ನಂತೂರು ಮಾ. 13 : ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಎಸ್‌ಬಿಸಿ ವಾಲಿಬಾಲ್ ಲೀಗ್ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಶ್ರೀ ಗಣೇಶಮೋಹನ ಕಾಶಿಮಠ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಕಾರ್ಯದರ್ಶಿ ಶ್ರೀ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಶ್ರೀ ಎಂ.ಟಿ.ಭಟ್ಟ , ಪ್ರಾಂಶುಪಾಲ ಡಾ.ಎ.ಈಶ್ವರಪ್ರಸಾದ್, ಕ್ರೀಡಾ ಸಂಘದ ನಿರ್ದೇಶಕ ಶ್ರೀ ಪ್ರವೀಣ್ ಪಿ., ವಿದ್ಯಾರ್ಥಿ ನಾಯಕಿ ಕು. ಶ್ವೇತಾ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕು. ಸೌಮ್ಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಗಂಗಾ ಎಸ್.ಹೆಗಡೆ ಪ್ರಸ್ತಾಪಿಸಿದರು. ವಿದ್ಯಾರ್ಥಿ ಶ್ರೀ ಮಿಥುನ್‌ರಾಜ್ ಬಿ. ವಂದಿಸಿದರು.
ಸಮಾರೋಪ ಸಮಾರಂಭ :
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಹಾರಕರೆ ನಾರಾಯಣ ಭಟ್ಟ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮುಂದಿನ ವರ್ಷ ಇಂಟರ್ ಕಾಲೇಜು ವಾಲಿಬಾಲ್ ಪಂದ್ಯಾಟ ನಡೆಸಬೇಕು. ವಿದ್ಯಾರ್ಥಿಗಳ, ಉಪನ್ಯಾಸಕರ ಉತ್ಸಾಹ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅಭ್ಯಾಗತರಾಗಿ ಉಪಾಧ್ಯಕ್ಷ ಪ್ರೊ.ಟಿ.ಶ್ರೀಕೃಷ್ಣ ಭಟ್ಟ, ಸಹಕಾರ್ಯದರ್ಶಿ ಪ್ರೊ.ವಿ.ಜಿ.ಭಟ್ಟ ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್ಟ , ಸದಸ್ಯ ಶ್ರೀ ರಮೇಶ್ ಭಟ್ಟ ಸರವು ಮತ್ತು ಕ್ರೀಡಾ ಸಂಘದ ನಿರ್ದೇಶಕ ಶ್ರೀ ಪ್ರವೀಣ್ ಪಿ. ಭಾಗವಹಿಸಿದ್ದರು.
ಇದೇ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಕು.ಸ್ನೇಹಾ ಎಸ್.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಗಂಗಾ ಎಸ್.ಹೆಗಡೆ ನಿರೂಪಿಸಿದರು. ವಿದ್ಯಾರ್ಥಿ ಶ್ರೀ ವಿವೇಕ್ ಕೆ. ವಂದಿಸಿದರು.
ವಿಜೇತರು :
ಎಸ್‌ಬಿಸಿ ಬ್ಲಾಕರ್ಸ್ ಶ್ರೀ ಅಕ್ಷತ್ ತಂಡ ಪ್ರಥಮ ಮತ್ತು ಎಸ್‌ಬಿಸಿ ಸ್ಪೈಕರ್ಸ್ ಶ್ರೀ ಗುಣಕರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಎಸ್‌ಬಿಸಿ ಬ್ಲಾಕರ್ಸ್ ತಂಡದ ಶ್ರೀ ಪವನ್ ಬೆಸ್ಟ್ ಪಾಸರ್, ಶ್ರೀ ಅಕ್ಷತ್ ಬೆಸ್ಟ್ ಸ್ಮಾಶರ್, ಎಸ್‌ಬಿಸಿ ಸ್ಪೈಕರ್ಸ್ ತಂಡದ ಶ್ರೀ ಶಿವ ಅಲ್ರೌಂಡರ ಪಾರಿತೋಷಿಕಗಳನ್ನು ಪಡೆದರು.