ಮಾಲೂರು: ಮಾಲೂರು ತಾಲೂಕು ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಅಂಗವಾಗಿ ನವೆಂಬರ್ 8 ರ ಸಂಜೆ ಗೋಪೂಜೆ ನಡೆಯಿತು.
ವೇ. ಮೂ. ಗೋಪಾಲಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ಗೋ ಆಶ್ರಮ ನಿರ್ವಹಣಾ ಸಮಿತಿ ಕೋಶಾಧ್ಯಕ್ಷರು ಸೇರಿದ ಸಮಸ್ತರ ಪರವಾಗಿ ಗೋಪೂಜೆ ನಡೆಸಿದರು.
ಅನಂತರ ದೀಪಾವಳಿ ಬೆಳಕನ್ನು ಗೋಶಾಲೆಯಲ್ಲೂ ಮೂಡಿಸುವ ಉದ್ದೇಶದಿಂದ ಗೋಶಾಲೆ ಉದ್ದಕ್ಕೂ ಹಣತೆಯನ್ನು ಹಚ್ಚಿ ದೀಪೋತ್ಸವ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿರುವ ಶ್ರೀ ಸಿದ್ಧ ಆಂಜನೇಯಸ್ವಾಮಿ ದೇವರಿಗೂ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿದರು.
ಗೋಪೂಜೆ ಹಾಗೂ ಕಾರ್ತೀಕೋತ್ಸವದಲ್ಲಿ ಶ್ರೀರಾಮಚಂದ್ರಾಪುರಮಠದ ಮಾಧ್ಯಮಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ, ನಿರ್ವಹಣಾ ಸಮಿತಿ ಅಧ್ಯಕ್ಷ ಮುರಳೀಕೃಷ್ಣ, ಕಾರ್ಯದರ್ಶಿ ಮಂಜುನಾಥ್, ಸದಸ್ಯರಾದ ಶಿವಕುಮಾರ್, ಅರವಿಂದ ಶರ್ಮಾ, ಕಮಲಾಕರ್, ಲಕ್ಷ್ಮೀಶ ಭಾಗವಹಿಸಿದ್ದರು.