ರಾಮಮಂದಿರ‌‌ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ

ಪ್ರಕಟಣೆ ಶ್ರೀಸಂಸ್ಥಾನ ಸುದ್ದಿ

ಬೆಂಗಳೂರು: ನಾಳೆ ಅಂದ್ರೆ‌ ನವೆಂಬರ್ ದಿಗ್ವಿಜಯ‌ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ವಿಶೇಷ ಧಾರ್ಮಿಕ‌ ಸಂದರ್ಶನ ಪ್ರಸಾರವಾಗಲಿದೆ. ರಾತ್ರಿ 9.27 ಕ್ಕೆ‌ ಸರಿಯಾಗಿ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ಇಂಟರವ್ಯೂ‌ಪ್ರಸಾರವಾಗಲಿದ್ದು ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ತಮ್ಮ ‌ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಾಮಮಂದಿರ‌ನಿರ್ಮಾಣ, ಹಾಗೂ ದೇಗುಲಗಳ ಸರ್ಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ‌ ಕುರಿತು ಶ್ರೀಸಂಸ್ಥಾನದವರು ಮುಕ್ತವಾಗಿ ಮಾತನಾಡಿದ್ದಾರೆ.

ಇನ್ನು‌ ದಿಗ್ವಿಜಯ ವಾಹಿನಿಯಲ್ಲಿ ಸಂದರ್ಶನದ ಜೊತೆಗೆ ನಾಡಿನ‌ ಜನಪ್ರಿಯ‌ ದಿನಪತ್ರಿಕೆ ವಿಜಯವಾಣಿ ಯಲ್ಲಿ ಇದೇ ಸಂದರ್ಶನದ ವರದಿ ಕೂಡ ಪ್ರಸಾರವಾಗಲಿದೆ. ಎಲ್ಲ ಭಕ್ತರು ಸಂದರ್ಶನ ವೀಕ್ಷಿಸಿ ಬೆಂಬಲಿಸಬೇಕಿದೆ.

Author Details


Srimukha

1 thought on “ರಾಮಮಂದಿರ‌‌ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ

Leave a Reply

Your email address will not be published. Required fields are marked *