ಗುರುವಿನೆಡೆಗೆ ಅವನ ನಡಿಗೆ
ಯಜ್ಞಕ್ಕೆಂದು ಕರೆದನವ ಭೂಮಿಯನ್ನು. ಸಸ್ಯಕ್ಕೆಂದು ಸ್ವರ್ಗವನ್ನು ಕರೆದ ಇಂದ್ರ. ಸಂಪತ್ತಿನ ವಿನಿಮಯದಿಂದ ಇಬ್ಬರೂ ಎರಡು ಭುವನಗಳನ್ನೂ ಪೋಷಿಸಿದರು. ರಕ್ಷಕನಾದ ಅವನ ಯಶಸ್ಸನ್ನು ಕದಿಯಲಾಗಲಿಲ್ಲ ದೊರೆಗಳಿಗೆ. ಯಾಕೆಂದರೆ ಪರಸ್ವತ್ತುಗಳಿಂದ ಹಿಂದಿರುಗಿದ ಕಳ್ಳತನ ಶಬ್ದವಾಗಿ ಮಾತ್ರ ಉಳಿದಿತ್ತು. ಸಜ್ಜನನಾದವ ದ್ವೇಷಿಯಾದರೂ ಅವನಿಗೆ ಸಮ್ಮತನಾಗಿದ್ದ. ರೋಗಿಗೆ ಔಷಧದಂತೆ. ದುಷ್ಟ ಪ್ರಿಯನಾಗಿದ್ದರೂ ತ್ಯಾಜ್ಯನಾಗಿದ್ದ ಅವನಿಗೆ. ಹಾವು ಕಡಿದ ಬೆರಳಿನಂತೆ. ಸೃಷ್ಟಿಕರ್ತ ಮಹಾಭೂತಗಳಿಂದ ಅವನನ್ನು ಸೃಷ್ಟಿಸಿದ್ದನಷ್ಟೇ. ಹಾಗಾಗಿ ಅವನ ಗುಣಗಳೆಲ್ಲವೂ ಬೇರೆಯವರಿಗೆ ಅನುಕೂಲ ಒದಗಿಸಲೆಂದೇ ಇದ್ದವು. ಸಮುದ್ರ ತೀರವೇ […]
Continue Reading