ಮುಳ್ಳೇರಿಯಾ: ಚಂದ್ರಗಿರಿ ವಲಯದ ಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ ನೀಡಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ತಂಡ ಭೇಟಿಯಿತ್ತು ಸಮರಸ ಕಟ್ಟಡ ನಿರ್ಮಾಣ ಹಂತವನ್ನು – ವ್ಯವಸ್ಥೆಯನ್ನು ಕೂಲಂಕುಶವಾಗಿ ತಿಳಿದುಕೊಂಡರು.
ವಾಸ್ತುತಜ್ಞ ಬೆಳ್ಳಿಗೆ ನಾರಾಯಣ ಭಟ್ಟರು ನಕ್ಷೆಯಲ್ಲಿನ ವ್ಯವಸ್ಥೆ, ಗುರುನಿವಾಸದ ವ್ಯವಸ್ಥೆ ಬಗ್ಗೆಯೂ ಸಮಗ್ರ ಮಾಹಿತಿ ನೀಡಿದರು. ಟ್ರಸ್ಟ್ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ ಈ ಹಿಂದಿನ ಸಮಗ್ರ ಮಾಹಿತಿ ನೀಡಿದರು. ಖಜಾಂಜಿ ಹರಿಪ್ರಸಾದ ಪೆರುಮುಖ, ಸಹಕಾರ್ಯದರ್ಶಿ ನವನೀತಪ್ರಿಯ ಕೈಪ್ಪಂಗಳ, ಸದಸ್ಯರಾದ ಡಾ ಶಿವಕುಮಾರ ಅಡ್ಕ, ಬೆಳ್ಳಿಗೆ ಕೃಷ್ಣಪ್ರತೀಕ ಉಪಸ್ಥಿತರಿದ್ದರು.