ಪೂರ್ಣ ಜೀವನದ ಪುಣ್ಯವಂತ ನೆಬ್ಬೂರು ನಾರಾಯಣ ಭಾಗವತ

ನೆಬ್ಬೂರು ಮತ್ತು ಯಕ್ಷಗಾನ, ನೆಬ್ಬೂರು ಮತ್ತು ಕೆರೆಮನೆ ಈ ಎರಡು ಪದಪುಂಜಗಳು ಅವಿನಾಭಾವವಾದ ಸಂಬಂಧವನ್ನು ಹೊಂದಿವೆ. ಇದನ್ನು ನೋಡುತ್ತ ಹೋಗುವಾಗ ಒಂದು ವಿಸ್ಮಯ ಲೋಕ ನಮ್ಮ ಕಣ್ಣೆದುರು ಕಂಡು ಬರುತ್ತದೆ. ನೆಬ್ಬೂರು ಎನ್ನುವುದು ಶಿರಸಿಯ ಸಮೀಪದ ಒಂದು ಸಣ್ಣ ಹಳ್ಳಿ. ಶಿರಸಿ-ಕುಮಟಾ ಮಾರ್ಗದಲ್ಲಿ ಅಮ್ಮಿನಳ್ಳಿಯಲ್ಲಿ ಎಡಕ್ಕೆ ಅರ್ಧ ಕಿ.ಮೀ. ನಲ್ಲಿ ಇರುವ ಐದಾರು ಮನೆಯ ಒಂದು ಸಣ್ಣ ಪ್ರದೇಶ. ಆದರೆ ಈಗ ಅದು ಸಣ್ಣ ಪ್ರದೇಶವಾಗಿ ಉಳಿದಿಲ್ಲ. ಯಾವಾಗ ನೆಬ್ಬೂರು ಭಾಗವತರು ಪ್ರಸಿದ್ಧರಾದರೋ ಆಗ ಎಲ್ಲೆಲ್ಲಿ ಯಕ್ಷಗಾನ […]

Continue Reading

ಯಥೋ ಧರ್ಮಃ ತತೋ ಜಯಃ

ಅವಳು ಅಪ್ಪಟ ಭಾರತೀಯ ನಾರಿ. ನಮ್ಮ ಪುರಾಣೇತಿಹಾಸದಲ್ಲಿ ಅವಳು ಬಹುವಾಗಿ ಕಾಣದೇ ಉಳಿದಳು. ಕಣ್ಣಿಂದ ಕಾಣದೇ ಇದ್ದುದನ್ನು ತಾನು ಮನಸ್ಸಿನಿಂದ ಕಂಡಳು. ಜೀವನದಲ್ಲಿ ಅವಳು ಎಂದೂ ತಪಸ್ಸನ್ನು ಮಾಡಲಿಲ್ಲ. ಜೀವನವನ್ನೇ ತಪಸ್ಸನ್ನಾಗಿಸಿದಳು. ಆ ಮಹಾ ತಪಸ್ವಿನಿಯು ಲೋಕಕ್ಕೆ ನೀಡಿದ್ದು ಏನು ಎಂದು ಕೇಳಿದರೆ ಲೋಕ ಎಂದೂ ಮರೆಯದ ಮಾತು. ಅದಕ್ಕೆ ಸರಿಯಾದ ಇನ್ನೊಂದು ಅಂತಹ ಮಾತಿಲ್ಲ. ಆ ಮಾತೇ  ‘ಯಥೋ ಧರ್ಮಃ ತತೋ ಜಯಃ|’ ಆ ಮಾತೆಯೇ ಗಾಂಧಾರಿ.   ಆ ಕಣ್ಣಿಂದ ಅವಳನ್ನು ಅರಿಯೋಣ ಬನ್ನಿ. […]

Continue Reading

ಸಂಗೀತ ಸಾಹಿತ್ಯ ಕಲೆ ಇವುಗಳ ಪ್ರಸ್ತುತತೆ

ನಮ್ಮ ಭಾರತೀಯ ಪರಂಪರೆಯಲ್ಲಿ ನಾವು ವೇದಗಳಿಗೆ ಯಾವ ಮಹತ್ತ್ವವನ್ನು, ಗೌರವವನ್ನು, ಪೂಜ್ಯ ಭಾವನೆಯನ್ನು ಸಲ್ಲಿಸುತ್ತಾ ಬಂದಿದ್ದೇವೆಯೋ ಅದೇ ರೀತಿ ಸಾಂಸ್ಕಂತಿಕ ವಿಷಯಕ್ಕೂ ಸಲ್ಲಿಸುತ್ತಲೇ ಬಂದಿದ್ದೇವೆ. ಆದುದರಿಂದಲೇ ಭಾರತೀಯ ಪರಂಪರೆಯ ಗುಣಗಳಲ್ಲಿ ಜ್ಞಾನ, ಆ ಜ್ಞಾನದ ಹಲವು ಶಾಖೆಗಳು, ಅವುಗಳನ್ನು ಅಭ್ಯಸಿಸುತ್ತ ಅವುಗಳ ಮೇಲೆ ಸಿದ್ಧಿಯನ್ನು ಗಳಿಸುತ್ತಾ ಸಾಗುವುದು ಶ್ರೇಷ್ಠ ಲಕ್ಷಣಗಳಲ್ಲಿ ಒಂದಾಗಿದೆ. ನಾಲ್ಕು ವೇದಗಳು ಈ ಪ್ರಪಂಚಕ್ಕೆ ನಾವು ನಂಬಿದ ದೈವದಿಂದ ಕೊಡಲ್ಪಟ್ಟ ಮೇಲೆ ಅವುಗಳನ್ನು ಆರಾಧಿಸುವ, ಅವುಗಳ ಮಹತ್ತ್ವವನ್ನು ಅರ್ಥ ಮಾಡಿಕೊಳ್ಳುವ, ಹಾಗೆಯೇ ಅವುಗಳನ್ನು ಅನುಸರಿಸುತ್ತ […]

Continue Reading

ಹವ್ಯಕ ಮಹಾಸಭಾ – ಶ್ರೀ ಗಿರಿಧರ ಕಜೆ

ಶ್ರೀ ಅಖಿಲ ಹವ್ಯಕ ಮಹಸಭಾ ಎನ್ನುವ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ಸ್ತರಗಳಲ್ಲಿಯೂ ಚರ್ಚೆಯಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಬೇರೆ ಬೇರೆ ಸಮಾಜದವರೂ ಕೂಡ ಈ ಸಮಾಜವನ್ನು ನಿಬ್ಬೆರಗಾಗಿ ನೋಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲಿಯೋ ಒಮ್ಮೆ ನಾವೂ ಹಿಂದಿರುಗಿ ನೋಡಿದಾಗ ಒಂದಿಷ್ಟು ವಿಚಾರಗಳ ನಡುವೆ ಸಿಲುಕಿಕೊಂಡು ಒಂದಿಷ್ಟು ನಿರ್ದಿಷ್ಟ ಕಾರ್ಯಕ್ರಮಗಳ ಸುತ್ತಮುತ್ತ ಸಾಗುತ್ತ, ಒಂದು ಸಮಾಜದ ಪ್ರಾತಿನಿಧಿಕ ಸಂಸ್ಥೆ ಮುಂದುವರಿಯುತ್ತಿರುವುದನ್ನು ಗಮನಿಸುತ್ತಿದ್ದೆವು.   ಆದರೆ ಇತ್ತೀಚೆಗೆ ಯಾವ ಕಟ್ಟಡ ಅಪೂರ್ಣವಾಗಿತ್ತೋ ಯಾವ ಕಟ್ಟಡದ ಮೇಲೆ ಋಣಭಾರ […]

Continue Reading

ಶ್ರೀ ಕ್ಷೇತ್ರ ಗಯಾ

ಬಿಹಾರ ರಾಜ್ಯದಲ್ಲಿ ಪಾಟ್ನಾದಿಂದ ಸುಮಾರು 200 ಕಿ.ಮೀ. ದೂರ ಇರುವ ಪುಣ್ಯಕ್ಷೇತ್ರ ಗಯಾ. ಈ ಕ್ಷೇತ್ರ ಕಾಲಶ್ರಾದ್ಧಕ್ಕೆ ಹೆಸರಾಗಿದೆ. ಇಲ್ಲಿ ಹಲವಾರು ಶಕ್ತಿ ಸ್ಥಳಗಳಿವೆ. ಬುದ್ಧಗಯಾ ಎಂಬ ಪ್ರಸಿದ್ಧ ಸ್ಥಳವೂ ಇಲ್ಲಿಯೇ ಇದೆ. ಈ ಕ್ಷೇತ್ರ ದರ್ಶನದ ಯೋಗಭಾಗ್ಯ ಸದ್ಯಕ್ಕೆ ಒದಗಿ ಬಂದಿದ್ದರಿಂದ, ಅದನ್ನು ವಿಶೇಷವಾಗಿ ನೋಡಿದ್ದರಿಂದ ಇಲ್ಲಿ ಹಂಚಿಕೊಳ್ಳಬಯಸಿದೆ. ನಮ್ಮ ಸ್ನೇಹಿತರಾದ ಜಗದೀಶ ಪೈ, ಅಮೋಘ ಹಾಗೂ ಸುದೀಪ್ತ ಘೋಷರೊಂದಿಗೆ ಕಾರ್ಯಾರ್ಥ ಈ ಪುಣ್ಯಕ್ಷೇತ್ರದ ಸಮೀಪ ಹೋಗಿದ್ದೆ. ಹಾಗಾಗಿ ಈ ತೀರ್ಥಕ್ಷೇತ್ರವನ್ನು ದರ್ಶಿಸುವ ಮನಸ್ಸು ಮಾಡಿದೆವು. […]

Continue Reading

ಶ್ರೀಮಚ್ಛರಾವತೀತೀರವಾಸ

ನಮ್ಮ ಶ್ರೀರಾಮಚಂದ್ರಾಪುರ ಮಠದ ಶ್ರೀ ಸಂಸ್ಥಾನವನ್ನು ಆದರಿಸಿಕೊಳ್ಳುವ, ಬರಮಾಡಿಕೊಳ್ಳುವ ಮತ್ತೊಂದು ಪರಾಕು – ‘ಶ್ರೀಮಚ್ಛರಾವತೀತೀರವಾಸ’. ಇದನ್ನು ಹೇಳುವಾಗ ಬಹಳ ಮಹತ್ತ್ವಪೂರ್ಣವಾದ ಮಾಹಿತಿಗಳು ಲಭ್ಯವಾಗುತ್ತವೆ. ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತವಾದ ಶ್ರೀಮಠವನ್ನು ಪರಿಪಾಲಿಸಿಕೊಂಡು ಬಂದ ಸಮಸ್ತ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಂತ ಯತಿವರೇಣ್ಯರುಗಳಲ್ಲಿ ಅವಿಚ್ಛಿನ್ನ ಪರಂಪರೆಯ ಶ್ರೀಸಂಸ್ಥಾನದವರಲ್ಲಿ ಹನ್ನೊಂದನೆಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಶಿಷ್ಯರಾದ ಶ್ರೀರಾಮಚಂದ್ರಭಾರತೀ ಶ್ರೀಗಳವರನ್ನು ಪಟ್ಟದಲ್ಲಿ ಕೂರಿಸಿ ಅವರಿಗೆ ದಿವ್ಯ ಮಂತ್ರೋಪದೇಶವನ್ನು ಮಾಡುತ್ತಾರೆ. ಹನ್ನೆರೆಡನೆಯ ಪೂಜ್ಯ ಶ್ರೀಸಂಸ್ಥಾನದವರು ತಮ್ಮ ಕಾಲಘಟ್ಟದಲ್ಲಿ ಈಗಿನ ಶ್ರೀರಾಮಚಂದ್ರಾಪುರಮಠಕ್ಕೆ ತೆರಳಿ […]

Continue Reading

ಶ್ರೀಮದ್ರಾಜಾಧಿರಾಜಗುರು

ಇದು ಶ್ರೀಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಪೂಜ್ಯರಿಗೆ ಸಲ್ಲಿಸುವ ಇನ್ನೊಂದು ಪರಾಕು. ಏನಿದರ ವಿಶೇಷ ಎಂದು ಗಮನಿಸುವಾಗ ನಾವು ರೋಮಾಂಚಗೊಳ್ಳಬೇಕು. ಸಾಮಾನ್ಯವಾಗಿ ಯತಿವರೇಣ್ಯರನ್ನು ಸಂನ್ಯಾಸಿಗಳನ್ನು ಗುರುತಿಸುವಾಗ ಅವರು ಲೌಕಿಕತೆಯಿಂದ ಆಚೆ ಇರುವ ಪಾರಿಮಾರ್ಥಿಕತೆಯನ್ನು ಮಾತ್ರ ನೋಡುತ್ತಿರಬೇಕು ಎಂಬ ಅರ್ಥದಲ್ಲಿ ಜನ ಸಾಮಾನ್ಯರು ಯೋಚಿಸುತ್ತಾರೆ. ಆದರೆ ಎಷ್ಟೋ ಸಂದರ್ಭದಲ್ಲಿ ಈ ಪೀಠವನ್ನು ರಾಜಗುರುಪೀಠ ಎನ್ನುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಎಲ್ಲ ಪರಂಪರೆಗೂ ಈ ರೀತಿಯ ಉಪಾಧಿ ಇಲ್ಲ. ಹಾಗೆ ಇರುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಈ ಶ್ರೀರಾಮಚಂದ್ರಾಪುರಮಠದ ಪೀಠಕ್ಕೆ ಹೀಗೊಂದು ವಿಶೇಷವಾದ ಪರಾಕು […]

Continue Reading

ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ

ಹಿಂದಿನ ಸಲ ನಾವು ‘ಗುರುರಾಜ ಪಟ್ಟಭದ್ರ’ ಎಂಬ ಭೋಪರಾಕಿನ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದ್ದೆವು. ಈಗ ಇನ್ನೊಂದು ಪರಾಕು ‘ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ’ ಈ ವಿಷಯವನ್ನು ಚಿಂತಿಸುವುದಕ್ಕೆ ಯೋಚಿಸುವಾಗ ಸುಮಾರು ೨೦ ವರ್ಷಗಳ ಹಿಂದೆ ಕೆಕ್ಕಾರು ಮಠದಲ್ಲಿ ನಮ್ಮ ಶ್ರೀಸಂಸ್ಥಾನದ ಸವಾರಿ ತಂಗಿತ್ತು. ಪೀಠಕ್ಕೆ ಅವರು ಬರುವುದಕ್ಕಿಂತ ಮೊದಲು ಪೀಠದ ಎದುರಿನಲ್ಲಿ ನನ್ನ ಜೊತೆಯಲ್ಲಿ ವಿದ್ವಾಂಸರಾದ ಕಟ್ಟೆ ಪರಮೇಶ್ವರ ಭಟ್ಟರವರು ಕುಳಿತಿದ್ದರು. ಆಗ ‘ಎಂತಹ ದಿವ್ಯ ಪೀಠ ನಮ್ಮದು’ ಎಂದರು. ನಾನು ‘ಹೌದು, ಗುರುಗಳು ಬರುವಾಗ ಪರಾಕು […]

Continue Reading

ಗುರುರಾಜ ಪಟ್ಟ ಭದ್ರ

ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು  ಯಾವತ್ತೂ ಪೀಠಕ್ಕೆ ಬಂದು ಆಸೀನರಾಗುವಾಗ ಅವರನ್ನು ಬಹುಪರಾಕಿನಿಂದ ಬರ ಮಾಡಿಕೊಳ್ಳಲಾಗುತ್ತದೆ.  ಗೌರವಿಸಲಾಗುತ್ತದೆ. ಆದರಿಸಲಾಗುತ್ತದೆ. ಹಾಗೆ ಹೇಳುವಾಗ ಆ ಪರಾಕಿಗೊಂದು ವಿಶೇಷವಾದ ಮೆರಗಿದೆ. ಇಡೀ ವಾತಾವರಣ ಶ್ರೀಸಂಸ್ಥಾನದವರ ಎತ್ತರ, ಮಹತ್ತ್ವಗಳನ್ನು ಭಕ್ತಿಪರವಶತೆಯಿಂದ ಕಾಣುತ್ತಾರೆ. ಕಣ್ಮುಚ್ಚಿ ಅವರನ್ನು ಧ್ಯಾನಿಸುತ್ತಾರೆ.   ಹಾಗಿದ್ದರೆ ಏನಿದು ಪರಾಕು? ಇದು ಕೇವಲ ಹೊಗಳುವಿಕೆಯಲ್ಲ. ಇದರ ಹಿಂದೆ ಅಪಾರವಾದ ಅರ್ಥವಿದೆ. ಇದು ಸುಮ್ಮ- ಸುಮ್ಮನೆ ಪೋಣಿಸಿದ ಶಬ್ದಗಳಲ್ಲ. ಇದು ಸಾಧಿಸಿ ಗಳಿಸಿಕೊಂಡ ಸಿದ್ಧಿ.  ಇದರಲ್ಲಿ ಎಂತಹ ಅಪಾರವಾದಂತಹ ಗುರು-ಶಿಷ್ಯ […]

Continue Reading

ಶ್ರೀ ರಾಮನ ನಿರ್ಣಯದತ್ತ ಒಂದು ನೋಟ

    ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||   ಅಯೋಧ್ಯೆಯ ಅರಸುಗಳಲ್ಲಿಯೇ ಅತಿಶ್ರೇಷ್ಠನಾದ ಅರಸು ಶ್ರೀರಾಮಚಂದ್ರ. ಮರ್ಯಾದಾಪುರುಷೋತ್ತಮ ಎಂಬ ಅಭಿದಾನವನ್ನು ಹೊಂದಿದ ಭಾರತವರ್ಷದ ಏಕಮೇವ ಚಕ್ರವರ್ತಿ. ತನ್ನ ಜೀವಿತ ಕಾಲದಲ್ಲಿ  ಮಾಡಿದ ಸಾಧನೆಯನ್ನು ಮನುಕುಲ ಇಂದಿಗೂ ಮರೆತಿಲ್ಲ. ಸುಭಿಕ್ಷ, ಶಾಂತಿ, ಸಮಾಧಾನಗಳಿಂದ ಕೂಡಿದ ರಾಜ್ಯವ್ಯವಸ್ಥೆಗೆ ಪರ್ಯಾಯ ಏನೆಂದು ಉದಾಹರಣೆಯ ಮೂಲಕ ವಿವರಿಸಿ ಎಂದರೆ ರಾಮರಾಜ್ಯ ಎಂದೇ ಕೇಳಿಬರುತ್ತದೆ. ಎಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿದ  ಭಾರತವರ್ಷಕ್ಕೆ ಇನ್ನೊಂದು ಅಂತಹ ಸಮೃದ್ಧ, […]

Continue Reading

ಹವ್ಯಕ ಸಮಾಜದ ಹೊಣೆಗಾರಿಕೆಗಳು

  ನಮ್ಮ ಹವ್ಯಕ ಸಮಾಜ ಒಂದು ವಿಶೇಷವಾದ ಸಮಾಜವಾಗಿದ್ದು ಹಲವಾರು ವಿಷಯಗಳಲ್ಲಿ ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ. ಸಹ್ಯಾದ್ರಿಯ ಮಡಿಲಿನ ಬನವಾಸಿಯ ಸುತ್ತಮುತ್ತ ವ್ಯಾಪಕವಾಗಿದ್ದಂತಹ ಈ ನಮ್ಮ ಸಮುದಾಯ, ಕಾಲಾಂತರದಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ವ್ಯಾಪಿಸಿತು. ಅಂತೆಯೇ ಅಹಿಚ್ಛತ್ರದಲ್ಲಿಯೂ ಕೂಡ ಅಸ್ಮಿತೆಯನ್ನು ತೋರಿಸಿತು. ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ವಿಶೇಷವಾದ ಆದರಣೆಗೆ ಒಳಪಟ್ಟು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸನಿಹದ ಹೈಗುಂದ ಎಂಬ, ಶರಾವತೀ ನದಿಯಿಂದ ಆವರಿಸಲ್ಪಟ್ಟ ಒಂದು ಪುಟ್ಟ ನಡುಗಡ್ಡೆಯಲ್ಲಿ ಪುನಶ್ಚೇತನವನ್ನು ಹೊಂದಿತು. ಅಲ್ಲಿಂದ ಮುಂದಕ್ಕೆ ದಕ್ಷಿಣೋತ್ತರ […]

Continue Reading

ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು

ಪ್ರಾಯೋಧುನಾ ಶಿಷ್ಯವರ್ಗಃ ಸಂಪದ್ವಿದ್ಯಾದಿಭೂಷಿತಃ | ಭಕ್ತಿಶ್ರದ್ಧಾದ್ಯುಪೇತೋಪಿ ಗುರುಪೀಠೇ ಸಮೃಧ್ಯತಾಮ್ ||   ಈಗಿನ ಶಿಷ್ಯವರ್ಗದವರು ವಿದ್ಯೆ, ಧನಸಂಪತ್ತು, ಉದ್ಯೋಗ, ಅಧಿಕಾರ, ಕೃಷಿ ಇತ್ಯಾದಿ ವಿಚಾರವಾಗಿ ಜೀವನರಂಗದಲ್ಲಿ  ನೆಲೆಯನ್ನೂರಿ ಬೆಳಗುತ್ತಿರುವುದನ್ನು ಹಾಗೂ ಗುರುಪೀಠದ ಬಗ್ಗೆ ಅಪಾರ ಭಕ್ತಿಶ್ರದ್ಧಾಸಂಪನ್ನರಾಗಿ ಬಾಳುತ್ತಿರುವುದನ್ನು ನಮ್ಮ ಪರಮಪೂಜ್ಯ ಶ್ರೀಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರು ಆತ್ಮವಿದ್ಯಾಆಖ್ಯಾಯಿಕಾ ಎಂಬ ತಮ್ಮ ಅತಿ ಪ್ರೀತಿಯ ಆತ್ಮಚರಿತೆಯಲ್ಲಿ ಗುರುತಿಸಿ, ಇವರೆಲ್ಲರೂ ಇನ್ನೂ ವಿಶೇಷವಾಗಿ  ಅಭಿವೃದ್ಧಿ ಹೊಂದಿ ಬಾಳಿ ಬೆಳಗಲಿ ಎಂದು ನಮ್ಮೆಲ್ಲರನ್ನು ಹರಸಿದ್ದಾರೆ. ಅವರ ಆ ದಿವ್ಯ ಹರಕೆಯನ್ನು ನೆನಪಿಸಿಕೊಂಡು ಗುರುಕಾರುಣ್ಯದ ಆ […]

Continue Reading