ಗುರ್ವನುಗ್ರಹ ಪಡೆದ ಗೋಮಾಂತಕ ಸಮಾಜ

ಸುದ್ದಿ

ಅಶೋಕೆ: ನಿಜ ಜ್ಯೇಷ್ಠ ಶುಕ್ಲ ಪಾಡ್ಯದಂದು (16-06-2026) ಗೋಮಾಂತಕ ಸಮಾಜದ ಅನೇಕ ಶಿಷ್ಯರು ಅಶೋಕೆಗೆ ಆಗಮಿಸಿ ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದ-ಮಂತ್ರಾಕ್ಷತೆಗಳನ್ನು ಪಡೆದರು.

ಈ ಹಿಂದೆ, ಗೋಮಾಂತಕ ಸಮಾಜದವರು ತಮ್ಮ ಸಮಾಜಕ್ಕೆ ಗುರುಪೀಠವಾಗಿ ಶ್ರೀರಾಮಚಂದ್ರಾಪುರ ಮಠ ಇರಬೇಕು ಎಂದು ಶ್ರೀಮಠದ ೩೫ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರಲ್ಲಿ ಪ್ರಾರ್ಥಿಸಿ ಅನುಗ್ರಹ ಮಂತ್ರಾಕ್ಷತೆ ಪಡೆದಿದ್ದರು. ಅಂದಿನಿಂದಲೂ ಗೋಮಾಂತಕ ಸಮಾಜ ಶ್ರೀಮಠದ ಶಿಷ್ಯರಾಗಿ ನಡೆದುಕೊಳ್ಳುತ್ತಿದೆ. ಆದರೆ ಸಮಾಜಬಾಂಧವರು ರಾಜ್ಯದ ವಿವಿಧೆಡೆ ನೆಲೆಸಿರುವ ಕಾರಣ, ಸಾಮೂಹಿಕವಾಗಿ ಬಂದು ಸೇವೆಗೈಯ್ಯಲು ಸಾಧ್ಯವಾಗಿರಲಿಲ್ಲ.

ಇದೀಗ ಪುನಃ ಒಗ್ಗೂಡಿ ಶ್ರೀಮಠಕ್ಕೆ ಬಂದು ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದವನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶ್ರೀಸಂಸ್ಥಾನದವರು ಆಶೀರ್ವಚನವನ್ನು ಅನುಗ್ರಹಿಸಿ ‘ಮಗುವು ಪುನಃ ತಾಯಿಯ ಮಡಿಲನ್ನು ಸೇರಿದಂತೆ ಆಯಿತು. ನೀವು ಪ್ರತಿಯೊಬ್ಬರೂ ಉನ್ನತಿಯನ್ನು ಸಾಧಿಸುವಂತಾಗಲಿ’ ಎಂದು ಹರಸಿದರು. ಗೋಮಾಂತಕ ಸಮಾಜದ ರಕ್ಷಣೆ-ವಿಕಾಸಕ್ಕಾಗಿ ಅಗತ್ಯ ಯೋಜನೆಗಳನ್ನು ರೂಪಿಸಲು ಮಾರ್ಗದರ್ಶಿಸಿದರು.

Leave a Reply

Your email address will not be published. Required fields are marked *