ಗೋಕರ್ಣ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಮಹಾಬಲೇಶ್ವರನಿಗೆ ವಿಶೇಷೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿದೆ.
ಭೂಸೇನೆಯ ಕ್ಯಾಪ್ಟನ್ ಗಿರೀಶ್ ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ದೇಗುಲದ ಆಡಳಿತಾಧಿಕಾರಿ ಶ್ರೀ ಜಿ.ಕೆ. ಹೆಗಡೆ ಯೋಧ ಕ್ಯಾಪ್ಟನ್ ಗಿರೀಶ್ ಅವರನ್ನು ಗೌರವಿಸಿ, ಪೂಜಾಪ್ರಸಾದ ನೀಡಿ ಗೌರವಿಸಿದರು.