ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶೇಷ ಕಲ್ಪನೆಯ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುತ್ತಿರುವ ಧಾರಾ~ರಾಮಾಯಣ ಪ್ರವಚನ ಮಾಲಿಕೆ ನಡೆಯುತ್ತಿದೆ.
ಧಾರಾ~ರಾಮಾಯಣ ಪ್ರವಚನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವಿಶ್ವಗುರು ಭಾರತಕ್ಕೆ ಕೀರಿಟವಾಗುವಂತಹ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಪ್ರವಚನ ಮಾಲಿಕೆಯಲ್ಲಿ ಸೆ.೧೪ರಿಂದ ೨೦ರವರೆಗೆ ಕಾಂಡ ವಿರಾಮವಿದ್ದು, ಈ ಸಮಯದಲ್ಲಿ ಯುವ ಪೀಳೆಗೆ ವಿಶೇಷ ರೀತಿಯಲ್ಲಿ ತೊಡಗಿಕೊಳ್ಳಬಹುದಾಗಿದೆ.
ಧಾರಾ~ರಾಮಾಯಣ ಪ್ರವಚನ ನಡೆಯುತ್ತಿದ್ದ ಸಮಯದಲ್ಲಿ ರಾಮಾಯಣದ ಸನ್ನಿವೇಷಗಳನ್ನು ಇಟ್ಟುಕೊಂಡು ಚಿತ್ರಗಳನ್ನು ಬಿಡಿಸಿ ವಿರಾಮ ಸಮಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ. ಧಾರಾ~ರಾಮಾಯಣ ಚಿತ್ರ ಸ್ಪರ್ಧೆಯನ್ನು ಶ್ರೀಮುಖದ ವತಿಯಿಂದ ಏರ್ಪಡಿಸಲಾಗಿದೆ.
ಖಡ್ಡಾಯವಾಗಿ ನಮೂದಿಸಿ
ಹೆಸರು :
ತಂದೆ – ತಾಯಿ ಹೆಸರು :
ಮಂಡಲ – ವಲಯ :
ಶಾಲೆ/ಕಾಲೇಜು/ವೃತ್ತಿ :
ಚಿತ್ರಗಳನ್ನು ಬಿಡಿಸುವವರ ಗಮನಕ್ಕೆ
ನಿಮ್ಮ ಸ್ವಂತ ಕಲ್ಪನೆಯನ್ನು ಎ೪ ಹಾಳೆಯಲ್ಲಿ ಬಿಡಿಸಿ
ಬಣ್ಣದ ಚಿತ್ರಗಳು, ಕಪ್ಪು ಬಿಳುಪು ಚಿತ್ರ, ಚುಕ್ಕಿ ಚಿತ್ರಗಳನ್ನು ಪರಿಗಣಿಸಲಾಗುವುದು
ಸೆಪ್ಟೆಂಬರ್ 20 ರ ರಾತ್ರಿ 9 ಗಂಟೆ ಮೊದಲು ಬಂದ ಚಿತ್ರಗಳನ್ನು ಪರಿಗಣಿಸಲಾಗುವುದು
ಸ್ಕ್ಯಾನ್ ಮಾಡಿ ಮಿಂಚಂಚೆ ಮೂಲಕವೇ ಕಳುಹಿಸಬೇಕು
ಮಿಂಚಂಚೆ ವಿಷಯದಲ್ಲಿ ಖಂಡ್ಡಾಯವಾಗಿ ವಿಭಾಗ ನಮೂದಿಸಿ:
೧೨ವರ್ಷದ ಒಳಗಿನವರು – ಬಾಲ ವಿಭಾಗ
೧೩ರಿಂದ-೧೮ವರ್ಷದ ಒಳಗಿನವರು – ಪ್ರೌಢ ವಿಭಾಗ
೧೯ರಿಂದ ಮೇಲ್ಪಟ್ಟವರು – ಯುವ ವಿಭಾಗ
ಸಂಪರ್ಕ ಹಾಗೂ ಪ್ರಕಟ:
smcompetition@srisamsthana.org ಗೆ ಸಂಪರ್ಕಿಸಬಹುದು ಹಾಗೂ ಚಿತ್ರಗಳನ್ನು ಕಳುಹಿಸಬಹುದು.
https://srimukha.srisamsthana.org ನಲ್ಲಿ ಬಹುಮಾನಿತ ಚಿತ್ರದ ಮಾಹಿತಿಯನ್ನು ಅಕ್ಟೋಬರ್ 7ರಂದು ಸಂಜೆ 6ಗಂಟೆಗೆ ತಿಳಿಸಲಾಗುವುದು.