ಪ್ರತಿಭಾ ಪುರಸ್ಕಾರ

ಸುದ್ದಿ

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಆತ್ರೇಯ ಮಂಜುಳಗಿರಿ ವೆಂಕಟೇಶನಿಗೆ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಪ್ರತಿಭಾ ಪುರಸ್ಕಾರವನ್ನು ಅನುಗ್ರಹಿಸಿದರು.

 

ಕುಮಟಾ ಹವ್ಯಕ ಮಂಡಲಾಂತರ್ಗತ ಕಾರವಾರ – ಅಂಕೋಲಾ ವಲಯದ ಯಶೋದಾ ಗಿರಿ ಹಾಗೂ ಡಾ| ವೆಂಕಟೇಶ ಮಂಜುಳಗಿರಿ ಇವರ ಪುತ್ರ ಆತ್ರೇಯ ಮಂಜುಳಗಿರಿ ವೆಂಕಟೇಶ, ಯುರೋಪಿಯನ್ ಒಕ್ಕೂಟದ ಮೇಡಂ ಮೇರಿ ಕ್ಯೂರಿ ಫೆಲೋಶಿಪ್ ಗೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆಗೈದು ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರನಾಗಿದ್ದಾನೆ.
ಪ್ರಪಂಚದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದ ಈ ಫೆಲೋಶಿಪ್ ಗೆ ಆಯ್ಕೆಯಾದ ಏಕಮಾತ್ರ ವಿದ್ಯಾರ್ಥಿ ಆತ್ರೇಯ ಮಂಜುಳಗಿರಿ ವೆಂಕಟೇಶ ಎನ್ನುವುದು ಸಮಾಜಕ್ಕೂ ದೇಶಕ್ಕೂ ಹೆಮ್ಮೆಯ ವಿಷಯವಾಗಿದೆ.

Leave a Reply

Your email address will not be published. Required fields are marked *