ಸುವ್ವಾಲಿ ಗೀತಗಳು

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ | ಸಂಗೀತ ಮತ್ತು ಸಾಹಿತ್ಯಗಳು ಕಲಾಮಾತೆ ಸರಸ್ವತಿಯ ದಿವ್ಯಪಯೋಧರಗಳೆಂಬ ಧಾರ್ಮಿಕ ನೆಲೆಗಟ್ಟಿನಲ್ಲಿಯೇ ನಮ್ಮ ಸಂಗೀತ – ನೃತ್ಯ –  ಸಾಹಿತ್ಯಾದಿ ಲಲಿತಕಲೆಗಳು ಬೆಳೆದವು. ಶಿಷ್ಟ – ಜನಪದ ಸಂಗೀತ – ಸಾಹಿತ್ಯಗಳು ಪರಸ್ಪರವಾಗಿ ಕೊಂಡು – ಕೊಳ್ಳುವಿಕೆಯಿಂದ ಶ್ರೀಮಂತವಾದವು. ದೇಶದ ಮೇಲೆ ಅನೇಕಾನೇಕ ಪರ – ಹೊರ ಮತಗಳ, ಸಂಸ್ಕೃತಿಗಳ, ರಾಜಕೀಯ ದಾಳಿಗಳೇ ಆದರೂ ಸಂಗೀತ – ಸಾಹಿತ್ಯಗಳು ಆಯಾ ದೇಶಭಾಷೆಗಳಲ್ಲಿ ರಚಿತಗೊಂಡು, ತಮ್ಮಲ್ಲಿ ತುಕ್ಕು ಹಿಡಿದಿದ್ದನ್ನು ತ್ಯಜಿಸುತ್ತ, ಸ್ವೀಕಾರಾರ್ಹವಾದ ಹೊಸತನ್ನು […]

Continue Reading

ಸಂಗೀತಜ್ಞ – ವಿಜ್ಞಾನಿ ಭಾರತರತ್ನಗಳು

ಸಂಗೀತವು ಇಹಕ್ಕೂ ಪರಕ್ಕೂ ಸಾಧನವೆಂದು ಭಾರತದಲ್ಲಿ ಪ್ರಾಚೀನದಿಂದಲೂ ನಂಬುಗೆಯಿದ್ದು ಆಧ್ಯಾತ್ಮಿಕವಾದ, ಧಾರ್ಮಿಕ ನೆಲೆಯಲ್ಲೇ ಹುಟ್ಟಿ ಬೆಳೆದರೂ, ಪ್ರಾಚೀನದಿಂದಲೂ ವೈಜ್ಞಾನಿಕವಾಗಿಯೇ ಭಾರತೀಯ ಸಂಗೀತವು ಬೆಳೆದಷ್ಟು ವಿಶ್ವದಲ್ಲಿಯೇ ಇಂದಿಗೂ ಬೇರೆಲ್ಲಿಯೂ ಹೀಗೆ, ಇಲ್ಲವೆಂದೇ ಹೇಳಬೇಕು. ಪ್ರಾಚೀನದಿಂದಲೂ ಋಷಿಸದೃಶರಾಗಿದ್ದ, ಬಹುಶ್ರುತ ವಿದ್ವಾಂಸರಾಗಿ ಸಂಗೀತಶಾಸ್ತ್ರಕಾರರಾಗಿದ್ದ ನಂದಿಕೇಶ್ವರ, ಕಶ್ಯಪ, ಮತಂಗ, ಅಭಿನವಗುಪ್ತ, ಸೋಮೇಶ್ವರ, ಪಾರ್ಶ್ವದೇವ, ಶಾರ್ಙ್ಗದೇವ, ಸಿಂಹಭೂಪಾಲ,ಕುಂಭಕರ್ಣ, ವೆಂಕಟಮಖಿ ಮುಂತಾದ ಅನೇಕರಲ್ಲಿ ಕೆಲವರು ರಾಜರೂ ಅಥವಾ ಅವರಿಂದ ಪೋಷಿಸಲ್ಪಟ್ಟವರೂ ಆಗಿದ್ದು ವೈದಿಕಕಲ್ಪ, ವೈದ್ಯ. ಶಿಲ್ಪ. ಧರ್ಮಶಾಸ್ತ್ರ, ಜ್ಯೋತಿಷ (ಈಗಿನಂತೆ ಫಲ ಜ್ಯೋತಿಷವಲ್ಲ, ನಕ್ಷತ್ರಾದಿಗಳು ಹಾಗೂ […]

Continue Reading

ಗೆಜ್ಜೆಯ ಪೂಜೆ

ನಾದವು ಬ್ರಹ್ಮ. ಆಹತನಾದವು ಸಗುಣಬ್ರಹ್ಮವಾದರೆ ಅನಾಹತನಾದವು ನಿರ್ಗುಣಬ್ರಹ್ಮ. ಆಹತನಾದವು ಶ್ರುತಿ, ಸ್ವರ ಇತ್ಯಾದಿಗಳಲ್ಲಿ ಲೋಕರಂಜಕವೂ ಭವಭಂಜಕವೂ ಆಗಿದೆ. ಅನಾಹತನಾದವು ಯೋಗಿಜನರು ಗುರೂಪದಿಷ್ಟಮಾರ್ಗದಿಂದಲೇ ಉಪಾಸನೆಯನ್ನು ಮಾಡಿ ಮೋಕ್ಷವನ್ನು ಸಂಪಾದಿಸಬೇಕಾದ ವಿದ್ಯೆ.  ಮೋಕ್ಷಾಪೇಕ್ಷ ಯೋಗಿಗಳು ತಮ್ಮ ಪ್ರಾಣಾಯಾಮ ಹಾಗೂ ಪ್ರತ್ಯಾಹಾರ ಸಾಧನೆಯ ಸಮಯದಲ್ಲಿ ಸ್ಥೂಲೇಂದ್ರಿಯಗಳಿಗೆ ಗೋಚರವಾಗದ ನಾದಯೋಗವನ್ನು ಸಿದ್ಧಿಸಿಕೊಳ್ಳುತ್ತಾರೆ. ಚಿತ್ತವನ್ನು ಸ್ಥಿರಗೊಳಿಸಿ ದೇಹದಲ್ಲಿ ವಿವಿಧ ನಾದಗಳನ್ನು ಆಲಿಸಿ ಅನಾಹತನಾದಯೋಗವನ್ನು ಸಾಧಿಸುತ್ತಾರೆ. ಪ್ರಥಮಾಭ್ಯಾಸಕಾಲದಲ್ಲಿ ಅನೇಕ ನಾದಗಳು ಮಹತ್ತಾಗಿ, ಸ್ಥೂಲವಾಗಿ ಯೋಗಿಗಳಿಗೆ ಗೋಚರಿಸುತ್ತವೆ. ಅವು ಅಭ್ಯಾಸವು ವೃದ್ಧಿಯಾದಂತೆಲ್ಲ ಸೂಕ್ಷ್ಮವಾಗುತ್ತ ಬಂದು ಕಡೆಯಲ್ಲಿ ಅತ್ಯಂತ […]

Continue Reading

ಕಾವ್ಯಾರಾಮ – ಭರತಮುನಿಯ ಧ್ರುವಾ ಧಾಮ

‘ಕಾವ್ಯಾರಾಮ’ ವೆಂಬ  ವಾಟ್ಸಾಪ್ (ಈಗ ಫೇಸ್ಬುಕ್ ನಲ್ಲಿಯೂ) ಗ್ರೂಪೊಂದು ಮೂರ್ನಾಲ್ಕು ವರ್ಷಗಳಿಂದ ಅತ್ಯುತ್ತಮ ಮೇಧಾವಿ ಕವಿಗಳು-ಕವಯಿತ್ರಿಗಳನ್ನು ಹೊಂದಿದ್ದು ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕವಿತೆಗಳನ್ನು ಛಂದೋಬದ್ಧವಾಗಿಯೂ ಮನೋಜ್ಞ ಕಲ್ಪನೆಗಳಲ್ಲಿಯೂ ರಚಿಸುತ್ತ ಸದ್ದಿಲ್ಲದೆ ಕನ್ನಡಾಂಬೆಯ, ಸಾಹಿತ್ಯಸರಸ್ವತಿಯ ಸೇವೆಗೈಯುತ್ತಿದೆ. ಇದನ್ನು ಆರಂಭಿಸಿ ರೂಪಿಸಿದ್ದು ಹಿರಿಯ ವಿದ್ವಾಂಸರೂ, ಕವಿಗಳೂ, ಬರಹಗಾರರೂ, ರಂಗಭೂಮಿಯಲ್ಲಿ ಬಹಳವಾದ ಪರಿಶ್ರಮವಿದ್ದು ಇನ್ನೂರೈವತ್ತಕ್ಕೂ ಮಿಕ್ಕಿ ರಂಗರೂಪಕಗಳನ್ನು ರಚಿಸಿ, ಮಾಡಿಸಿದ, ಪ್ರಖ್ಯಾತ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರವರು. ಆಶುಕವಿತ್ವದಲ್ಲಿಯೂ ಈ ಗ್ರೂಪಿನ ಕವಿ-ಕವಯಿತ್ರಿಗಳು ಅನೇಕ ವಿಷಯಗಳಲ್ಲಿ ಅನನ್ಯ ಕವಿತೆಗಳನ್ನು ರಚಿಸುತ್ತ ನಮ್ಮಂತಹವರಿಗೆ […]

Continue Reading

ಭಜನೆಯೆಂಬ ಸತ್ಸಂಪ್ರದಾಯದ ಭಕ್ತಿಸಂಗೀತ

ನೀವು ದೇವಾಲಯದಲ್ಲಿ ದೇವದರ್ಶನ ಮಾಡಲು ಹೋದಾಗ ಮೊದಲು ನಿಮ್ಮ ದೃಷ್ಟಿ, ಗಮನಗಳು ಯಾವುದರ ಮೇಲಿರುತ್ತದೆ? ದೇವರ ಮುಖವೇ? ಕಣ್ಣೇ? ಮೈಯೇ? ಪಾದವೇ? ಅಲಂಕಾರವೇ? ಪೂಜೆಯ ಮೇಲೆಯೇ? ಯಾವುದರ ಮೇಲೆ ನಿಮ್ಮ ಮನಸ್ಸನ್ನು ನಿಲ್ಲಿಸುತ್ತೀರಿ? ಮನಸ್ಸಿನ ನಿಜವಾದ ಏಕಾಗ್ರತೆಗೆ ಕಣ್ಣು ಮುಚ್ಚಿಯೇ ಧ್ಯಾನಿಸಬೇಕಲ್ಲವೇ? ಈ ಸಂಶಯಕ್ಕೆ ಎಡೆಕೊಡದಂತೆ, ಭಜನೆಯು ಮನಸ್ಸಿನ ಏಕಾಗ್ರತೆಗೆ ಸಹಾಯಕವಾಗಿ, ಭಗವಂತನ ನಾಮಸ್ಮರಣೆಯತ್ತಲೇ ನಮ್ಮ ಮನವು ನಿಲ್ಲುವಂತೆ ಮಾಡುತ್ತದೆ ಎಂದೇ ಹರಿದಾಸರು ‘ನೀನ್ಯಾಕೋ ನಿನ್ನ ಹಂಗ್ಯಾಕೋ! ನಿನ್ನ ನಾಮದ ಬಲ ಒಂದಿದ್ದರೆ ಸಾಕೋ’ ಎಂದರು. ಏಕವ್ಯಕ್ತಿಯಾಗಲೀ […]

Continue Reading

‘ಆರ್ಯಾ’- ಎಂಬ ಪ್ರಾಚೀನ ಸಂಗೀತ ಪ್ರಬಂಧ

ಪ್ರಾಚೀನ ಭಾರತೀಯ ಸಂಗೀತದಲ್ಲಿ ಹಲವು ಗೇಯ ಪ್ರಬಂಧಗಳು ಸ್ವನಾಮಕ ವೃತ್ತದಿಂದಲೇ ಉದಯಿಸಿ, ಅವುಗಳಿಂದ ಕ್ರಮೇಣ ಬೇರ್ಪಟ್ಟು ಪ್ರತ್ಯೇಕ ಗೇಯವ್ಯಕ್ತಿತ್ವವನ್ನು ಪಡೆದವು. ಹಯಲೀಲಾ, ಗಜಲೀಲಾ, ಕ್ರೌಂಚಪದ, ಆರ್ಯಾ, ದ್ವಿಪಥಕ, ಕಲಹಂಸ, ತೋಟಕ, ಝಂಪಟ, ಪದ್ಧಡೀ ಮುಂತಾದುವು ಇದಕ್ಕೆ ನಿದರ್ಶನಗಳು. ಪ್ರಾಚೀನ ಪ್ರಬಂಧ (ಹಾಡು) ಗಳಲ್ಲಿ ಮೂರು ವಿಧಗಳಿವೆ. ಅವು ಶುದ್ಧ, ಛಾಯಾಲಗ (ಅನಂತರದ ಕಾಲದಲ್ಲಿ ಸಾಲಗ) ಮತ್ತು ಸಂಕೀರ್ಣ. ಸಂಕೀರ್ಣ ಪ್ರಬಂಧಗಳಿಗೆ ಕ್ಷುದ್ರವೆಂಬ ಬೇರೆ ಹೆಸರೂ ಇತ್ತು. ಭರತಮುನಿಯ ಕಾಲದಲ್ಲಿಯೇ ಆರ್ಯಾವೃತ್ತವು ನಾಟ್ಯದಲ್ಲಿ ಪ್ರಚಲಿತವಿದ್ದು ಭರತನು ತನ್ನ ನಾಟ್ಯಶಾಸ್ತ್ರದ […]

Continue Reading

‘ಓವೀ’ ಎಂಬ ದೇಶೀ ಪ್ರಬಂಧ

ಭಾರತೀಯ ಸಂಗೀತ ಇತಿಹಾಸದಲ್ಲಿ ಸಂಗೀತಶಾಸ್ತ್ರಗ್ರಂಥರಚನೆಯ ಕೊಡುಗೆಯಲ್ಲಿ ಕರ್ಣಾಟಕದ ಶಾಸ್ತ್ರಕಾರರದೇ ಮೇಲುಗೈ. ಉತ್ತರ – ದಕ್ಷಿಣಾದಿ ಸಂಗೀತಗಳೆಂದು ಕವಲೊಡೆಯುವ ಸಂದರ್ಭವುಂಟಾದಾಗ, ಈಗಲೂ ಅದೆಷ್ಟೋ ಮೂಲವಾದ, ಪ್ರಾಚೀನ ವಿಷಯಗಳನ್ನು ಉಳಿಸಿಕೊಂಡಿರುವ ದಕ್ಷಿಣ ಭಾರತದ ಸಂಗೀತಕ್ಕೆ ಕರ್ಣಾಟಕಸಂಗೀತವೆಂದೇ ಹೆಸರುಂಟಾಗಲು ಕರ್ಣಾಟಕದ ಶಾಸ್ತ್ರಕಾರರ ಗ್ರಂಥಗಳೇ ಕಾರಣವಾದವು.   ಈಗ ಶಾಸ್ತ್ರೀಯ ಸಂಗೀತವೆಂದು ಕರೆಯಲ್ಪಡುವ ಸಂಗೀತವು ಸುಮಾರು 250-275 ವರ್ಷಗಳಿಗಿಂತ ಈಚೆಗೆ ರೂಪಿತವಾದಂತಹುದು. ಪ್ರಾಚೀನದಿಂದಲೂ ನಮ್ಮ ಸಂಗೀತಶಾಸ್ತ್ರಕಾರರು ಮಡಿವಂತರಾಗದೆ, ಕೇವಲ ಮಾರ್ಗಸಂಗೀತವನ್ನು ಮಾತ್ರ ಹೇಳದೆ ಭಾರತವಿಡೀ ಹಲವು ಪ್ರಾಂತ್ಯಗಳಲ್ಲಿ ಆಗ ಪ್ರಚಲಿತವಿದ್ದ ದೇಶೀ ಜನಪದ ಸಂಗೀತ […]

Continue Reading

ನಾರದನಾಮಪ್ರಣೀತ ಸಂಗೀತಶಾಸ್ತ್ರಗ್ರಂಥಗಳು

ಸಂಗೀತಶಾಸ್ತ್ರ ಪ್ರಪಂಚದಲ್ಲಿ ಬೇರೆ ಬೇರೆ ಕಾಲದಲ್ಲಿ ನಾರದ ಪ್ರಣೀತವೆನ್ನುವ ಸಂಗೀತಶಾಸ್ತ್ರಗ್ರಂಥಗಳು ಲಭ್ಯವಿದೆ. ಪ್ರಾಚೀನದಿಂದ ಅರ್ವಾಚೀನದವರೆಗೂ ನಾಟ್ಯಶಾಸ್ತ್ರ, ಸಂಗೀತ, ಗಾಂಧರ್ವಶಾಸ್ತ್ರ ಇತ್ಯಾದಿ ವಿಚಾರಗಳಲ್ಲಿ ಉಲ್ಲೇಖಿಸಲ್ಪಟ್ಟ ಹತ್ತು ಮಂದಿ ನಾರದರು ಬೇರೆ ಬೇರೆ ಕಾಲಗಳಲ್ಲಿ ಕಂಡುಬರುತ್ತಾರೆ. ಇದರಲ್ಲಿ ನಾರದ ಪ್ರಣೀತವೆನ್ನುವ ಸಂಗೀತಶಾಸ್ತ್ರಗ್ರಂಥಗಳು ಇಂತಿವೆ.   ನಾರದೀಯಶಿಕ್ಷಾ : ವೇದದ ಸ್ವರವರ್ಣಾದಿಗಳನ್ನು ಉಚ್ಚರಿಸಬೇಕಾದ ಕ್ರಮವನ್ನು ಬೋಧಿಸುವ ಗ್ರಂಥಗಳಿಗೆ ಶಿಕ್ಷಾಗಳೆಂದು ಹೆಸರು. ನಾರದೀಯ ಶಿಕ್ಷೆಯು ಸಾಮವೇದದ ಶಿಕ್ಷಾ. ಸಾಮಗೀತೆಗೂ ಲೌಕಿಕ ಸಂಗೀತಕ್ಕೂ ಇದು ಸೇತುಬಂಧನವನ್ನುಂಟುಮಾಡುತ್ತದೆ. ನಾರದನು ನಾರದೀಯಶಿಕ್ಷೆಯ ಕರ್ತೃವೆಂಬುದು ಪ್ರಸಿದ್ಧವಾಗಿಯೇ ಇದೆ. ಇದು […]

Continue Reading

ಸಂಗೀತದ ವಿಶೇಷ ಭಾಷೆ – ‘ಭಾಂಡೀರ

ಸನಾತನ – ಪದೋ ದಾತಾ ನಿತ್ಯಂ ಚೈವ ಸನಾತನಃ | ಭಾಂಡೀರವನವಾಸೀ ಚ ಶ್ರೀವೃಂದಾವನ ನಾಯಕಃ ||59||   ಬಾಲಕ್ರೀಣಾऽತಿ ಚಪಲೋ ಭಾಂಡೀರ – ವನ – ನಂದನಃ | ಮಹಾಶಾಲಃ ಶ್ರುತಿ – ಮುಖೋ ಗಂಗಾ – ಚರಣ – ಸೇವನಃ ||103||   (ಶ್ರೀಗೋಪಾಲ ಸಹಸ್ರನಾಮ ಸ್ತೋತ್ರಮ್ – ಶ್ರೀನಾರದ ಪಂಚರಾತ್ರಮ್)   ಉತ್ತರಪ್ರದೇಶದ  ವೃಂದಾವನವೆಂಬುದು ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ, ಚಾರಿತ್ರಿಕ ಪರಂಪರೆಗಳ ಅಸ್ಮಿತೆಗಳಲ್ಲೊಂದು. ಭಾಗವತದ, ಭಕ್ತರ ಹೃದಯನಾಯಕನಾದ ಯಾದವ ಕೃಷ್ಣನ, ಆತನ ಸ್ನೇಹಿತರ […]

Continue Reading

ಮೆದುಳಿನ ಮೇಲೆ ಸಂಗೀತದ ಪರಿಣಾಮಗಳು

ದಿನಾಂಕ 17.12.2018ರ ಪ್ರಜಾವಾಣಿ ಪತ್ರಿಕೆಯಲ್ಲಿ ಹೀಗೊಂದು ಸುದ್ದಿ ಪ್ರಕಟವಾಯಿತು. ಸ್ವರಚಿಕಿತ್ಸೆಯಿಂದಾಗಿ, ಕೋಮಾದಿಂದ ಹೊರಬಂದ ಪಶ್ಚಿಮಬಂಗಾಳದ ಯುವತಿ – ಸಂಗೀತಾ ಎನ್ನುವವರ ಜೀವವನ್ನು ಉಳಿಸಿದ ಪಿಟೀಲು ವಾದನ! – ಈಗ ಚಿಕಿತ್ಸೆಯನ್ನು ಪಡೆಯುತ್ತಿರುವ ಸಂಗೀತಾ. ಇದನ್ನು ಎಂ. ಎನ್‌. ಯೋಗೇಶ್‌ ಮಂಡ್ಯ ಪ್ರಕಟಿಸಿದರು. ಈ ಸುದ್ದಿಯು ಪ್ರಜಾವಾಣಿಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿಯೂ, ಇನ್ನೂ ಅನೇಕ ವಾರ್ತಾಪತ್ರಿಕೆಗಳಲ್ಲಿಯೂ ಬಹಳವಾಗಿ ಸುತ್ತಿ, ಪ್ರಸಿದ್ಧಿಯನ್ನೂ ಪಡೆಯಿತು.   ವಿಷಯವೇನೆಂದರೆ, ಹಿಂದೂಸ್ಥಾನೀ ಸಂಗೀತದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪಿಟೀಲುವಾದಕಿಯಾದ ಡಾ. ಎನ್‌. ರಾಜಂ ಅವರ […]

Continue Reading

ದಶರೂಪಕ

  ದಶರೂಪ ಅಥವಾ ದಶರೂಪಕವೆಂದು ಕರೆಯಲ್ಪಡುವ ಈ ಗ್ರಂಥವು ನಾಟ್ಯಶಾಸ್ತ್ರದಲ್ಲಿಯೇ ಒಂದು ಮಹತ್ತ್ವಪೂರ್ಣವಾದ, ಭರತಮುನಿ ಕೃತವಾದ ನಾಟ್ಯಶಾಸ್ತ್ರವನ್ನು ಆಧರಿಸಿದ, ಸರ್ವಾಂಗೀಯ ವಿವೇಚನೆಯುಳ್ಳ ಗ್ರಂಥವಾಗಿದೆ. ಇದನ್ನು ರಚಿಸಿದವನು ಧಾರಾನಗರಿಯಲ್ಲಿದ್ದ, ಭೋಜರಾಜನ ಚಿಕ್ಕಪ್ಪನಾಗಿದ್ದ, ಮಾಳವದ ಪರಮಾರ ವಂಶದ, ವಾಕ್ಪತಿ ಮುಂಜರಾಜನ ಆಸ್ಥಾನದಲ್ಲಿದ್ದ ಧನಂಜಯ. ಗ್ರಂಥದ ರಚನಾಕಾಲವು ಕ್ರಿ. ಶ. ಸುಮಾರು 950 ರಿಂದ 1000ರ ವರೆಗೆ.   ಸಂಸ್ಕೃತ ಭಾಷೆಯ ಈ ಗ್ರಂಥವು ಸಂಸ್ಕೃತದಲ್ಲಿ ದೃಶ್ಯಕಾವ್ಯ, ಎಂದರೆ ನಾಟಕದ ಲಕ್ಷಣಗಳನ್ನು ನಿರೂಪಿಸುವುದಾಗಿದ್ದು, ಶಾಸ್ತ್ರಕಾರರರು ಸಂಸ್ಕೃತದಲ್ಲಿ ಮುಖ್ಯವಾಗಿ ಹತ್ತು ರೂಪಕಗಳು, ಹದಿನೆಂಟು […]

Continue Reading