ಗೋಕರ್ಣ: ಅಶೋಕೆಯಲ್ಲಿ ನಡೆದ ಮುಳ್ಳೇರಿಯಾ ಮಂಡಲದ ಛಾತ್ರ ಭಿಕ್ಷೆಯಂದು ಶ್ರೀರಾಮಚಂದ್ರಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ವಿ. ವಿ. ವಿ. ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳ ಸಾಂಕೇತಿಕವಾಗಿ ಸಮರ್ಪಣೆ ಮಾಡಲಾಗಿತ್ತು.
ಗುಂಪೆ ವಲಯದ ಮಾತೃಪ್ರಧಾನೆ ಗುಂಪೆ ಕಾವೇರಿ ಅಮ್ಮ ವಾಗ್ದಾನ ಮಾಡಿದಂತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಅಂದಾಜು ೨೦,೦೦೦ ಮೌಲ್ಯದ ಕಲಿಕೋಪಕರಣಗಳನ್ನು ಶ್ರೀಮಠದ ಶಾಸನತಂತ್ರದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ ಎಡಪ್ಪಾಡಿ ಮೂಲಕ ಸೆ.೧೫ ರಂದು ಸಮರ್ಪಣೆ ಮಾಡಿದರು. ಅಶೋಕೆಯ ಇಂಜಿನಿಯರ್ ವಿಷ್ಣುಪ್ರಸಾದ್ ಬನಾರಿ ಉಪಸ್ಥಿತರಿದ್ದರು.