ಹೋಗಬೇಕೇಕೆ ಗೋಸ್ವರ್ಗಕೆ?

ಸ್ವಾನುಭವ

ನನಗೆ ನಿನ್ನೆ ಮೊದಲ ಬಾರಿಗೆ ಭೂ(ಗೋ)ಸ್ವರ್ಗವನ್ನು ನೋಡುವ ಅವಕಾಶ ಮಕ್ಕಳಮಹಾಸಮ್ಮೇಳನದಲ್ಲಿ ಭಾಗವಹಿಸುವ ಮುಖಾಂತರ ಸಿಕ್ಕಿತು.

 

ವಾರಗಳ ಹಿಂದೆಯಷ್ಟೇ ಒಬ್ಬರು ಸಿಕ್ಕಿ “ಹಸುಗಳನ್ನು ನೋಡಲು ಅಲ್ಲಿಗೆ ಹೋಗಬೇಕೇ?!” ಎಂದು ನನ್ನಲ್ಲಿ ಕೇಳಿದರು.

 

ಈಗ ಅವರಿಗೆ ಉತ್ತರವನ್ನು ಕೊಡಲು ಬಯಸುತ್ತೇನೆ.

 

“ಕೇವಲ ಹಸುಗಳನ್ನಷ್ಟೇ ನೋಡಲು ಅಲ್ಲ, ಗೋವುಗಳ ಸ್ವಾತಂತ್ರ್ಯವನ್ನು ನೋಡಲು ಬನ್ನಿ.

 

ಗೋವುಗಳ ಬಂಧನಮುಕ್ತ ಜೀವನವನ್ನು ನೋಡಲು ಬನ್ನಿ.

 

ಗೋವುಗಳು ತನಗೆ ಬೇಕಾದ ಹಾಗೆ ಓಡಾಡಿಕೊಂಡು ಇರುವುದನ್ನು ನೋಡಲು ಬನ್ನಿ.

 

ಗೋವುಗಳು ಸಾಕಷ್ಟು ಮೇವು ತಿಂದು ಆರಾಮವಾಗಿರುವುದನ್ನು ನೋಡಲು ಬನ್ನಿ.

 

ಗೋವುಗಳ ಪಾಲನೆ ಮಾಡುವ ರೀತಿಯನ್ನು ನೋಡಲು ಬನ್ನಿ.

ಅತ್ಯಂತ ಮುದ್ದಾದ, ಆಕರ್ಷಕವಾದ ಗೋಮಾತೆಯನ್ನು ನೋಡಲು ಬನ್ನಿ.

 

ಕರುಗಳು ಹಾಲನ್ನು ಕುಡಿಯಲು ತನ್ನ ತಾಯಿಯ ಹತ್ತಿರ ನಿರ್ಭೀತಿಯಿಂದ ಹಾಗೂ ಅತೀವ ಸಂತೋಷದಿಂದ ಓಡುವ ಸೊಬಗನ್ನು ನೋಡಿ ಸವಿಯಲು ಬನ್ನಿ.

 

ಗೋವುಗಳ ದಣಿವನ್ನು ತಣಿಸಲು ಇರುವ ಆಕರ್ಷಕವಾದ ಶಿಲಾಮಯ ಜಲಪಾತ್ರೆಗಳನ್ನು ನೋಡಲು ಬನ್ನಿ.

 

ಗೋವುಗಳು ನಿಶ್ಚಿಂತೆಯಿಂದಿರುವುದನ್ನು, ಗೋವುಗಳು ನಮ್ಮನ್ನು ಕರೆದು ಮಾತನಾಡಿಸುವ ಅನುಭವವನ್ನು ಅನುಭವಿಸಲು ಗೋಸ್ವರ್ಗಕ್ಕೆ ಬರಲೇಬೇಕು.

 

ಗೋವುಗಳನ್ನಷ್ಟೇ ಅಲ್ಲದೇ, ಗೋಸ್ವರ್ಗದ ವಿನ್ಯಾಸವನ್ನು ನೋಡಲು ಬನ್ನಿ.

 

ಗೋಸ್ವರ್ಗದ ವಿಶಾಲವಾದಂತಹ ಗೋತೀರ್ಥವನ್ನು ನೋಡಲು ಬನ್ನಿ.

 

ಇಂತಹ ಭಯಂಕರ ಬೇಸಿಗೆ ಕಾಲದಲ್ಲಿ, ಸುಡು ಬಿಸಿಲಿನ ಮಧ್ಯಾಹ್ನದಲ್ಲಿಯೂ ಕೂಡ ಅತ್ಯಂತ ತಂಪಾದ ಗಾಳಿ ಬೀಸುವುದನ್ನು ಅನುಭವಿಸಲು ಬನ್ನಿ.

ಮಾತಿನ ಮುಖಾಂತರ ಅದನ್ನು ವರ್ಣಿಸಲು ಅಸಾಧ್ಯ. ಒಮ್ಮೆ ಬಂದರೆ ಇನ್ನೊಮ್ಮೆ ಬರಬೇಕೆನ್ನಿಸುವ ಮನೋಹರ ಹಾಗೂ ಶಾಂತಿಯುತ ಶ್ರೀರಾಮ ದೇವರ ಹಾಗೂ ಸಪ್ತದೇವತೆಗಳ ಸಾನ್ನಿಧ್ಯವನ್ನೊಳಗೊಂಡ ಸ್ವರ್ಗವನ್ನು ಜೀವನದಲ್ಲಿ ಕನಿಷ್ಠ ಪಕ್ಷ ಒಂದು ಬಾರಿಯಾದರೂ ನೋಡಲೇಬೇಕು.
ಅದಕ್ಕಾಗಿ ಬನ್ನಿ…”

 

Author Details


Srimukha

Leave a Reply

Your email address will not be published. Required fields are marked *