ಬೆಂಗಳೂರು: ನವೆಂಬರ್ 14ರ ಮಕ್ಕಳ ದಿನಾಚರಣೆಯನ್ನು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಛದ್ಮವೇಷ ಸ್ಪರ್ಧೆಯೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.
ಮಕ್ಕಳು ಭೂಮಿ, ನೀರು, ಪರಿಸರ, ಭೀಮ, ಶ್ರೀಕೃಷ್ಣ, ರಾಧೆ, ದಾಸರು, ವಾಟ್ಸಪ್ ಹೀಗೆ ವಿವಿಧ ವೇಷ ಧರಿಸಿ ಬಂದು ರಂಜಿಸಿದರು.
ವಿದ್ಯಾರ್ಥಿಗಳಿಗಾಗಿ ಆಟೋಟಗಳು, ಸಂಗೀತ, ಹಿತನುಡಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೂಡ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಶ್ರೀಮತಿ ಡಾ.ಶಾರದಾ ಜಯಗೋವಿಂದ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.