ಗುಂಪೆ ವಲಯದ ಸಪ್ಟಂಬರ್ ತಿಂಗಳ ಸಭೆ

ಇತರೆ

ಧರ್ಮತ್ತಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಪ್ಟಂಬರ್ ತಿಂಗಳ ಸಭೆಯು ಸೆ.3ರಂದು ವಲಯ ಕಛೇರಿಯಲ್ಲಿ ನಡೆಯಿತು.

ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅಧ್ಯಕ್ಷತೆಯಲ್ಲಿ ವಹಿಸಿದ್ದರು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು. ಮುಳ್ಳೇರಿಯ ಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಮಹೇಶ್ ಕೃಷ್ಣ ತೇಜಸ್ವಿ ಮಾಹಿತಿಗಳನ್ನು ನೀಡಿದರು.

ಸಪ್ಟಂಬರ್ 22 ರಿಂದ ಅಕ್ಟೋಬರ್ 4 ರವರೆಗೆ ಸಾಗರದ ರಾಘವೇಶ್ವರ ಭವನದಲ್ಲಿ ಜರಗುವ ನವರಾತ್ರ ನಮಸ್ಯ ಕಾರ್ಯಕ್ರಮದ ವಿವರವನ್ನು ಸಭೆಯಲ್ಲಿ ನೀಡಲಾಯಿತು ಮತ್ತು ಆಮಂತ್ರಣ ಪತ್ರಿಕೆ ಯನ್ನು ವಿತರಿಸಲಾಯಿತು.

ನೂತನ ಪದಾಧಿಕಾರಿಗಳಿಗೆ ಶ್ರೀ ಗುರುಗಳು ಅನುಗ್ರಹಿಸಿದ ನಿಯುಕ್ತಿ ಪತ್ರ ಹಾಗೂ ಮಂತ್ರಾಕ್ಷತೆಯನ್ನು ನೀಡಲಾಯಿತು. ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನ ಸಭಾಭವನ ನಿರ್ಮಾಣ ಕಾರ್ಯಕ್ಕೆ ಶ್ಯಾಮ ಪ್ರಕಾಶ ಪುಣಿಯೂರು ಸಮರ್ಪಣೆ ಮಾಡಿದರು.

ಶ್ರೀ ಸಂಸ್ಥಾನದವರ ಸುವರ್ಣ ವರ್ಧಂತಿಯ ಭಾಗವಾಗಿ ನೆಟ್ಟು ಬೆಳೆಸಲು ಸಾಂಕೇತಿಕವಾಗಿ ಶ್ರೀರಾಮ ಬಳ್ಳಿಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *