ಕೊಪ್ಪ: ಶ್ರೀ ಕ್ಷೇತ್ರ ಶಕಟಪುರದ ಶ್ರೀ ವಿದ್ಯಾ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು.
ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠಾಧೀಶ್ವರರಾದ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ದರ್ಶನ ಹಾಗೂ “ನವರಾತ್ರ ನಮಸ್ಯಾ” ಆಮಂತ್ರಣ ಪ್ರತಿಯನ್ನು ಸಮರ್ಪಿಸಿದ ಶ್ರೀರಾಮಚಂದ್ರಾಪುರ ಮಠದ ನಿಯೋಗ.
ಮಠದ ನಿಯೋಗದಲ್ಲಿ ಲೋಕಸಂಪರ್ಕ ತಂಡದ ರಾಮಚಂದ್ರ ಭಟ್ ಕೆಕ್ಕಾರು, ನಾರಾಯಣ ಭಾಗವತ್, ಸೂರ್ಯ ನಾರಾಯಣ, ಶಂಕರ ನಾರಾಯಣ (ಹಿರೇ ಗಂಗೆ) ತೆರಳಿದ್ದರು.