ಭಾನ್ಕುಳಿ: ಗೋಸ್ವರ್ಗ ಶ್ರೀರಾಮದೇವ ಭಾನ್ಕುಳಿ ಮಠದಲ್ಲಿ ಹವ್ಯಕ ಮಹಾಮಂಡಲದಿಂದ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಕಾರ್ಯಾಗಾರ ನಡೆಯಿತು.
ಸಿದ್ದಾಪುರ ಮಂಡಲದ ಪದಾಧಿಕಾರಿಗಳಿಗೆ ಮಠದ ಯೋಜನೆ, ನೂತನ ಶಾಸನತಂತ್ರದ ಮಾಹಿತಿ, ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ನಡೆದ ಕಾರ್ಯಾಗಾರದ ನೇತೃತ್ವವನ್ನು ಸೇವಾಖಂಡದ ಶ್ರೀಸಂಯೋಜಕರಾದ ಮಹೇಶ ಚಟ್ನಳ್ಳಿ ವಹಿಸಿದ್ದರು. ಮಹಾಮಂಡಲದ ಪ್ರಮುಖರು ಪಾಲ್ಗೊಂಡು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ, ಉಪಾಧ್ಯಕ್ಷೆ ಶೈಲಜಾ ಕೊಂಕೋಡಿ, ಕೋಶಾಧ್ಯಕ್ಷ ಜಿ.ಜಿ.ಹೆಗಡೆ, ಕಾರ್ಯದರ್ಶಿ ನಾಗರಾಜ ಭಟ್ಟ ಪಿದಮಲೆ, ಸಂಘಟನಾ ಕಾರ್ಯದರ್ಶಿ ಪ್ರಖ್ಯಾತ ರಾವ್, ಸಂಘಟನಾ ಖಂಡ ಶ್ರೀ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಮಾತೃ ಪ್ರಧಾನ ದೇವಕೀ ಭಟ್ಟ, ಧಾರ್ಮಿಕ ಪ್ರಧಾನ ನೀಲಕಂಠ ಯಾಜಿ, ಸೇವಾ ಪ್ರಧಾನ ಎಮ್.ಜಿ. ರಾಮಚಂದ್ರ, ಸಹಾಯ ಪ್ರಧಾನ ಶ್ರೀಕಾಂತ ಪಂಡಿತ, ವಿಧ್ಯಾರ್ಥಿ ವಾಹಿನಿ ಸಂಧ್ಯಾ ಕಾನತ್ತೂರು ಮುಂತಾದವರು ಪಾಲ್ಗೊಂಡು ಸಮಗ್ರ ಮಾಹಿತಿ ನೀಡಿದರು.
ಮಾತೃತ್ವಂ ವಿಭಾಗದ ಮಾಸದಮಾತೆ ಯೋಜನೆಯ ಕುರಿತು ಸಮಗ್ರ ಮಾಹಿತಿಗಳನ್ನು ನೀಡಿ ಗೋಸಂರಕ್ಷಣಾ ಕಾರ್ಯಕ್ಕಾಗಿ ಮಾತೆಯರನ್ನು ಸಜ್ಜುಗೊಳಿಸಲಾಯಿತು. ಬೆಳಿಗ್ಗೆ ಗುರುವಂದನೆಯ ಮೂಲಕ ಆರಂಭವಾದ ಕಾರ್ಯಕ್ರಮ ಶಾಂತಿಮಂತ್ರದೊಂದಿಗೆ ಸಂಜೆ ಕಾರ್ಯಾಗಾರ ಮುಕ್ತಾಯವಾಯಿತು. ಸುಮಾರು ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಂಡು ಮಾಹಿತಿಗಳನ್ನು ಪಡೆದರು.