ಧಾರಾ~ರಾಮಾಯಣ ಕಾಂಡ ವಿರಾಮದಲ್ಲಿ ವಿದ್ಯಾರ್ಥಿಗಳೇನು ಮಾಡಬಹುದು?

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶೇಷ ಕಲ್ಪನೆಯ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುತ್ತಿರುವ ಧಾರಾ~ರಾಮಾಯಣ ಪ್ರವಚನ ಮಾಲಿಕೆ ನಡೆಯುತ್ತಿದೆ.   ಧಾರಾ~ರಾಮಾಯಣ ಪ್ರವಚನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವಿಶ್ವಗುರು ಭಾರತಕ್ಕೆ ಕೀರಿಟವಾಗುವಂತಹ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಪ್ರವಚನ ಮಾಲಿಕೆಯಲ್ಲಿ ಸೆ.೧೪ರಿಂದ ೨೦ರವರೆಗೆ ಕಾಂಡ ವಿರಾಮವಿದ್ದು, ಈ ಸಮಯದಲ್ಲಿ ಯುವ ಪೀಳೆಗೆ ವಿಶೇಷ ರೀತಿಯಲ್ಲಿ ತೊಡಗಿಕೊಳ್ಳಬಹುದಾಗಿದೆ.   ಧಾರಾ~ರಾಮಾಯಣ ಪ್ರವಚನ ನಡೆಯುತ್ತಿದ್ದ ಸಮಯದಲ್ಲಿ ರಾಮಾಯಣದ ಸನ್ನಿವೇಷಗಳನ್ನು ಇಟ್ಟುಕೊಂಡು […]

Continue Reading

ಚಿತ್ರ ಸ್ಪರ್ಧೆಯ ಸೆ.೧೩ಕ್ಕೆ ಬಹುಮಾನ ವಿತರಣೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಅವಧಿಯಲ್ಲಿ ಶ್ರೀಮುಖ ಸುದ್ದಿಪೋರ್ಟಲ್ ಎರಡು ವಿಷಯಗಳಲ್ಲಿ ಚಿತ್ರ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಿಗೆ ಸೆ.13ರಂದು ಗಿರಿನಗರ ರಾಮಾಶ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.   ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯದೊಂದಿಗೆ ಯುವ ಪೀಳೆಗೆ ಚಿತ್ರ ಸ್ಪರ್ಧೆಯನ್ನು ಹಾಕೊಕೊಳ್ಳಲಾಗಿತ್ತು. ರಾಮಾಯಣ~ಚಾತುರ್ಮಾಸ್ಯ ಹಾಗೂ ಗಣೇಶಚತುರ್ಥಿ ವಿಷಯದಲ್ಲಿ ಚಿತ್ರ ಸ್ಪರ್ಧೆಯನ್ನು ನಡೆಸಿತ್ತು.   ಬಾಲ – ಪ್ರೌಢ – ಯುವ ವಿಭಾಗಗಳಲ್ಲಿ ಉತ್ಸಾಹದಿಂದ […]

Continue Reading

ಗಣೇಶನ ಚಿತ್ರ ಬರೆಯಿರಿ ಬಹುಮಾನ ಗೆಲ್ಲಿ !

ಗಿರಿನಗರ: ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಹಬ್ಬ ಗಣೇಶ ಚತುರ್ಥಿ. ಗಣೇಶ ಹಬ್ಬ ಎಂದಾದ ಕೂಡಲೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ಮಾಡಿ ಗಣಪತಿಯ ಮೂರ್ತಿಯನ್ನು ಪೂಜಿಸಿ ವ್ರತಾಚರಣೆಗಳನ್ನು ಮಾಡಲಾಗುತ್ತದೆ.   ಇತ್ತೀಚಿನ ದಿನದಲ್ಲಿ ಪ್ಲಾಸ್ಟರ್ ಆಫ್ ಪಾರಿಸ್ ಸೇರಿ ರಾಸಾಯನಿಕ ವಸ್ತುಗಳಿಂದ ವಿಗ್ರಹವನ್ನು ಮಾಡಿ ಪರಿಸರ ಹಾನಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನಲ್ಲಿ ಕರಗದ ರಾಸಾಯನಿಕ ವಿಗ್ರಹಗಳನ್ನು ವಿಲೇವಾರಿ ಮಾಡುವುದೇ ದೊಡ್ದ ತಲೆನೋವಾಗುತ್ತಿರುವುದನ್ನು ಕಾಣುತ್ತಿದೆ.   ಆದರೆ ಶ್ರೀರಾಮಚಂದ್ರಾಪುರ ಮಠದಲ್ಲಿ ಪರಿಸರಕ್ಕೆ […]

Continue Reading

ವೈವಿಧ್ಯಮಯ ಜನ್ಮಾಷ್ಟಮಿ: ಪುಟಾಣಿಗಳಿಂದ ತಾಳ ನಮನ

ಬೆಂಗಳೂರು: ಗಿರಿನಗರ ಶ್ರೀರಾಮಾಶ್ರಮದಲ್ಲಿ ಆ.೨೩ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.   ಬೆಳಿಗ್ಗೆ ೧೦ ಗಂಟೆಗೆ ಪುಟಾಣಿಗಳಿಗೆ ಕೃಷ್ಣ- ರಾಧೆ ವೇಷ ಸಪರ್ಧೆ, ಮೊಸರು ಕುಡಿಕೆ, ಮಕ್ಕಳಿಗೆ ರಸಪ್ರಶ್ನೆ, ಬಾಳೆಹಣ್ಣಿನ ಗೊನೆ ಸ್ಪರ್ಧೆ, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ ಸ್ಪರ್ಧೆ, ಮೊಸರು ಕುಡಿಕೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.   ಸಂಜೆ ೬.೪೫ಕ್ಕೆ ಧಾರಾ ರಾಮಾಯಣ ಪ್ರವಚನ, ಮಧ್ಯರಾತ್ರಿ ೧೨ ಗಂಟೆಗೆ ಶ್ರೀಕೃಷ್ಣ ಜನ್ಮೋತ್ಸವ ಆಚರಿಸಲಾಗುವುದು ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ […]

Continue Reading

ವಿಶಿಷ್ಟ ತ್ಯಾಗಹಬ್ಬ

ಬೆಂಗಳೂರು: ಶ್ರೀರಾಘವೇಶ್ವರ ಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣ ಪಾದುಕಾ ಪಟ್ಟಾಭಿಷೇಕದ ಹಂತವನ್ನು ತಲುಪಿದ ಹಿನ್ನೆಲೆಯಲ್ಲಿ ಭಾನುವಾರ (ಆಗಸ್ಟ್ 18) ಶ್ರೀಮಠದ ಶಿಷ್ಯ ಭಕ್ತರು ವಿಶಿಷ್ಟವಾಗಿ ತ್ಯಾಗ ಪರ್ವ ಆಚರಿಸಲಿದ್ದಾರೆ.   ಶ್ರೀರಾಮನಿಗಾಗಿ ರಾಜವಸ್ತ್ರವನ್ನು ತ್ಯಜಿಸಿ ನಾರುಮಡಿಯುಟ್ಟ ಭರತ ಕೂಡಾ ಇಡೀ ಸಮಾಜಕ್ಕೆ ಆದರ್ಶವಾಗಬೇಕು ಎಂಬ ಉದ್ದೇಶದಿಂದ ಈ ವಿಶಿಷ್ಟ ಹಬ್ಬ ಆಚರಿಸಲಾಗುತ್ತಿದೆ ಎಂದು ಶ್ರೀಮಠದ ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.   ರಾಮ- ಭರತರ ರಾಜ್ಯತ್ಯಾಗದ ಮಹಾಘಟ್ಟವನ್ನು ತ್ಯಾಗದ ಹಬ್ಬವಾಗಿ ಆಚರಿಸಲಾಗುತ್ತಿದ್ದು, […]

Continue Reading

ರಾಮಾಶ್ರಮದಲ್ಲಿ ಗಮಕ ವಾಚನ

ಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ರಾಮಾಯಣ ಚಾತುರ್ಮಾಸ್ಯ ಅಂಗವಾಗಿ ಗುರುವಾರ (ಆ. 15) ಮಧ್ಯಾಹ್ನ ಗಿರಿನಗರದ ಪುನರ್ವಸು ಭವನದಲ್ಲಿ ಕಲಾರಾಮ ವೇದಿಕೆ ವತಿಯಿಂದ ಅಪೂರ್ವ ಗಮಕ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಮಧ್ಯಾಹ್ನ 3 ರಿಂದ 5ರವರೆಗೆ ರಾಮಾಯಣದ ಅಯೋಧ್ಯಾ ಕಾಂಡದ ಬಗ್ಗೆ ಗಮಕ ರತ್ನಾಕರ ಗಂಗಮ್ಮ ಕೇಶವಮೂರ್ತಿ ವಾಚನ ಮಾಡುವರು. ಸಂಸ್ಕೃತ ಉಪನ್ಯಾಸಕಿ ಶಾಂತಾ ಗೋಪಾಲ್ ವ್ಯಾಖ್ಯಾನ ನೀಡವರು ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.

Continue Reading

ಸಂತ್ರಸ್ತರ ಸಂಕಷ್ಟಕ್ಕೆ ಶ್ರೀಮಠದ ಸ್ಪಂದನೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಎಲ್ಲ ಶಾಖಾಮಠಗಳು ಹಾಗೂ ಅಂಗಸಂಸ್ಥೆಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಘೋಷಿಸಿದ್ದಾರೆ.   ನಿನ್ನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಪರಿಸ್ಥಿತಿಯ ತೀವ್ರತೆ ಹಿನ್ನೆಲೆಯಲ್ಲಿ ಎಲ್ಲ ಅಂಗಸಂಸ್ಥೆಗಳಿಗೆ ಈ ವ್ಯವಸ್ಥೆ ವಿಸ್ತರಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.   ರಾಜ್ಯದಲ್ಲಿ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ, ಲಕ್ಷಾಂತರ ಜನರ ಬದುಕು ಬವಣೆಯಾಗಿದೆ. ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಬದುಕು […]

Continue Reading

ಕಸಾಯಿಖಾನೆಯಿಂದ ಐದು ಹೋರಿಗಳನ್ನು ರಕ್ಷಿಸಬೇಕಿದೆ

ಕಾಸರಗೋಡಿನ ಕಸಾಯಿಖಾನೆಯೊಂದರಲ್ಲಿ ಬೃಹತ್ತಾದ ಐದು ಓಂಗೋಲ್ ಹೋರಿಗಳು ತಮ್ಮ‌ ಕೊನೆಯ ಕ್ಷಣಗಳನ್ನು ಎದುರು ನೋಡುತ್ತಿದೆ. ಆ ಹೋರಿಗಳು ಜು.31ರ ಬೆಳಿಗ್ಗೆ 11:30ಗೆ ಕಸಾಯಿ ಪಾಲಾಗಲಿದ್ದು ಅಷ್ಟರೊಳಗೆ ಆ ಹೋರಿಗಳನ್ನು ರಕ್ಷಿಸಬೇಕಿದೆ.   ಕಸಾಯಿಯವರ ಜೊತೆ ಚರ್ಚಿಸಿದಾಗ ಒಂದೊಂದು ಹೋರಿಗೂ ರೂ.70 ರಿಂದ 80ಸಾವಿರ ಬೆಲೆ ಇದ್ದು, 11:30ರ ಒಳಗೆ ಅಷ್ಟು ಹಣವನ್ನು ಕೊಟ್ಟಲ್ಲಿ ಆ ಹೋರಿಗಳನ್ನು ಬಿಟ್ಟುಕಳುಹಿಸುವುದಾಗಿದೆ. ಇಲ್ಲವಾದಲ್ಲಿ ಆ ಹೋರಿಗಳು ಜೀವಂತ ಉಳಿಯಲಾರವು ಎಂಬ ಮಾಹಿತಿಯನ್ನು ನೀಡಿರುತ್ತಾರೆ.   ಶ್ರೀರಾಮಚಂದ್ರಾಪುರ ಮಠದ ಗೋಸಂಜೀವಿನಿ ವಿಭಾಗವು ಈ […]

Continue Reading

ರಾಮಾಯಣ ಚಾತುರ್ಮಾಸ್ಯ ಚಿತ್ರ ಸ್ಪರ್ಧೆ : ಜುಲೈ 27ಕ್ಕೆ ಫಲಿತಾಂಶ

ಗಿರಿನಗರ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಪ್ರಾರಂಭ ದಿನದ ಅಂಗವಾಗಿ ಶ್ರೀಮುಖ ಸುದ್ದಿ ಪೋರ್ಟಲ್ ರಾಮಾಯಣ ಚಾತುರ್ಮಾಸ್ಯ ವಿಷಯವನ್ನಿಟ್ಟುಕೊಂಡು ನಡೆಸಿದ ಚಿತ್ರ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.   ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯದಲ್ಲಿ ನಡೆಸಿದ ಚಿತ್ರ ಸ್ಪರ್ಧೆಯ ಫಲಿತಾಂಶವನ್ನು ಸುಮಾರು 20 ವರ್ಷಗಳಿಂದ ಚಿತ್ರ ಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಉರಿಮಜಲು ನಿವಾಸಿ ಉದಯ ವಿಟ್ಲ ಅವರು ನೀಡಲಿದ್ದಾರೆ.   ಚಿತ್ರ […]

Continue Reading

ರಾಘವೇಶ್ವರ ಶ್ರೀಗಳ ವರ್ಧಂತ್ಯುತ್ಸವ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ವರ್ಧಂತ್ಯುತ್ಸವ ಶುಕ್ರವಾರ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆಯಲಿದೆ.   ಶ್ರೀಮಠದ ಶಿಷ್ಯಭಕ್ತರು ಶ್ರೀಸಂಸ್ಥಾನಕ್ಕೆ ಸಮರ್ಪಿಸಿರುವ ನೂತನ ರಜತಪೀಠಾರೋಹಣ ಇದೇ ಸಂದರ್ಭದಲ್ಲಿ ನಡೆಯಲಿದೆ. ಶ್ರೀಗಳು ಶ್ರೀರಾಮಾಶ್ರಮದಲ್ಲಿ ರಾಮಾಯಣ ಚಾತುರ್ಮಾಸ್ಯ ಕೈಗೊಂಡಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಾಧನೆಗಾಗಿ ಪ್ರತಿದಿನ ಧಾರಾ ರಾಮಾಯಣ ಪ್ರವಚನ ನಡೆಯುತ್ತಿದೆ.   ವರ್ಧಂತ್ಯುತ್ಸವ ಅಂಗವಾಗಿ ಬೆಳಿಗ್ಗೆ ಅರುಣ ಹೋಮ, 48 ಅರುಣ ನಮಸ್ಕಾರ, ಮಾತೆಯರಿಂದ ಮಂಗಳಾರತಿ, 108 ಕುಂಭಗಳ ಗಂಗಾಭಿಷೇಕ, ಶ್ರೀರಾಮದೇವರಿಗೆ ಅಷ್ಟಾವಧಾನ ಸೇವೆ, ಮಧ್ಯಾಹ್ನ ಶ್ರೀಗಳಿಗೆ […]

Continue Reading

ಚಾತುರ್ಮಾಸ್ಯ ವಿಷಯದಲ್ಲಿ ಶ್ರೀಮುಖದ ಚಿತ್ರ ಸ್ಪರ್ಧೆ..

ಗಿರಿನಗರ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಜುಲೈ 16ರಿಂದ ಸೆಪ್ಟೆಂಬರ್ 14ರವರೆಗೆ ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.   ಶ್ರೀಸಂಸ್ಥಾನದವರು ಸನ್ಯಾಸ ಸ್ವೀಕರಿಸಿ 25ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸ್ಯವನ್ನು ಆಚರಿಸುತ್ತಿದ್ದಾರೆ. ಈಬಾರಿಯದ್ದು ರಾಮಾಯಣ ಚಾತುರ್ಮಾಸ್ಯ ಎಂದು ಘೋಷಣೆಯಾಗಿದೆ. ಇದು ಚಾತುರ್ಮಾಸ್ಯದ ನಡುವೆ ರಾಮಾಯಣಧಾರೆಯಲ್ಲ; ರಾಮಾಯಣಧಾರೆಯಲ್ಲಿ ಮಿಂದೇಳುವ ಚಾತುರ್ಮಾಸ್ಯ!.   ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯವಿದೆ. ಶ್ರೀಮುಖ ಸುದ್ದಿ ಪೋರ್ಟಲ್ ಹೊಸ […]

Continue Reading

ಹವ್ಯಕ ಮಹಾಸಭೆಯಿಂದ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಜುಲೈ ೧೪ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯ ತನಕ ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.   ಡಾ. ರವಿಶಂಕರ್, ಡಾ. ದಿವಾಕರ್ ಭಟ್, ಡಾ. ಬಿ ಎಸ್ ಭಟ್, ಡಾ. ಅರುಣ್ ಅಡಕ್ಕೋಳಿ, ಡಾ. ಬಾಲಮುರಳಿ, ಡಾ. ಎಸ್ ಆರ್ ಹೆಗಡೆ ಹಾಗೂ ಮಹಾಸಭೆಯ […]

Continue Reading

ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ರಾಘವೇಶ್ವರ ಶ್ರೀಗಳಿಂದ ಇಂದು ಮಾರ್ಗದರ್ಶನ ಸಭೆ

ಮಾಣಿ: ಆಚಾರ್ಯ ಚಾಣಕ್ಯರು ಸ್ಥಾಪಿಸಿದ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಿದ್ಧಿಗಾಗಿ ಆರು ತಿಂಗಳ ಅಖಂಡ ಧಾರಾ ರಾಮಾಯಣ ಪ್ರವಚನ ಕೈಗೊಂಡಿರುವ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಜುಲೈ 11ರಂದು ಮಾಣಿ ರಾಮಚಂದ್ರಾಪುರ ಮಠ ಮಹಾಕ್ಷೇತ್ರಕ್ಕೆ ಆಗಮಿಸಲಿದ್ದು, ಶಿಷ್ಯಭಕ್ತರ ಮಾರ್ಗದರ್ಶನ ಸಭೆ ನಡೆಸುವರು.   ಶ್ರೀರಾಮಚಂದ್ರಾಪುರ ಮಠದ ಮಂಡಲ, ವಲಯ ಹಾಗೂ ಘಟಕ ಹಂತಗಳ ಶ್ರೀಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಗುರಿಕಾರರು ಮಧ್ಯಾಹ್ನ 3.30ಕ್ಕೆ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ […]

Continue Reading

ಶ್ರೀರಾಮಾಶ್ರಮದಲ್ಲಿ ವೈಭವದ ಸೀತಾರಾಮ ಕಲ್ಯಾಣೋತ್ಸವ

ಗಿರಿನಗರ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪಸಿದ್ಧಿಗಾಗಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ನಡೆಸುತ್ತಿರುವ ಧಾರಾ ರಾಮಾಯಣ ಪ್ರವಚನದ ಅಂಗವಾಗಿ ಜುಲೈ ೧೦ರಂದು ಶ್ರೀರಾಮಾಶ್ರಮದಲ್ಲಿ ವೈಭವದ ಸೀತಾರಾಮ ಕಲ್ಯಾಣೋತ್ಸವ ಆಯೋಜಿಸಲಾಗಿದೆ.   ಸೀತಾರಾಮ ಕಲ್ಯಾಣದೊಂದಿಗೆ ಸ್ವಾಮೀಜಿಯವರ ಪ್ರವಚನದ ಬಾಲಕಾಂಡ ಸಮಾಪ್ತಿಗೊಳ್ಳಲಿದ್ದು, ಈ ತಿಂಗಳ ೧೫ರಿಂದ ಅಯೋಧ್ಯಾಕಾಂಡ ಪ್ರವಚನ ಆರಂಭವಾಗಲಿದೆ. ೧೦ರಂದು ಸಂಜೆ ೬ಕ್ಕೆ ಕಲ್ಯಾಣೋತ್ಸವ ಪೂರ್ವವಿಧಿಗಳು ಆರಂಭವಾಗಲಿದ್ದು, ೭ಕ್ಕೆ ಮುಹೂರ್ತ ವಾಚನ ಮತ್ತು ವೈದಿಕರಿಂದ ಮಂಗಲಾಷ್ಟಕ ಸೇರಿದಂತೆ ಧಾರ್ಮಿಕ ವಿಧಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಅಮೃತವರ್ಷಿಣಿ ಸಂಗೀತ ವಿದ್ಯಾಲಯದ ವಿದುಷಿ […]

Continue Reading

ಪ್ರಕಟಣೆ :ಶ್ರೀಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠಾಪನ ವಾರ್ಷಿಕೋತ್ಸವ

ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ವೇ| ಮೂ| ಶಿತಿಕಂಠ ಹಿರೇ ಭಟ್ಟರ ನೇತೃತ್ವದಲ್ಲಿ ಆಷಾಢ ಶುಕ್ಲ ದ್ವಿತೀಯಾ (ದಿನಾಂಕ 04-07-2019) ಗುರುವಾರದಂದು ದ್ವಿತೀಯ ವಾರ್ಷಿಕೋತ್ಸವ ವಿಧ್ಯುಕ್ತವಾಗಿ ನೆರವೇರಲಿದೆ. ಈ ಶುಭಸಂದರ್ಭದಲ್ಲಿ ಎಲ್ಲ ಸಮಾಜಬಾಂಧವರು ಉಪಸ್ಥಿತರಿದ್ದು ಗುರುದೇವತಾ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ಸೇವಾವಕಾಶಗಳು : > ವಾರ್ಷಿಕ ಪೂಜೆ – ರೂ.1001/- > ಏಕಾದಶ ರುದ್ರ – ರೂ.1101/- > ರುದ್ರಾಭಿಷೇಕ – ರೂ.251/- > ಪತ್ರೆ ಪೂಜೆ – ರೂ.101/- ಮೂಲಮಠ ಅಶೋಕೆ ನಮ್ಮೆಲ್ಲರ ಮೂಲ. ಅಶೋಕೆಯ ಮೂಲ […]

Continue Reading

ಗೋಸಂರಕ್ಷಕನ ಹತ್ಯೆ – ಸಮಗ್ರ ತನಿಖೆಗೆ ಶ್ರೀಮಠದ ಆಗ್ರಹ

ಕೇರಳಕ್ಕೆ ಗೋಕಾಕ ಮಾರ್ಗವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ; ಅವುಗಳ ರಕ್ಷಣೆ ಮುಂದಾದ ಗೋಕಾಕದ 19 ವರ್ಷದ ಯುವಕ ಶಿವು ಉಪ್ಪಾರ ಅವರನ್ನು ನಿನ್ನೆ ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಹತ್ಯೆಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಗಳಿದ್ದು, ನಾಡಿನಲ್ಲಿ ನಿರಂತರವಾಗಿ ಗೋಸಂರಕ್ಷಕರ ಹತ್ಯೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಪ್ರಾಣಾರ್ಪಣೆಗೈದ ಶಿವು ಉಪ್ಪಾರ ಅವರ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ವಿಚಾರಣೆ ನಡೆಸಿ, ಹಂತಕರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಗೋಕಳ್ಳಸಾಗಾಣೆ ಮಾಡುತ್ತಿರುವವರಿಗೆ ದಿಟ್ಟ ಸಂದೇಶವನ್ನು ರವಾನಿಸಬೇಕೆಂದು ಶ್ರೀರಾಮಚಂದ್ರಾಪುರಮಠ ಸರ್ಕಾರವನ್ನು ಆಗ್ರಹಿಸುತ್ತದೆ. ಪುಣ್ಯಕೋಟಿಯ ನಾಡಿನಲ್ಲಿ ಇತ್ತೀಚೆಗೆ […]

Continue Reading

ಜಗದ ಏಕೈಕ ಆತ್ಮಲಿಂಗದ ಸನ್ನಿಧಾನದಲ್ಲಿ ನಿತ್ಯ ಕಲಾಸೇವೆಯ ಅವಕಾಶ ಕಲ್ಪಿಸಿ ಗೋಕರ್ಣ ಶ್ರೀಮಹಾಬಲೇಶ್ವರನಿಗೆ ಕಲಾವಿದರು ವಿಶೇಷ ಸೇವೆಯನ್ನು ಸಮರ್ಪಿಸುವ ಅವಕಾಶವನ್ನು ಒದಗಿಸುವ ಸಲುವಾಗಿ – ಕಲಾವೇದಿಕೆಯ ಲೋಕಾರ್ಪಣೆ. ಇದೇ ಬರುವ ಜೂನ್ 8 ರಂದು!

Continue Reading

ಪರಶುರಾಮನ ಜೀವನಚರಿತೆ ವೀರತಪಸ್ವೀ ಶ್ರೀಮುಖದಲ್ಲಿ

ಪರಶುರಾಮ ಅವತಾರ ಪುರುಷ. ಸೃಷ್ಟಿಯಲ್ಲಿ ಕ್ಷಾತ್ರವೇ ಹೆಚ್ಚಾದಾಗ ಅದರ ಬಲವನ್ನು ತಗ್ಗಿಸಲು ಬಂದ ಬ್ರಹ್ಮತೇಜ. ಅವನ ಚರಿತೆ ಅಲ್ಪಾಲ್ಪವೇ ಲಭ್ಯ. ಅವನ ಬದುಕಿನ ಎಲ್ಲವನ್ನೂ ಹೇಳುವ ಕಥಾನಕವೇ ವೀರತಪಸ್ವೀ. ಧರ್ಮಭಾರತೀ ಹತ್ತಾರು ಸಂಚಿಕೆಗಳಿಂದ ವೀರತಪಸ್ವೀ ಎನ್ನುವ ಧಾರಾವಾಹಿಯನ್ನು ಡಿ.ಎಸ್. ಶ್ರೀಧರ ಕಿನ್ನಗೋಳಿ ಇವರಿಂದ ಬರೆಸಿ ಪ್ರಕಟಿಸುತ್ತಿತ್ತು. ಇನ್ನು ಧರ್ಮಭಾರತಿಯ ರೂಪ ಬದಲಾದ್ದರಿಂದ, ಓದುಗರಿಗೆ ಕಥೆ ರಸಭಂಗವನ್ನು ತರಬಾರದು ಎನ್ನುವ ದೃಷ್ಟಿಯಿಂದ ಅದರ ಮುಂದಿನ ಭಾಗವನ್ನು ಶ್ರೀಮಠದ ಶ್ರೀಮುಖ ಪೋರ್ಟಲ್ಲಿನಲ್ಲಿ ಪ್ರಕಟಿಸಲಾಗುತ್ತಿದೆ. ವೀರತಪಸ್ವಿಯ ಮುಂದಿನ ಭಾಗವನ್ನು ಆನ್ ಲೈನಿನಲ್ಲಿಯೇ […]

Continue Reading

ಅಂತರ್ಜಾಲ ತಾಣದಲ್ಲಿ ವಿದ್ವಾನ್ ಎನ್ ರಂಗನಾಥಶರ್ಮಾ ಸಮಗ್ರ ಸಾಹಿತ್ಯ

ನಮ್ಮ ದೇಶದ ಹೆಮ್ಮೆಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್ ರಂಗನಾಥಶರ್ಮಾರವರ ಸಮಗ್ರ ಬದುಕು ಬರಹಗಳ ಪರಿಚಯಕ್ಕಾಗಿ ವಿನೂತನವಾದ ಅಂತರ್ಜಾಲತಾಣವೊಂದನ್ನು ( website) ನಿರ್ಮಿಸಲಾಗಿದೆ.   ಸಂಸ್ಕೃತ ಕನ್ನಡಗಳಲ್ಲಿನ ಅವರ ಸುಮಾರು 80 ಕ್ಕೂ ಹೆಚ್ಚು ಗ್ರಂಥಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ನೀವಿಲ್ಲಿ ಓದಬಹುದು.   ಆಸಕ್ತರು ಸಂಪರ್ಕಿಸಿ http://vidwannrs.in ವಂದನೆಗಳು ಡಾ.ರಾಮಕೃಷ್ಣಭಟ್ ಕೆ 9844741855

Continue Reading

ವಿದ್ಯಾರ್ಥಿವಾಹಿನಿಯಿಂದ – ವಿಹಾರ – ವಿಚಾರ – ಬೇಸಿಗೆ ಶಿಬಿರ

  ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದಿಂದ 5 ನೆಯ ತರಗತಿಯಿಂದ ಪದವಿಪೂರ್ವ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿರಾಮ – ವಿಹಾರ – ವಿಚಾರ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಬೇಸಿಗೆ ರಜೆಯು ಸಜೆಯಾಗದೆ ಸಂತೋಷ ಹಾಗೂ ಸಂಸ್ಕಾರ ನೀಡುವಂತಹ ವಿರಾಮಕಾಲವಾಗಬೇಕು ಎಂಬ ದೃಷ್ಟಿಯಿಂದ, ನಮ್ಮ ಸಮಾಜದ ಮಕ್ಕಳಿಗಾಗಿ ಬೇಸಿಗೆ ಶಿಬಿರವು 2019ರ ಮೇ ತಿಂಗಳ 02 ರಿಂದ 07 ರ ತನಕ ಗೋವು -ದೇವತಾ ದಿವ್ಯ ಸಾನ್ನಿಧ್ಯಗಳನ್ನೊಳಗೊಂಡ ಶ್ರೀರಾಮಚಂದ್ರಾಪುರ ಮಠದ […]

Continue Reading