾಭವನ್ನು ಗಳಿಸುತ್ತೀರಿ. ಮನಶ್ಶಾಂತಿ ದೊರೆಯುವುದು. ಆರ್ಥಿಕವಾಗಿ ಉತ್ತಮ ಮುನ್ನಡೆ ಕಾಣುವಿರಿ. ದಾಂಪತ್ಯ ಜೀವನದಲ್ಲಿ ಸುಖ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೋಪವನ್ನು ನಿಯಂತ್ರಣ ಮಾಡಿ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ.
ಪರಿಹಾರ
ದೇವೀ, ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ.
ಜಪಿಸಲು:
ಷಡಾನನಂ ಕುಂಕುಮರಕ್ತವರ್ಣಂ
ಮಹಾಮತಿಂ ದಿವ್ಯಮಯೂರವಾಹಮ್ |
ರುದ್ರಸ್ಯ ಸೂನುಂ ಸುರಸೈನ್ಯನಾಥಂ
ಗುಹಂ ಸದಾ ಶರಣಮಹಂ ಪ್ರಪದ್ಯೇ ||
°~•~°~•~°~•~°~•~°~•~°
ಧನು
ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತಿದ್ದು ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಆಲಸಿತನದಿಂದ ಕುಳಿತಲ್ಲಿ ಬಂದಂತಹ ಅವಕಾಶವು ಕೂಡ ಕೈ ಚೆಲ್ಲಿ ಹೋಗುವುದು. ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ ಕಾಣುವಿರಿ. ದಾಂಪತ್ಯ ಜೀವನದಲ್ಲಿ ಸಣ್ಣ ಕಲಹಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಹಿನ್ನಡೆ. ವಿದ್ಯಾರ್ಥಿಗಳು ತಮ್ಮ ಆಲಸಿತನ ಬಿಟ್ಟು ಮುಂದುವರೆದಲ್ಲಿ ಮಾತ್ರ ಶುಭ.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ / ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ
°~•~°~•~°~•~°~•~°~•~°
ಮಕರ
ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತದೆ. ಮನಶ್ಶಾಂತಿಯನ್ನು ಪಡೆಯುವಿರಿ. ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಒತ್ತಡಗಳು ಬರುವುದು. ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸುಖ. ಶ್ವಾಸ ಸಂಬಂಧಿ ತೊಂದರೆಗಳು, ಅಲರ್ಜಿ ಮುಂತಾದ ತೊಂದರೆಗಳು ಬರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ ಲಭ್ಯವಾಗಲಿದೆ.
ಪರಿಹಾರ
ಶಿವ ದೇವಸ್ಥಾನ ದರ್ಶನ, ಕುಲದೇವತಾರಾಧನೆಯಿಂದ ಶುಭ.
ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ
°~•~°~•~°~•~°~•~°~•~°
ಕುಂಭ
ವ್ಯವಹಾರಿಕ ಕ್ಷೇತ್ರದಲ್ಲಿ ನಿಧಾನಗತಿಯ ಹಿನ್ನಡೆ. ಆರ್ಥಿಕ ವ್ಯವಸ್ಥೆಯಲ್ಲಿ ತೊಡಕುಗಳು ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುವುದು. ಕುಟುಂಬದಲ್ಲಿ ಕಲಹದಿಂದಾಗಿ ಮನಶ್ಶಾಂತಿ ಕಳೆದುಕೊಳ್ಳುವಿರಿ. ಶೀತ, ಜ್ವರ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ ಲಭ್ಯ.
ಪರಿಹಾರ
ಶಿವದೇವಸ್ಥಾನ ದರ್ಶನ, ರುದ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.
ಜಪಿಸಲು:
ರುದ್ರಂ ಪಶುಪತಿಂ ಸ್ಥಾಣುಂ
ನೀಲಕಂಠಂ ಉಮಾಪತಿಮ್ |
ನಮಾಮಿ ಶಿರಸಾ ದೇವಂ
ಕಿಂ ನೋ ಮೃತ್ಯುಃ ಕರಿಷ್ಯತಿ ||
°~•~°~•~°~•~°~•~°~•~°
ಮೀನ
ವ್ಯಾವಹಾರಿಕ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ. ಆರ್ಥಿಕವಾಗಿ ಮುನ್ನಡೆ. ಕುಟುಂಬಕ್ಕಾಗಿ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ದಾಂಪತ್ಯದಲ್ಲಿ ಸುಖ. ಶೀತ, ಜ್ವರ, ಉದರದ ಸಂಬಂಧಿ ತೊಂದರೆಗಳು ಬರುವ ಸಾಧ್ಯತೆ ಇರುವುದರಿಂದ ಆಹಾರದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ ಲಭ್ಯ.
ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.
ಜಪಿಸಲು:
ಶಾಂತಾಕಾರಂ ಭುಜಗಶಯನಂ
ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ
ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ
ಯೋಗಿಹೃದ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ
ಸರ್ವಲೋಕೈಕನಾಥಮ್ ||
°~•~°~•~°~•~°~•~°~•~°
{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}