ಅಂಬಾಗಿರಿ: ಶ್ರೀರಾಮಕೃಷ್ಣ ಕಾಳಿಕಾ ಭವಾನಿ ದೇವಿಯ ಪ್ರತಿಷ್ಠಾಪನಾ 35 ನೇ ವಾರ್ಷಿಕೋತ್ಸವ 2-11-2025, 3/12/2025 ರಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
2-11-2025ರಂದು ಮಂಗಳವಾರ ಬೆಳಿಗ್ಗೆ 11:00 ಘಂಟೆಗೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಶ್ರೀ ಗುರುಪಾದುಕಾ ಸ್ತೋತ್ರ ಪಠಣ ಅಲ್ಲದೇ ಧ್ವಜಾರೋಹಣ ನಡೆಯಿತು. ಸಾಯಂಕಾಲ ಕರ್ಮಾಂಗ ಪ್ರಾರಂಭ, ಕಲಶ ಸ್ಥಾಪನೆ, ಬಲಿ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
3/12/2025 ಬುಧವಾರ ಬೆಳಿಗ್ಗೆ 8ಘಂಟೆಯಿಂದ ಶತಚಂಡಿ ಹವನದ ನಿಮಿತ್ತ 108 ಕಲಶಾಭಿಷೇಕ ,ನವಕುಂಡದಲ್ಲಿ ಅಧಿವಾಸ ಹೋಮ, ಕಲಾವೃಧ್ಧಿಹೋಮ ಹಾಗೂ ಶತಚಂಡಿ ಹವನದ ಪೂರ್ಣಾಹುತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು .ಪೂರ್ಣಾಹುತಿಯ ನಂತರ ಮಹಾಮಂಗಳಾರತಿ ,ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿದವು. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳೂ ವೇ.ಮೂ. ಶಂಕರ ಭಟ್ಟ ಕಟ್ಟೆ ಇವರ ಪ್ರಧಾನಾಚಾರ್ಯತ್ವದಲ್ಲಿ ಜರುಗಿತು. ಸುಜಯ ಹಾಗೂ ಶ್ರೀಧರ ಹೆಗಡೆ ದಂಪತಿಗಳ ಯಾಜಮಾನತ್ವದಲ್ಲಿ ಅನೇಕ ಋತ್ವಿಜರೊಡಗೂಡಿ ಶ್ರದ್ಧಾ ಭಕ್ತಿ ಭಾವದೊಂದಿಗೆ ಸಂಪನ್ನಗೊಂಡಿತು.
ದೇವಸ್ಥಾನದ ನಿರ್ವಹಣಾ ಸಮಿತಿ, ಆಂಬಾಗಿರಿ ಹವ್ಯಕ ವಲಯ ಹಾಗೂ ದೇವಸ್ಥಾನದ ನವನಿರ್ಮಾಣ ಸಮಿತಿಯ ಪದಾಧಿಕಾರಿಗಳು ಸಿದ್ದಾಪುರ ಹವ್ಯಕ ಮಂಡಲದ ಪದಾಧಿಕಾರಿಗಳು , ಎಲ್ಲಾ ಗುರಿಕ್ಕಾರರು, ಮಾತೆಯರು ಹಾಗೂ ಸಕಲ ಸದ್ಭಕ್ತರು ಪಾಲ್ಗೊಂಡು ದೇವಿಯನ್ನು ಆರಾಧಿಸಿ ಕೃತಾರ್ಥರಾದರು.