ಹೆಚ್ ಕೆ ಪಾಟೀಲ್

ವಿಶ್ವ ಹವ್ಯಕ ಸಮ್ಮೇಳನ

ಹೆಚ್ ಕೆ ಪಾಟೀಲ್

ಹವ್ಯಕ ಸಮುದಾಯದೊಂದಿಗೆ ನನ್ನ ಸಂಬಂಧಗಳು ಅನುಪಮವಾದದ್ದು, ನಾನು ಅನೇಕ ಹುದ್ದೆಗಳನ್ನು ನಿರ್ವಹಿಸುವುದರ ಹಿಂದೆ ಹವ್ಯಕ ಸಮಾಜದ ಕೊಡುಗೆ ಅವಿಸ್ಮರಣೀಯ. ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಹವ್ಯಕರ ಕೊಡುಗೆಯನ್ನು ನಾಡಿನ ಜನತೆ ಸದಾ ಸ್ಮರಸಬೇಕಿದೆ. ಸಹಸ್ರಾರು ಸಹಕಾರಿ ಸಂಘಗಳನ್ನು ಹುಟ್ಟುಹಾಕಿ ಯಶಸ್ವಿಯಾಗಿ ಮುನ್ನೆಡೆಸಿ, ಅನೇಕ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಹವ್ಯಕರದ್ದು.

ಪೂಜ್ಯ ರಾಘವೇಶ್ವರ ಶ್ರೀಗಳ ಅನುಪಮವಾದ ಆಶೀರ್ವಾದ ನನ್ನ ಮೇಲಿದೆ. ಆ ಸಮಾಜದ ಜೊತೆ ಸಂಬಂಧ ಇರುವುದರಿಂದ ಶ್ರೀಗಳು ‘ಪಾಟೀಲರೇ ನೀವು ಕೂಡ ಹವ್ಯಕರೇ” ಎಂದು ಹೇಳುವುದುಂಟು. ಆಗ ‘ಹವ್ಯಕ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಅಂದುಕೊಳ್ಳುತ್ತೇನೆ.

Author Details


Srimukha

Leave a Reply

Your email address will not be published. Required fields are marked *