ಸ್ವಾನುಭವ – ವಿದ್ಯಾಶಂಕರಿ ಯಸ್.

ಗೋವು ಸ್ವಾನುಭವ

ಇದು ಆರೆಂಟು ತಿಂಗಳ ಹಿಂದಿನ ಘಟನೆ‌. ಬೆಳಿಗ್ಗೆ ಏಳುವಾಗ ಸರಿಯಾಗಿಯೆ ಇದ್ದ ಕಣ್ಣುಗಳು, ಸ್ವಲ್ಪ ಹೊತ್ತಿಗೆ ಉರಿಯಲಾರಂಭಿಸಿತು. ಅದೇನೋ ಕಣ್ಣೊಳಗೆ ಹೊಕ್ಕಿರಬಹುದು ಎಂದು ಉಜ್ಜಿದೆ, ನೀರು ಹಾಕಿ ತೊಳೆದೆ, ಇನ್ನೂ ಏನೇನೋ‌ ಮಾಡಿದೆ, ಉರಿ ಕಡಿಮೆಯಾಗುವ ಬದಲು ಜಾಸ್ತಿ ಆಗ್ತಾ ಹೋಯಿತು, ಕಣ್ಣು ಕೆಂಪಾಯಿತು ಅಷ್ಟೇ ಅಲ್ಲ ಕಣ್ಣಿನ ಸುತ್ತಲೂ ಬಾವು ಕೂಡ ಬಂದಿತ್ತು,‌ ನೋವು ಮತ್ತು ಉರಿ ತಡೆಯಲಾರದಾಯಿತು‌. ಗೋಮೂತ್ರ ಸರ್ವರೋಗಕ್ಕೂ ಮದ್ದು ಎಂದು ಶ್ರೀಗುರುಗಳು ಹೇಳಿದ್ದನ್ನು ಕೇಳಿದ್ದ ನಾನು, ನಮ್ಮ ಮನೆಯಲ್ಲಿದ್ದ ಮಾ ಗೋ ಪ್ರಾಡಕ್ಟ್ಸ್ ‌ನ ಗೋಮೂತ್ರ ಅರ್ಕವನ್ನು ಕಣ್ಣಿಗೆ ಒಂದೆರಡು ಹನಿ ಹಾಕಿಕೊಂಡು ಕಣ್ಣು ಮುಚ್ಚಿಕೊಂಡು ಸುಮ್ಮನೆ ಕುಳಿತೆ. ಉರಿ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ನನ್ನ ಕೆಲಸಗಳನ್ನು ಮುಂದುವರೆಸಿದೆ. ಮಧ್ಯಾಹ್ನ ಮತ್ತೊಮ್ಮೆ ಅರ್ಕವನ್ನು ಕಣ್ಣಿಗೆ ಹಾಕಿಕೊಂಡೆ. ಕೆಲವೇ ಗಂಟೆಗಳಲ್ಲಿ ಅಂದರೆ ಸಂಜೆಯ ವೇಳೆಗೆ ಉರಿ ಬಹುಪಾಲು ಕಡಿಮೆಯಾಗಿತ್ತು, ಬಾವು ಕೂಡ ಇಳಿದಿತ್ತು. ಹಾಗೆ ಮತ್ತೆ ರಾತ್ರಿ ಒಮ್ಮೆ ಒಂದೆರಡು ಹನಿ ಹಾಕಿಕೊಂಡೆ‌. ಮರುದಿನ ಸಂಜೆಯ ವೇಳೆಗೆ ಕಣ್ಣು ಉರಿ ಸಂಪೂರ್ಣ ಗುಣಮುಖವಾಗಿತ್ತು.

 

ಆಗಲೇ ನನಗೆ ಅನಿಸಿದ್ದು ಗವ್ಯೋತ್ಪನ್ನಗಳು ಅವು ದಿವ್ಯೋತ್ಪನ್ನಗಳು ಎಂದು.

 

ಇಂದು ಗೋಮೂತ್ರ , ಗೋಮಯ, ಗೋಅರ್ಕ, ಗೋಕ್ಷೀರ, ಗೋಘೃತಗಳಂತಹ ಉತ್ಪನ್ನಗಳು ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಔಷಧವಾಗಿ ಬಳಕೆಯಾಗುತ್ತಿದೆ. ನಾನು ಬಹಳ ಸಣ್ಣ ಕಾಯಿಲೆಯ ಉದಾಹರಣೆ ನೀಡಿದೆನಷ್ಟೆ …. ಇಂಗ್ಲಿಷ್ ಔಷಧಿಗಳನ್ನು ಬಳಕೆ ಮಾಡಿ ಅಡ್ಡಪರಿಣಾಮಗಳನ್ನು ಅನುಭವಿಸುವ ಬದಲು ನಮ್ಮ ಆರೋಗ್ಯವನ್ನು ನಾವು ಯಾವುದೇ ಅಡ್ಡ ಪರಿಣಾಮಗಳಿಗೆ ಒಳಗಾಗದೇ ಉಳಿಸಿಕೊಳ್ಳಬಹುದಾಗಿದೆ.

 

ಹೀಗೆ ಈ ವಿಚಾರವನ್ನು ನನ್ನ ಫೇಸ್ಬುಕ್ಕಲ್ಲಿ ಹಂಚಿಕೊಂಡಿದ್ದೆ. ಕೆಲ ದಿನಗಳ ನಂತರ ನಾನು ಎಲ್ಲಿಗೋ ಪ್ರಯಾಣಿಸುತ್ತಿದ್ದೆ. ಆ ಕಡೆಯಿಂದ ಫೋನ್ ನಲ್ಲಿ ಸಂತೋಷದ ದನಿ ಕೇಳಿ ಬಂತು “ನೀನು ಹೇಳಿದ್ದು ಸರಿ ಇದೆ ಮಾರಾಯ್ತಿ” ಎಂದು. ಏನಾಯಿತು, ಯಾವ ವಿಚಾರ ಎಂದು ಕೇಳಿದಾಗ,
ಅವರು ಹೇಳಿದ್ದು “ಕಾಲಿನ ಬೆರಳು ಉಗುರು ಸುತ್ತು ಆಗಿತ್ತು. ನೀನು ಹೇಳಿದ ಹಾಗೆಯೇ ದೇಶೀಯ ಗೋವಿನ ಗೋಅರ್ಕವನ್ನು ಹಾಕಿದೆ. ಉಗುರು ಸುತ್ತಿನ ಆ ಭಯಂಕರ ನೋವು ಅನುಭವಿಸಿದವರಿಗಷ್ಟೇ ಗೊತ್ತು. ಆದರೆ ಗೋಮೂತ್ರ ಅರ್ಕ ಹಾಕಿದ ಕೆಲವೇ ಸಮಯಕ್ಕೆ ಆ ಭಯಾನಕ ನೋವು ಮಾಯವಾಗಿತ್ತು. ಉಗುರಿನ ಬುಡದಲ್ಲಿ ಇದ್ದಂತಹ ಕೀವು ಕೂಡ ಆರಿ ಹೋಗಿತ್ತು . ನೀನು ಹೇಳಿರುವುದು ಸರಿ ಇದೆ, ಗೋಮೂತ್ರ ಸರ್ವ ರೋಗಕ್ಕೂ ಪರಿಹಾರಿ” ಎಂದು ಮತ್ತೆ ಮತ್ತೆ ಹೇಳಿ ಧನ್ಯರಾದರು.

 

ಮಳೆಗಾಲದಲ್ಲಿ ಕಾಲ ಬೆರಳ ಸಂಧಿಗಳ ಅವಸ್ಥೆ ಯಾರಿಗೂ ಬೇಡ. ಕೆಲವು ಕಡೆ ಹುಳ ಕಡಿಯುವುದು ಎಂದು ಹೇಳ್ತಾರೆ, ಕೆಲವೆಡೆ ನಂಜು ಕೆರೆಯುವುದು ಅಂತಲೂ ಹೇಳ್ತಾರೆ. ಅಲ್ಲಿ ಗಾಯದ ರೀತಿ ಆಗಿರುತ್ತದೆ. ಉರಿಯ ಜೊತೆ ತುರಿಕೆಯೂ ಇರುತ್ತದೆ. ಅಂತಹ ಜಾಗಕ್ಕೂ ಗೋಅರ್ಕವನ್ನು ಲೇಪನ ಮಾಡಿದರೆ, ಹೇಳ ಹೆಸರಿಲ್ಲದಂತೆ ಸಮಸ್ಯೆ ದೂರವಾಗುವುದು. ಒಂದು ಕ್ಷಣ ಸ್ವಲ್ಪ ಉರಿಯ ಅನುಭವವಾಗುವುದು. ಆದರೆ ಒಂದೆರಡೇ ದಿನಗಳಲ್ಲಿ ಗೋಅರ್ಕ ಉಪಯೋಗದಿಂದ ಕಡಿಮೆ ಆಗಿರುವುದು ನನ್ನ ಅನುಭವಕ್ಕೆ ಬಂದಿದೆ.

 

ಹೀಗೆ ಗೋಅರ್ಕ ಬಹಳ ಸಣ್ಣ ಸಣ್ಣ ಆರೋಗ್ಯದ ತೊಂದರೆಗಳಿಂದ ಪ್ರಾರಂಭಿಸಿ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಔಷಧಿಯಾಗಿದೆ .

 

ಬಳಸೋಣ ಗವ್ಯೋತ್ಪನ್ನಗಳ ನಾವು
ಉಳಿಸೋಣ ಗೋಸಂತತಿಯ ನಾವು
ಗೋಕುಲವಾಗಲಿ ನಮ್ಮಯ ನಾಡು
ಅಂಬಾರವವು ಅಂಬರಕೇರಲಿ …..

 

ವಂದೇ ಗೋಮಾತರಂ
ವಂದೇ ಗೋಮಾತರಂ
ವಂದೇ ಗೋಮಾತರಂ

Author Details


Srimukha

1 thought on “ಸ್ವಾನುಭವ – ವಿದ್ಯಾಶಂಕರಿ ಯಸ್.

  1. ಗೋಜನ್ಯ ಪದಾರ್ಥ, ಔಷಧಿಗಳನ್ನು ಬಳಸುವ ಬಹಳಷ್ಟು ಜನರ ಅನುಭವ ಸಹ ಇದೇ ಆಗಿದೆ. ಗೋಅರ್ಕದಂತೇ ತಮ್ಮ ಸ್ವಾನುಭವವೂ ಪರಿಣಾಮಕಾರಿಯಾಗಿದೆ. ವಂದನೆಗಳು

Leave a Reply

Your email address will not be published. Required fields are marked *