ಸಂಸ್ಥಾಪನೋತ್ಸವ – ವಿಶೇಷ ಪ್ರಶಸ್ತಿ ಪುರಸ್ಕಾರ ಸಮಾರಂಭ

ಪ್ರಕಟಣೆ

Ñಶ್ರೀ ಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕಾರ, ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭ 31.3.2019 ಭಾನುವಾರ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಜೆ 4.00 ಗಂಟೆಗೆ ನಡೆಯಲಿದೆ.

1943ರಲ್ಲಿ ಸಂಸ್ಥಾಪಿತವಾಗಿ ; 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 2018-19 ನೇ ಸಾಲಿನ “ಹವ್ಯಕ ವಿಭೂಷಣ” “ಹವ್ಯಕ ಭೂಷಣ” “ಹವ್ಯಕ ಶ್ರೀ” ವಿಶೇಷ ಪ್ರಶಸ್ತಿಗಳನ್ನು ಹಾಗೂ ಪ್ರತಿಭಾವಂತ ಮಕ್ಕಳಿಗೆ ಪಲ್ಲವ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದೆ.

ಕೆನರಾ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ಆರ್. ವಿ ಶಾಸ್ತ್ರಿ, ಸಾಹಿತಿಗಳಾದ ಎ.ಪಿ ಮಾಲತಿ, ಸಮಾಜ ಸೇವಕರಾದ ಪ್ರಮೋದ್ ಹೆಗಡೆ ಯಲ್ಲಾಪುರ ಅವರುಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಹವ್ಯಕ ಮಹಾಸಭೆ ಕೊಡಲ್ಪಡುವ ವಿಶೇಷ ಪ್ರಶಸ್ತಿಮಾಲೆ 2018-19ರ ಪುರಸ್ಕೃತರು

ಹವ್ಯಕ ವಿಭೂಷಣ :

1. ಶ್ರೀ ನಾರಾಯಣ ಹಾಸ್ಯಗಾರ್ ಕರ್ಕಿ, ಹೊನ್ನಾವರ
ಖ್ಯಾತ ಯಕ್ಷಗಾನ ಕಲಾವಿದರು

ಹವ್ಯಕ ಭೂಷಣ

1. ಶ್ರೀ ಗೋವಿಂದ ಭಟ್ ಮುಳ್ಳಂಕ್ಕೊಚಿ, ಕಾಸರಗೋಡು
ಕೃಷಿ, ಸಮಾಜ ಸೇವೆ, ಗಿಡಮೂಲಿಕೆ ಸಂವರ್ಧನೆ

2. ಡಾ. ಪಿ. ನಾರಾಯಣ ಭಟ್, ಸುಳ್ಯ ದ.ಕ
IGP Medical, CRPF

ಹವ್ಯಕ ಶ್ರೀ

1. ಶ್ರೀ ಅನನ್ಯ ಭಾರ್ಗವ ಬೇದೂರು, ಸಾಗರ
ಸಂಗೀತ ಕ್ಷೇತ್ರದ ಸಾಧನೆ

2. ಶ್ರೀಮತಿ ಸುಧಾ ಶರ್ಮ ಚವತ್ತಿ, ಯಲ್ಲಾಪುರ
ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆ

3. ಶ್ರೀಮತಿ ಶಾಂತಲಾ ಸುರೇಶ ಮುಂಗರವಳ್ಳಿ , ಸಾಗರ
ಸ್ಥಾಪಕರು – ಬುದ್ದಿಮಾಂದ್ಯ ಮಕ್ಕಳ ಶಾಲೆ

ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಕ್ಕಳಿಗೆ “ಪಲ್ಲವ ಪುರಸ್ಕಾರ” ನೀಡಿ ಗೌರವಿಸಲಾಗುತ್ತಿದೆ.

ಸ್ಮರಣ ಸಂಚಿಕೆ ಲೋಕಾರ್ಪಣೆ
ದ್ವಿತೀಯ ವಿಶ್ವಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವದ ಸ್ಮರಣ ಸಂಚಿಕೆ “ಅಮೃತವರ್ಷಿಣಿ” ಇದೇ ಸಂದರ್ಭದಲ್ಲಿ ಲೋಕಾರ್ಪಣೆಯಾಗುತ್ತಿದ್ದು, ಹವ್ಯಕ ಸಂಸ್ಕೃತಿಯನ್ನು ಪರಿಚಯಿಸುವ ಲೇಖನಗಳು ಹಾಗೂ ವಿಶ್ವ ಸಮ್ಮೇಲನದ ಸುಂದರ ನೆನಪುಗಳನ್ನು ಈ ಸ್ಮರಣ ಸಂಚಿಕೆ ಹೊತ್ತುತರುತ್ತಿದೆ.

ಸಭಾ ಕಾರ್ಯಕ್ರಮದ ನಂತರ “ಸುಧನ್ವ ಮೋಕ್ಷ” ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವಿದ್ದು, ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ನಾರಾಯಣ ಹೆಬ್ಬಾರ, ಲಕ್ಷ್ಮೀನಾರಾಯಣ ಸಂಪ ಹಾಗೂ ಮುಮ್ಮೇಳದಲ್ಲಿ ಮೋಹನ ಭಾಸ್ಕರ ಹೆಗಡೆ, ವಿದ್ವಾನ್ ಗಣಪತಿ ಭಟ್, ಹರೀಶ ಬೋಳಂತಿಮೊಗರು ಭಾಗವಹಿಸಲಿದ್ದಾರೆ.

 

Author Details


Srimukha

Leave a Reply

Your email address will not be published. Required fields are marked *