27.04.2019

ದಿನ ಭವಿಷ್ಯ

       

ವಿಕಾರಿನಾಮ ಸಂವತ್ಸರ / ಉತ್ತರಾಯಣ /
ವಸಂತ ಋತು /ಚೈತ್ರ ಮಾಸ /
ಕೃಷ್ಣ ಪಕ್ಷ /ಅಷ್ಠಮಿ ತಿಥಿ /

ಶನಿವಾರ/ಶ್ರವಣ ನಕ್ಷತ್ರ/

ದಿನಾಂಕ: 27.04.2019

 °~•~°~•~°~•~°~•~°~•~°

ಮೇಷ

         ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು.  ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ಕಂಡು ಬರುವುದು ಹಾಗೂ ಉತ್ತಮ ಕಾರ್ಯಗಳಿಗೆ ಗೋಸ್ಕರ ವಾಗಿ ಹಣವನ್ನು ವಿನಿಯೋಗಿಸಿ.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಚರ್ಮರೋಗ, ಅಲರ್ಜಿ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ:
ಮಂಗಳ ಗ್ರಹರ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಧರಣೀಗರ್ಭಸಂಭೂತಮ್ | ವಿದ್ಯುತ್ಕಾಂತಿಸಮಪ್ರಭಮ್ |
ಕುಮಾರಂ ಶಕ್ತಿಹಸ್ತಂ ಚ | ಮಂಗಲಮ್ ಪ್ರಣಮಾಮ್ಯಹಮ್ ||

°~•~°~•~°~•~°~•~°~•~°

    

ವೃಷಭ

           ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.  ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಖರ್ಚು ವೆಚ್ಚವನ್ನು ನಿಭಾಯಿಸಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಉತ್ತಮ ಆರೋಗ್ಯವನ್ನು ಹೊಂದುತ್ತೀರಿ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.




ಪರಿಹಾರ
ಶುಕ್ರ  ಗ್ರಹರ ಆರಾಧನೆಯನ್ನು ಮಾಡಿಕೊಂಡು ಬಂದಲ್ಲಿ  ಶುಭ.

ಜಪಿಸಲು :
ಹಿಮಕುಂದ ಮೃಣಾಲಾಭಮ್ (ಸಮಾಭಾಸಂ) | ದೈತ್ಯಾನಾಂ ಪರಮಂ ಗುರುಮ್ |
ಸರ್ವಶಾಸ್ತ್ರಪ್ರವಕ್ತಾರಮ್ | ಭಾರ್ಗವಂ ಪ್ರಣಮಾಮ್ಯಹಮ್ ||

°~•~°~•~°~•~°~•~°~•~°



ಮಿಥುನ


      ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬಂದರೂ ಕೂಡ ಮನಃಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ  ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಂಪತಿಯರ ನಡುವೆ ಕಲಹ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ  
ಬುಧ  ಗ್ರಹರ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಪ್ರಿಯಂಗುಕಲಿಕಾಶ್ಯಾಮಮ್ |  ರೂಪೇಣಾಪ್ರತಿಮಂ ಬುಧಮ್ |
ಸೌಮ್ಯಂ ಸೌಮ್ಯಗುಣೋಪೇತಮ್ | ತಂ ಬುಧಂ  ಪ್ರಣಮಾಮ್ಯಹಮ್ ||

  °~•~°~•~°~•~°~•~°~•~°



ಕರ್ಕಾಟಕ

   
   ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ ಹಾಗೂ ಯುವಕ ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಮೈ ಕೈ ಗಂಟು ನೋವು, ತಲೆನೋವು, ಶೀತ ಜ್ವರ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ಕಂಡುಬರುವುದು.

ಪರಿಹಾರ
ಚಂದ್ರ ಗ್ರಹರ ಆರಾಧನೆಯಿಂದ ಉತ್ತಮ ಅಭಿವೃದ್ಧಿ ಕಂಡು ಬರುವುದು.

ಜಪಿಸಲು :
ದಧಿಶಂಖತುಷಾರಾಭಮ್ |  ಕ್ಷೀರೋದಾರ್ಣವಸಂಭವಮ್ (ಸನ್ನಿಭಮ್) |
ನಮಾಮಿ ಶಶಿನಂ ಸೋಮಮ್ | ಶಂಭೋರ್ಮುಕುಟಭೂಷಣಮ್ ||

 °~•~°~•~°~•~°~•~°~•~°



ಸಿಂಹ

 ಮಾಡುವಂತಹ ಕೆಲಸ ಕಾರ್ಯಗಳಲ್ಲಿ  ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಬರುವ ಲಕ್ಷಣಗಳು ಇರುವುದರಿಂದ  ವಿನಾಕಾರಣ ಖರ್ಚು ವೆಚ್ಚವನ್ನು ಮಾಡದಿರಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಮಾತ್ರ ಅಭಿವೃದ್ಧಿ ಕಂಡು ಬರುತ್ತದೆ.


ಪರಿಹಾರ
ರವಿ ಗ್ರಹರ ಆರಾಧನೆಯಿಂದ  ಶುಭವಾಗಲಿದೆ.

ಜಪಿಸಲು :
ಜಪಾಕುಸುಮಸಂಕಾಶಮ್ | ಕಾಶ್ಯಪೇಯಂ ಮಹಾದ್ಯುತಿಮ್ |
ತಮೋಽರಿಂ ಸರ್ವಪಾಪಘ್ನಮ್ | ಪ್ರಣತೋಽಸ್ಮಿ ದಿವಾಕರಮ್ ||

    °~•~°~•~°~•~°~•~°~•~°      


ಕನ್ಯಾ


     ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬಂದರೂ ಕೂಡ ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ಕಂಡು ಬರುವುದು. ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಆರೋಗ್ಯ ಸಂಬಂಧವಾದ ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ದೊರೆಯುತ್ತದೆ.



ಪರಿಹಾರ
ಗೋಪಾಲ ಕೃಷ್ಣನ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ವಂದೇ ವೃಂದಾವನಚರಮ್ | ವಲ್ಲವೀಜನವಲ್ಲಭಮ್ |
ಜಯಂತೀ ಸಂಭವಂ ಧಾಮ | ವೈಜಯಂತೀವಿಭೂಷಣಮ್ ||

  °~•~°~•~°~•~°~•~°~•~°       


ತುಲಾ


       ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಬೆಳೆ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ  ಉತ್ತಮ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಆರೋಗ್ಯ ಸಂಬಂಧವಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ವಾಹನ ಪ್ರಯಾಣದ ಸಂದರ್ಭಗಳಲ್ಲಿ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ಕಂಡುಬರುವುದು.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||


 °~•~°~•~°~•~°~•~°~•~°


ವೃಶ್ಚಿಕ


  
ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಕಂಡು ಬರುವುದರಿಂದ ಜಾಗರೂಕತೆಯಿಂದ ವ್ಯವಹರಿಸಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಹೊಟ್ಟೆಗೆ ಸಂಬಂಧಿಸಿದ  ತೊಂದರೆ ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್ | ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾಃ | ಸುಬ್ರಮಣ್ಯಮುಪಾಸ್ಮಹೇ ||

°~•~°~•~°~•~°~•~°~•~°


ಧನು


    
ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಷ್ಟನಷ್ಟಗಳು ಎದುರಾಗುತ್ತವೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಕಲಹ ಸಂಭವಿಸುವ ಲಕ್ಷಣ ಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ದೊರೆಯುತ್ತದೆ.
ಪರಿಹಾರ
ಗುರು ಗ್ರಹರ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ದೇವಾನಾಂ ಚ ಋಷೀಣಾಂ ಚ | ಗುರುಂ ಕಾಂಚನಸನ್ನಿಭಮ್ |
ಬುದ್ಧಿಭೂತಂ ತ್ರಿಲೋಕೇಶಮ್ | ತಂ ನಮಾಮಿ ಬೃಹಸ್ಪತಿಮ್ ||

     °~•~°~•~°~•~°~•~°~•~°


ಮಕರ


    ಉತ್ತಮ ಪರಿಶ್ರಮದಿಂದ ಕೆಲಸ ಕಾರ್ಯವನ್ನು ನಿಭಾಯಿಸಿಕೊಂಡು ಬಂದಲ್ಲಿ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗೂ ಕುಟುಂಬದಲ್ಲಿ ಕಲಹ ಏರ್ಪಡುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರೆದರೆ ಮಾತ್ರ ಅಭಿವೃದ್ಧಿ ಅಭಿವೃದ್ಧಿ ಕಂಡು ಬರುವುದು.



ಪರಿಹಾರ
ಶನಿ ದೇವರ ಆರಾಧನೆಯಿಂದ ಶುಭ.  

ಜಪಿಸಲು :
ನೀಲಾಂಜನಸಮಾಭಾಸಮ್ | ರವಿಪುತ್ರಂ ಯಮಾಗ್ರಜಮ್ |
ಛಾಯಾಮಾರ್ತಾಂಡ ಸಂಭೂತಮ್ | ತಂ ನಮಾಮಿ ಶನೈಶ್ಚರಮ್||

   °~•~°~•~°~•~°~•~°~•~°          


ಕುಂಭ  


       ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ದೊರೆಯುತ್ತದೆ.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು.ಶೀತ,ಕಫ,ತಲೆನೋವು ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ  ಮುನ್ನಡೆ ದೊರೆಯುತ್ತದೆ ಹಾಗೂ ನೂತನ ವಿದ್ಯೆಯನ್ನು ಕಲಿಯಲು ಉತ್ತಮ ಅವಕಾಶಗಳು ಒದಗಿ ಬರುತ್ತದೆ.
ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಅಂಜನಾಗರ್ಭಸಂಭೂತ | ಕಪೀಂದ್ರಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಮ್  | ಹನೂಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


    ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ಏಳಿಗೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಹಾಗೂ ಯುವಕ ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ.  ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ದೊರೆಯುತ್ತದೆ.

ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ನಮಸ್ತೇ ಪುಂಡರೀಕಾಕ್ಷ | ನಮಸ್ತೇ ಪುರುಷೋತ್ತಮ |
ನಮಸ್ತೇ  ಸರ್ವಲೋಕಾತ್ಮನ್ | ನಮಸ್ತೇ ತಿಗ್ಮಚಕ್ರಿಣೇ ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Leave a Reply

Your email address will not be published. Required fields are marked *