ಶ್ರೀಶಂಕರರ ಪರ್ವಕ್ಕೆ ಶುಭಾಕ್ಷತೆಯ ಆರಂಭ

ಲೇಖನ


ಸಿದ್ದಾಪುರ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಧರೆಗವತರಿಸಿದ ಪುಣ್ಯದಿನ ವೈಶಾಖ ಶುಕ್ಲ‌ ಪಂಚಮೀ. ತದಂಗವಾಗಿ ‘ಶಂಕರಪಂಚಮೀ’ ಕಾರ್ಯಕ್ರಮವು 20-04-2026 ರಿಂದ 22-04-2026ರ ವರೆಗೆ ಶ್ರೀರಾಮದೇವ ಭಾನ್ಕುಳಿಮ~ಗೋಸ್ವರ್ಗದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ-ಮಾರ್ಗದರ್ಶನಗಳೊಂದಿಗೆ ಪರಮಗುರುಗಳನ್ನು-ಜಗದ್ಗುರುಗಳನ್ನು ಆರಾಧಿಸುವ ಪುಣ್ಯಕಾರ್ಯಗಳು ನಡೆಯಲಿವೆ.

ಅಕ್ಕಿಕಾಳು ಅರಸಿನ – ಕುಂಕುಮಗಳೊಂದಿಗೆ ಚೆನ್ನಾಗಿ ಬೆರೆತರೆ ಮಾತ್ರ ಅಕ್ಷತೆಯಾಗಬಲ್ಲುದು. ಆ ಹದ ನೋಡಿ ಅದನ್ನು ಕಲಸಿ ಅಕ್ಕಿ ಕಾಳನ್ನು ಅಕ್ಷತೆಯಾಗಿಸುವುದೇ ಒಂದು ಮಂಗಲಕಾರ್ಯ. ಶುಭಕಾರ್ಯಕ್ಕೆ ಬಳಸುವ ಅಕ್ಷತೆಯನ್ನು ಮಾಡಲು ಶುದ್ಧಾಂತರಂಗ ಬೇಕು. ಜಗದ್ಗುರುಗಳನ್ನು ಅರ್ಚಿಸಲು ಬೇಕಾದ ಪರಿಶುದ್ಧ ಮನವನ್ನು ಜ್ಞಾಪಿಸುವ ಈ ಮಂಗಲಾಕ್ಷತೆಯನ್ನು ಸಮಸ್ತ ಭಕ್ತರಿಗೆ ನೀಡಿ ‘ಶಂಕರಪಂಚಮೀ’ ಮಹೋತ್ಸವಕ್ಕೆ ಅಹ್ವಾನಿಸುವ ಯೋಜನೆ ‘ಅಕ್ಷತಾಭಿಯಾನ’. ತದಂಗವಾಗಿ ಮಾತೆಯರು ಇಂದು ಅಕ್ಷತೆಯನ್ನು ಕಲಸಿ ಶುಭ ಕಾರ್ಯಕ್ರಮದ ಮುನ್ನುಡಿಯಾಗಿ ಶುಭಾಭಿಯಾನಕ್ಕೆ ಶುಭಾರಂಭವಿತ್ತರು.

Leave a Reply

Your email address will not be published. Required fields are marked *