ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಶುಕ್ಲ ಪಕ್ಷ / ತ್ರಯೋದಶೀ ತಿಥಿ /
ಶನಿವಾರ / ಮೃಗಶಿರಾ ನಕ್ಷತ್ರ /
ದಿನಾಂಕ: 19.01.2019
°~•~°~•~°~•~°~•~°~•~°
ಮೇಷ
ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆ. ಹಿರಿಯ ಅಧಿಕಾರಿಗಳಿಂದ ಒತ್ತಡ. ಮಿತ್ರರ ಆಗಮನ. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಸಾಫಲ್ಯ. ಆರೋಗ್ಯದಲ್ಲಿ ಹಿನ್ನಡೆ.
ಪರಿಹಾರ:
ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ ||
°~•~°~•~°~•~°~•~°~•~°
ವೃಷಭ
ಉದ್ಯೋಗ, ವ್ಯವಹಾರಗಳಲ್ಲಿ ನಿಧಾನಗತಿಯ ಮುನ್ನಡೆ. ಅನಿರೀಕ್ಷಿತ ಧನಾಗಮನ. ದಾಂಪತ್ಯದಲ್ಲಿ ಸುಖ. ಯುವಕ-ಯುವತಿಯರಿಗೆ ವಿವಾಹಾದಿ ಯೋಗಗಳು. ವಿದ್ಯಾರ್ಥಿಗಳಿಗೆ ಉದಾಸೀನತೆಯಿಂದ ಹಿನ್ನಡೆ. ಆರೋಗ್ಯದಲ್ಲಿ ಹಿನ್ನಡೆ.
ಪರಿಹಾರ
ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:
°~•~°~•~°~•~°~•~°~•~°
ಮಿಥುನ
ಕೆಲಸ ಕಾರ್ಯಗಳಲ್ಲಿ ವಿಘ್ನ. ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಬೇಕು. ಹಣಕಾಸಿನ ವಿಚಾರದಲ್ಲಿ ತೊಂದರೆ. ವಾಹನದಲ್ಲಿ ಜಾಗರೂಕರಾಗಿರಬೇಕು. ದಾಂಪತ್ಯದಲ್ಲಿ ಕಲಹ. ರಕ್ತಕ್ಕೆ ಸಂಬಂಧಿಸಿದ ತೊಂದರೆಗಳು ಬರುವ ಸಾಧ್ಯತೆ. ವಿದ್ಯಾರ್ಥಿಗಳು ಉದಾಸೀನತೆಯಿಂದ ಹಿನ್ನಡೆಯನ್ನು ಪಡೆಯುವಿರಿ.
ಪರಿಹಾರ
ಶ್ರೀರಾಮಚಂದ್ರನ ಆರಾಧನೆಯಿಂದ ಶುಭ.
ಜಪಿಸಲು:
ಆಪದಾಮಪಹರ್ತಾರಂ
ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ
ಭೂಯೋ ಭೂಯೋ ನಮಾಮ್ಯಹಮ್ ||
°~•~°~•~°~•~°~•~°~•~°
ಕರ್ಕಾಟಕ
ಉದ್ಯೋಗ, ವ್ಯವಹಾರಗಳಲ್ಲಿ ಮಾನಸಿಕ ಕಿರಿಕಿರಿ. ವೃಥಾ ಆರೋಪ. ಖರ್ಚುವೆಚ್ಚಗಳು ಕಾರಣವಿಲ್ಲದೆ ಬರುವುದು. ದಾಂಪತ್ಯದಲ್ಲಿ ಅನಾವಶ್ಯಕ ಜಗಳ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ದೊರೆಯದೆ ಇರುವುದು. ಆರೋಗ್ಯದಲ್ಲಿ ಹಿನ್ನಡೆ.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.
ಜಪಿಸಲು:
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ
ದುರ್ಗೇದೇವಿ ನಮೋಸ್ತುತೇ ||
°~•~°~•~°~•~°~•~°~•~°
ಸಿಂಹ
ಉದ್ಯೋಗ, ವ್ಯವಹಾರಗಳಲ್ಲಿ ನಿಧಾನಗತಿಯ ಮುನ್ನಡೆ. ಆ ಕೆಲಸಗಳಿಗೆ ವಿಘ್ನ. ಶತ್ರು ಭೀತಿ. ಉದರ ಸಂಬಂಧಿ ಕಾಯಿಲೆಗಳು ಬರುವಂತಹ ಸಾಧ್ಯತೆಗಳು ಇವೆ. ಆಹಾರದಲ್ಲಿ ನಿಯಂತ್ರಣವಿರಲಿ. ಹೊಸ ವಾಹನ ಯೋಗಾದಿಗಳು ಇದೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉತ್ತಮ ಫಲ.
ಪರಿಹಾರ
ಶಿವನ ಆರಾಧನೆ ಅಗತ್ಯ. ಶಿವದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ, ಲಿಂಗಾಷ್ಟಕ ಶ್ಲೋಕವನ್ನು ಪಠಿಸುವುದರಿಂದ ಶುಭ.
ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ
°~•~°~•~°~•~°~•~°~•~°
ಕನ್ಯಾ
ಉದ್ಯೋಗ, ವ್ಯವಹಾರಗಳಲ್ಲಿ ನೂತನ ಅವಕಾಶ ಬರುವ ಸಾಧ್ಯತೆಗಳು ಇವೆ. ಉದಾಸೀನತೆಯಿಂದ ಹಾಗೂ ಕೋಪದಿಂದ ಆತ್ಮೀಯರಿಂದ ದೂರ ಹೋಗುವಿರಿ. ಗಂಟು ನೋವು, ಮೈ ಕೈ ನೋವು, ತುರಿಕೆ, ಅಲರ್ಜಿ ಮುಂತಾದ ತೊಂದರೆಗಳು ಬರುವ ಸಾಧ್ಯತೆಗಳು ಇವೆ. ದಾಂಪತ್ಯದಲ್ಲಿ ವಿಘ್ನಗಳು ಬರುತ್ತವೆ. ಪ್ರಯಾಣದಲ್ಲಿ ವಿಘ್ನಗಳು ಬರುತ್ತವೆ. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಮುನ್ನಡೆಯಬೇಕು.
ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ ಶುಭ.
ಜಪಿಸಲು:
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ|
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||
°~•~°~•~°~•~°~•~°~•~°
ತುಲಾ
ವ್ಯಾವಹಾರಿಕ ಕ್ಷೇತ್ರದಲ್ಲಿ ತೊಂದರೆಗಳು. ಮಾನಸಿಕವಾದಂತಹ ಕಿರಿಕಿರಿ. ಅಧಿಕಾರಿಗಳಿಂದ ತೊಂದರೆ ಬರುವುದು. ಹೊಟ್ಟೆಗೆ ಸಂಬಂಧಿಸಿದಂತಹ ತೊಂದರೆಗಳು ಬರುವ ಸಾಧ್ಯತೆ ಇರುವುದರಿಂದ ಆಹಾರದಲ್ಲಿ ನಿಯಂತ್ರಣವನ್ನು ಮಾಡಬೇಕು. ಕೋಪೋದ್ರಿಕ್ತಗೊಳ್ಳಬಾರದು. ವಿದ್ಯಾರ್ಥಿಗಳಿಗೆ ಉತ್ತಮವಾದಂತಹ ಪ್ರಯತ್ನ ಅತ್ಯಗತ್ಯವಾಗಿದೆ.
ಪರಿಹಾರ
ದುರ್ಗಾದೇವಿಯ ಶ್ಲೋಕ ಪಠಿಸುವುದರಿಂದ ಶುಭ.
ಜಪಿಸಲು:
ಅತಿಮಧುರಚಾಪಹಸ್ತಾಮ್
ಅಪರಿಮಿತಾ-ಮೋಘಬಾಣ-ಸೌಭಾಗ್ಯಾಮ್ |
ಅರುಣಾಮತಿಶಯಕರುಣಾಮ್
ಅಭಿನವಕುಲಸುಂದರೀಂ ವಂದೇ ||
°~•~°~•~°~•~°~•~°~•~°
ವೃಶ್ಚಿಕ
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ನಿಧಾನಗತಿಯ ಮುನ್ನಡೆ. ಹಣಕಾಸಿನ ವಿಚಾರಗಳಲ್ಲಿ ತೊಂದರೆಯನ್ನು ಅನುಭವಿಸುವಿರಿ. ಆರ್ಥಿಕವಾದಂತಹ ಹಿನ್ನಡೆಯನ್ನು ಹೊಂದುವಿರಿ. ದಾಂಪತ್ಯದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾದೀತು. ರಕ್ತ ಸಂಬಂಧಿ ಹಾಗೂ ಪಿತ್ತ ಸಂಬಂಧಿ ತೊಂದರೆಗಳು ಬರುತ್ತವೆ. ವಿದ್ಯಾರ್ಥಿಗಳು ಉದಾಸೀನತೆಯನ್ನು ಬಿಟ್ಟು ನಡೆದರೆ ಮಾತ್ರ ಯಶಸ್ಸು.
ಪರಿಹಾರ
ದೇವಿಯ ಆರಾದನೆಯಿಂದ ಶುಭ.
ಜಪಿಸಲು:
ಸರ್ವಮಂಗಲಮಾಂಗಲ್ಯೇ
ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ ||
°~•~°~•~°~•~°~•~°~•~°
ಧನು
ವ್ಯಾವಹಾರಿಕ ಕ್ಷೇತ್ರದಲ್ಲಿ ಸಣ್ಣ ಮಟ್ಟಿನಲ್ಲಿ ಮುನ್ನಡೆ. ತಟಸ್ಥಗೊಂಡಿದ್ದಂತಹ ಕೆಲಸದಲ್ಲಿ ಸಣ್ಣ ಮಟ್ಟಿನಲ್ಲಿ ಮುನ್ನಡೆ. ಕಾರ್ಯಚಟುವಟಿಕೆಗಳಲ್ಲಿ ಚೇತರಿಕೆ ಕಾಣಿಸುವುದು. ದಾಂಪತ್ಯ ಜೀವನದಲ್ಲಿ ಸುಖ. ಪ್ರಯಾಣದಲ್ಲಿ ಸುಖ. ವಿದ್ಯಾರ್ಥಿಗಳು ಆಲಸ್ಯವನ್ನು ಬಿಟ್ಟು ಮುನ್ನಡೆದಲ್ಲಿ ಸಫಲತೆಯನ್ನು ಕಾಣುವಿರಿ.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ.
ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ / ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ
°~•~°~•~°~•~°~•~°~•~°
ಮಕರ
ವ್ಯವಹಾರ ಕ್ಷೇತ್ರಗಳಲ್ಲಿ ಸಣ್ಣ ಮಟ್ಟಿನಲ್ಲಿ ಹಿನ್ನಡೆ ಹಾಗೂ ನಿಮ್ಮಿಂದ ಶಿಸ್ತಿನ ಕಾರ್ಯವೈಖರಿಯನ್ನು ಅಪೇಕ್ಷಿಸುವರು. ಮಾತಿನಲ್ಲಿ ನಿಗಾ ಇರಲಿ, ಜಗಳಗಳು ಆಗುವಂತಹ ಸಾಧ್ಯತೆಗಳು ಬಹಳ ಇವೆ. ಸಹೋದ್ಯೋಗಿಗಳೊಂದಿಗೆ ಶಾಂತ ರೀತಿಯಿಂದ ವರ್ತಿಸಿ. ದಾಂಪತ್ಯದಲ್ಲಿ ಕಲಹ. ಅಲರ್ಜಿ, ಚರ್ಮರೋಗ, ಶೀತ, ಕಫ, ತಲೆನೋವು, ಹೊಟ್ಟೆ ನೋವು ಮುಂತಾದ ತೊಂದರೆಗಳು ಬರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ.
ಪರಿಹಾರ
ಶಿವ ದೇವಸ್ಥಾನ ದರ್ಶನ, ರುಧ್ರಾಭಿಷೇಕ, ಕುಲದೇವತಾರಾಧನೆಯಿಂದ ಶುಭ.
ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ
°~•~°~•~°~•~°~•~°~•~°
ಕುಂಭ
ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ನಿಧಾನಗತಿಯ ಮುನ್ನಡೆ. ಹಣಕಾಸಿನ ವಿಚಾರಗಳಲ್ಲಿ ತೊಂದರೆ. ಮಾನಸಿಕವಾದಂತಹ ಕಿರಿಕಿರಿ. ಶೀತ, ಜ್ವರ ಮುಂತಾದ ತೊಂದರೆಗಳು ಬರುತ್ತವೆ. ಮಾತಿನ ಮೂಲಕ ಜಗಳವಾಗುವಂತಹ ಸಾಧ್ಯತೆಗಳು ಇದೆ ಆದ ಕಾರಣ ಜಾಗರೂಕರಾಗಿರಬೇಕು. ಪ್ರಯಾಣಗಳಲ್ಲಿ ವಿಘ್ನ. ಆರೋಗ್ಯದಲ್ಲಿ ಏರುಪೇರು. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ವಿಘ್ನತೆಗಳು ಬರುವುದು.
ಪರಿಹಾರ
ಶಿವದೇವಸ್ಥಾನ ದರ್ಶನ, ರುಧ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.
ಜಪಿಸಲು:
ಜಯ ದೇವ ಜಗನ್ನಾಥ
ಜಯ ಶಂಕರ ಶಾಶ್ವತ|
ಜಯ ಸರ್ವಸುರಾಧ್ಯಕ್ಷ
ಜಯ ಸರ್ವಸುರಾರ್ಚಿತ||
°~•~°~•~°~•~°~•~°~•~°
ಮೀನ
ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ಹಿನ್ನಡೆ. ಮಾನಸಿಕವಾದಂತಹ ಕಿರಿಕಿರಿ. ಉದಾಸೀನತೆಯಿಂದ ಬರುವಂತಹ ಅವಕಾಶವನ್ನು ಕಳೆದುಕೊಳ್ಳುವಿರಿ. ನಿಮ್ಮ ಕೋಪದಿಂದ ಕುಟುಂಬದಲ್ಲಿ ಶಾಂತಿಯು ಕಳೆದುಹೋಗುವುದು. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ ಲಭ್ಯ.
ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ.
ಜಪಿಸಲು:
ಯಸ್ಯಸ್ಮರಣಮಾತ್ರೇಣ
ಜನ್ಮಸಂಸಾರಬಂಧನಾತ್|
ವಿಮುಚ್ಯತೇ ನಮಸ್ತಸ್ಮೈ
ವಿಷ್ಣವೇ ಪ್ರಭವಿಷ್ಣವೇ ||
{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}