ರಾಘವೇಶ್ವರ ಶ್ರೀಗಳ ವರ್ಧಂತ್ಯುತ್ಸವ

ಪ್ರಕಟಣೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ವರ್ಧಂತ್ಯುತ್ಸವ ಶುಕ್ರವಾರ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆಯಲಿದೆ.

 

ಶ್ರೀಮಠದ ಶಿಷ್ಯಭಕ್ತರು ಶ್ರೀಸಂಸ್ಥಾನಕ್ಕೆ ಸಮರ್ಪಿಸಿರುವ ನೂತನ ರಜತಪೀಠಾರೋಹಣ ಇದೇ ಸಂದರ್ಭದಲ್ಲಿ ನಡೆಯಲಿದೆ. ಶ್ರೀಗಳು ಶ್ರೀರಾಮಾಶ್ರಮದಲ್ಲಿ ರಾಮಾಯಣ ಚಾತುರ್ಮಾಸ್ಯ ಕೈಗೊಂಡಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಾಧನೆಗಾಗಿ ಪ್ರತಿದಿನ ಧಾರಾ ರಾಮಾಯಣ ಪ್ರವಚನ ನಡೆಯುತ್ತಿದೆ.

 

ವರ್ಧಂತ್ಯುತ್ಸವ ಅಂಗವಾಗಿ ಬೆಳಿಗ್ಗೆ ಅರುಣ ಹೋಮ, 48 ಅರುಣ ನಮಸ್ಕಾರ, ಮಾತೆಯರಿಂದ ಮಂಗಳಾರತಿ, 108 ಕುಂಭಗಳ ಗಂಗಾಭಿಷೇಕ, ಶ್ರೀರಾಮದೇವರಿಗೆ ಅಷ್ಟಾವಧಾನ ಸೇವೆ, ಮಧ್ಯಾಹ್ನ ಶ್ರೀಗಳಿಗೆ ತುಲಾಭಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಧರ್ಮ ಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Author Details


Srimukha

Leave a Reply

Your email address will not be published. Required fields are marked *