ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಈ ದಿನ ಸ್ಮರಿಸಬೇಕಾದ ಭಾರತೀಯರಾದ ನಮ್ಮ ಆದ್ಯ ಕರ್ತವ್ಯ – ಶ್ರೀ ರಾಜಶೇಖರ್ ಕಾಕುಂಜೆ

ವಿದ್ಯಾಲಯ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಸಲಾಯಿತು.

ಬಿ.ಎ.ಎಸ್.ಎಫ್. ಪ್ರಧಾನ ವ್ಯವಸ್ಥಾಪಕ ಶ್ರೀ ರಾಜಶೇಖರ್ ಕಾಕುಂಜೆ ಇವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಾರತೀಯರನ್ನು ಈ ದಿನ ಸ್ಮರಿಸಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಕೋವಿಡ್ – 19 ರ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಅರಿವು ಮೂಡಿಸಿದರು.

ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಕುಡ್ಲ ಇದರ ಅಧ್ಯಕ್ಷ ಶ್ರೀ ಹರೀಶ್ ಕೆ., ಕಾರ್ಯದರ್ಶಿ ಶ್ರೀ ಶ್ರೀಧರ್ ರಾಜ್ ಶೆಟ್ಟಿ ಮತ್ತು ವಲಯ ಅಧ್ಯಕ್ಷ ಶ್ರೀ ಚಂದ್ರಹಾಸ ರೈ ಅವರು ಭಾಗವಹಿಸಿದರು.

ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಎಂ. ಟಿ.ಭಟ್, ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸುಭದ್ರಾ ಭಟ್, ಶ್ರೀ ಭಾರತೀ ಸಮೂಹ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ ಕುಮಾರ್ ಕೆ.ಎಸ್. ಹಾಗೂ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು.

ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಭಟ್ ಸ್ವಾಗತಿಸಿ, ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯ ಗುರುರಾಜ್ ಭಟ್ ವಂದಿಸಿದರು.

Author Details

Avatar
Srimukha

Leave a Reply

Your email address will not be published. Required fields are marked *