15.02.2019

ದಿನ ಭವಿಷ್ಯ

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಮಾಘ ಮಾಸ /
ಶುಕ್ಲ ಪಕ್ಷ / ದಶಮೀ/ಏಕಾದಶಿ ತಿಥಿ/

ಶುಕ್ರವಾರ / ಮೃಗಶಿರ ನಕ್ಷತ್ರ /

ದಿನಾಂಕ: 15.02.2019

 °~•~°~•~°~•~°~•~°~•~°

ಮೇಷ

        ಮನಸ್ಥೈರ್ಯದಿಂದ ಯಾವುದೇ ಕೆಲಸವನ್ನು ಮಾಡಿದರೂ ಉತ್ತಮ ಯಶಸ್ಸು ಸಿಗುತ್ತದೆ. ಭೂಮಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುವವರಿಗೆ ಉತ್ತಮ ಏಳಿಗೆ ಕಂಡುಬರುತ್ತದೆ. ವ್ಯವಹಾರವು ಲಾಭದಾಯಕವಾಗಿ ನಡೆಯಲಿದ್ದು ಉತ್ತಮ ಕಾರ್ಯಗಳಿಗೆ ಹಣವನ್ನು ವಿನಿಯೋಗಿಸಿ. ದಂಪತಿಗಳ ನಡುವೆ ಸಣ್ಣಪುಟ್ಟ ಕಲಹಗಳು ಏರ್ಪಡುವ ಸಂಭವವಿದ್ದು ಮಾತಿನಲ್ಲಿ ಗಮನವಿರಲಿ. ಕುತ್ತಿಗೆ ನೋವು, ಜ್ವರ, ಪಿತ್ತ ಸಂಬಂಧಿತ ತೊಂದರೆಗಳು, ಚರ್ಮರೋಗ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಏಳಿಗೆ ಕಂಡುಬರಲಿದೆ.



ಪರಿಹಾರ:
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ ||

°~•~°~•~°~•~°~•~°~•~°

    

ವೃಷಭ

         ಏಕಾಗ್ರತೆಯಿಂದ ತಮ್ಮ ಕೆಲಸವನ್ನು ನಿಭಾಯಿಸಿದರೂ ಹಿರಿಯ ಅಧಿಕಾರಿಗಳಿಂದ ಅಸಮಾಧಾನದ ಮಾತುಗಳು ಕೇಳಿ ಬರುವುದು. ಖರ್ಚುವೆಚ್ಚಗಳು ಒದಗಿ ಬರುವುದರಿಂದ  ಜಾಗರೂಕತೆಯಿಂದ ವ್ಯವಹರಿಸಿ. ಯುವಕ-ಯುವತಿಯರಿಗೆ ವಿವಾಹ ಯೋಗ ಒದಗಿಬರುತ್ತದೆ. ದಾಂಪತ್ಯಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಕಫ ಹಾಗೂ ವಾತ ಸಂಬಂಧಿ  ತೊಂದರೆಗಳು, ಕಣ್ಣು ನೋವು, ಗುಹ್ಯರೋಗ, ಮುಂತಾದವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ಮುಂದುವರಿಯಬೇಕು.




ಪರಿಹಾರ
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

°~•~°~•~°~•~°~•~°~•~°



ಮಿಥುನ


   ಉತ್ತಮ ಮನಸ್ಸಿನಿಂದ, ಏಕಾಗ್ರತೆಯಿಂದ ತಮ್ಮ ಕೆಲಸವನ್ನು ಮುಂದುವರಿಸಿದಲ್ಲಿ ಅಭಿವೃದ್ಧಿ  ಕಂಡುಬರುತ್ತದೆ. ಉತ್ತಮ ಹಣ ಸಂಪಾದನೆಯಾದರೂ ಅಧಿಕ ಖರ್ಚುವೆಚ್ಚ ಕಂಡುಬರುವುದು. ದಂಪತಿಗಳ ನಡುವೆ ಸಣ್ಣಪುಟ್ಟ ಕಲಹಗಳು ಏರ್ಪಡುವ ಸಾಧ್ಯತೆ. ಜ್ವರ, ಕಫ, ಕಿವಿನೋವು, ಹೊಟ್ಟೆ ನೋವು ಮುಂತಾದವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಉದಾಸೀನತೆ ಬಿಟ್ಟು ಮುಂದುವರಿದಲ್ಲಿ ಮಾತ್ರ ಏಳಿಗೆ ಲಭ್ಯವಾಗಲಿದೆ.



ಪರಿಹಾರ  
ಶ್ರೀಕೃಷ್ಣನ ಆರಾಧನೆಯಿಂದ ಶುಭ.

ಜಪಿಸಲು:
ವಸುದೇವಸುತಂ ದೇವಂ

ಕಂಸಚಾಣೂರಮರ್ದನಮ್|

ದೇವಕೀಪರಮಾನನ್ದಂ

ಕೃಷ್ಣಂ ವನ್ದೇ ಜಗದ್ಗುರುಮ್ ||

  °~•~°~•~°~•~°~•~°~•~°



ಕರ್ಕಾಟಕ

    ಮಾಡುವ ಕೆಲಸವನ್ನು ತಾವು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಲ್ಲಿ ಉತ್ತಮ ಏಳಿಗೆ ಕಂಡುಬರಲಿದೆ. ಆರಕ್ಷಣ ಉದ್ಯೋಗದಲ್ಲಿರುವವರಿಗೆ ಏಳಿಗೆ ಕಂಡುಬರುತ್ತದೆ. ಹಣಕಾಸಿನ ತೊಂದರೆ ಎದುರಿಸಬೇಕಾಗುತ್ತದೆ. ಸಹೋದರರಿಗೋಸ್ಕರ  ಹಣವನ್ನು ವಿನಿಯೋಗ ಮಾಡಬೇಕಾದ ಪರಿಸ್ಥಿತಿ ಒದಗಿಬರುತ್ತದೆ. ದಾಂಪತ್ಯಜೀವನದಲ್ಲಿ ಏಳಿಗೆ, ಶಾಂತಿ ನೆಲೆಸುವುದು. ವಾತ ಹಾಗೂ ಕಫಗಳಿಗೆ ಸಂಬಂಧಿಸಿದ ತೊಂದರೆ ಕಂಡುಬರುತ್ತದೆ. ದೇಹದ ತಾಪ, ಅತಿಯಾದ ಬಾಯಾರಿಕೆ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ  
ದುರ್ಗೇದೇವಿ ನಮೋಸ್ತುತೇ ||

 °~•~°~•~°~•~°~•~°~•~°



ಸಿಂಹ

      ಉದ್ಯೋಗದಲ್ಲಿ ಉತ್ತಮ ಬಡ್ತಿ ದೊರೆಯುತ್ತದೆ. ನೂತನ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ ಒದಗಿಬರುತ್ತದೆ. ನೃತ್ಯ, ಗಾಯನ ಮುಂತಾದವುಗಳನ್ನೇ ಉದ್ಯೋಗವಾಗಿಸಿಕೊಂಡವರಿಗೆ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಂಡುಬರುತ್ತದೆ. ದಾಂಪತ್ಯಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಜ್ವರ, ಮೈಕೈನೋವು, ವಾತಜನಕವಾದ ತೊಂದರೆ, ಅತಿಯಾದ ಆಯಾಸ ಮುಂತಾದವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪರಿಶ್ರಮದೊಂದಿಗೆ ಮುಂದುವರಿದಲ್ಲಿ ಮಾತ್ರ ಶುಭ.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

    °~•~°~•~°~•~°~•~°~•~°      


ಕನ್ಯಾ


    ಏಕಾಗ್ರತೆಯಿಂದ ಕೆಲಸ ಕಾರ್ಯವನ್ನು ಮಾಡಬೇಕು. ಮನಸ್ಸಿಗೆ ಅಸಮಾಧಾನ ತರಿಸುವ ಘಟನೆಗಳು ಕಾರ್ಯಕ್ಷೇತ್ರದಲ್ಲಿ ನಡೆಯುವುದು. ಸಂಪಾದಿಸಿದ ಹಣವನ್ನು ಉತ್ತಮ ಕಾರ್ಯಕ್ಕೋಸ್ಕರ ವಿನಿಯೋಗಿಸಿ, ದುಂದುವೆಚ್ಚ ಮಾಡದಿರಿ‌. ದಾಂಪತ್ಯಜೀವನದಲ್ಲಿ ಸಮಾಧಾನ ಕಂಡುಬರುತ್ತದೆ. ಪಿತ್ತಜನಕವಾದ ತೊಂದರೆಗಳು, ಉಷ್ಣ ಜ್ವರ, ಎದೆನೋವು, ಮುಂತಾದವನ್ನು ಎದುರಿಸಬೇಕಾಗುತ್ತದೆ. ವಾಹನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ಕಠಿಣ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ  ಶುಭ.

ಜಪಿಸಲು:
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ|  
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||

  °~•~°~•~°~•~°~•~°~•~°       


ತುಲಾ


        ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಏಳಿಗೆ ಕಂಡುಬಂದರೂ ಮನಶ್ಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಕೃಷಿಯನ್ನು ಜೀವನಾಧಾರವಾಗಿಸಿಕೊಂಡವರಿಗೆ ಉತ್ತಮ ಬೆಳೆ ಬಂದರೂ  ಲಾಭದಾಯಕವಾಗಿರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು, ತಲೆ ತಿರುಗುವುದು, ಮುಂತಾದವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ಕಂಡುಬರುತ್ತದೆ.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀ ಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ


 °~•~°~•~°~•~°~•~°~•~°


ವೃಶ್ಚಿಕ


  
ಉನ್ನತ ಗೌರವವನ್ನು ಕಾರ್ಯಕ್ಷೇತ್ರದಲ್ಲಿ ಪಡೆಯುವಿರಿ. ಸರಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉನ್ನತ ಅಭಿವೃದ್ಧಿ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯಜೀವನದಲ್ಲಿ ಸುಖಶಾಂತಿ ನೆಲೆಸುತ್ತದೆ.  ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ ಒದಗಿಬರುತ್ತದೆ. ವಿಪರೀತ ಬಾಯಾರಿಕೆ, ರಕ್ತ ಸಂಬಂಧಿ ತೊಂದರೆಗಳು, ಮುಂತಾದವನ್ನು ಎದುರಿಸಬೇಕಾಗುತ್ತದೆ. ವಾಹನದಲ್ಲಿ ಪ್ರಯಾಣಿಸುವವರು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಉದಾಸೀನತೆ ಬಿಟ್ಟು ಮುಂದುವರಿದಲ್ಲಿ ಮಾತ್ರ ಶುಭ. ಮಕ್ಕಳು ಓಡಾಡುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು.

ಪರಿಹಾರ
ದೇವೀ, ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ.


ಜಪಿಸಲು:
ಷಡಾನನಂ ಕುಂಕುಮರಕ್ತವರ್ಣಂ

ಮಹಾಮತಿಂ ದಿವ್ಯಮಯೂರವಾಹಮ್ |

ರುದ್ರಸ್ಯ ಸೂನುಂ ಸುರಸೈನ್ಯನಾಥಂ

ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°


ಧನು


ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬಂದರೂ ಆಲಸ್ಯದಿಂದಾಗಿ ಹಿನ್ನಡೆ ಪಡೆಯುವಿರಿ. ಅಧ್ಯಾಪಕ ವೃತ್ತಿ ಮಾಡುವವರು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಏಳಿಗೆ ಕಂಡುಬರುವುದು. ದಾಂಪತ್ಯಜೀವನದಲ್ಲಿ ಸಣ್ಣಪುಟ್ಟ ಕಲಹಗಳನ್ನು ಎದುರಿಸಬೇಕಾಗುತ್ತದೆ. ಅತಿಯಾದ ನಿದ್ರೆ, ಉತ್ಸಾಹ ಹೀನತೆ, ಕಫ, ಮುಂತಾದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಉದಾಸೀನತೆ ಬಿಟ್ಟು  ಮುಂದುವರಿಯಬೇಕು.

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

     °~•~°~•~°~•~°~•~°~•~°


ಮಕರ


    ಮಾಡುವ ಕೆಲಸ ಕಾರ್ಯಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿಪರೀತ ಖರ್ಚುವೆಚ್ಚ  ಒದಗಿಬರುತ್ತದೆ. ದಾಂಪತ್ಯಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ. ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ ಒದಗಿಬರುತ್ತದೆ. ಕಣ್ಣಿನ ರೋಗ, ಚರ್ಮರೋಗ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಶಿವ ದೇವಸ್ಥಾನ ದರ್ಶನ, ಕುಲದೇವತಾರಾಧನೆಯಿಂದ ಶುಭ.  

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

   °~•~°~•~°~•~°~•~°~•~°          


ಕುಂಭ  


       ಏಕಾಗ್ರತೆಯಿಂದ, ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಏಳಿಗೆ ಕಂಡುಬರುತ್ತದೆ. ಅಡುಗೆ ವ್ಯಾಪಾರಸ್ಥರು, ಆರಕ್ಷಣ ಉದ್ಯೋಗಸ್ಥರಿಗೆ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ. ಹೆಚ್ಚು ಹಣಕ  ಸಂಪಾದನೆ ಆಗಲಿದೆ. ದಾಂಪತ್ಯಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಉದಾಸೀನತೆ ,ಕಫ, ಶೀತ, ಜ್ವರ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮವಾಗಿ ತೊಡಗಿಸಿಕೊಂಡಲ್ಲಿ ಅಭಿವೃದ್ಧಿ ಕಂಡುಬರುವುದು.



ಪರಿಹಾರ  
ಶಿವದೇವಸ್ಥಾನ ದರ್ಶನ, ರುದ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು:
ರುದ್ರಂ ಪಶುಪತಿಂ ಸ್ಥಾಣುಂ

ನೀಲಕಂಠಂ ಉಮಾಪತಿಮ್ |

ನಮಾಮಿ ಶಿರಸಾ ದೇವಂ

ಕಿಂ ನೋ ಮೃತ್ಯುಃ ಕರಿಷ್ಯತಿ  ||

°~•~°~•~°~•~°~•~°~•~°


ಮೀನ   


  ನಿಮ್ಮ ಉದಾಸೀನತೆ ನಿಮ್ಮ ಏಳಿಗೆಗೆ ಹಿನ್ನಡೆ  ತರುತ್ತದೆ. ಚುರುಕುತನದಿಂದ ಮುಂದುವರಿದರೆ ಮಾತ್ರ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರುವುದು. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಂಡುಬರುತ್ತದೆ. ದಾಂಪತ್ಯಜೀವನದಲ್ಲಿ ಕಲಹ ಎದುರಿಸಬೇಕಾಗುತ್ತದೆ. ಪಿತ್ತದಿಂದ ಬರುವಂತಹ ತೊಂದರೆಗಳು, ಉಷ್ಣ ಜ್ವರ, ಹೊಟ್ಟೆ ನೋವು, ಕಣ್ಣಿನ ರೋಗ ಮುಂತಾದವನ್ನು ಎದುರಿಸಬೇಕಾಗುತ್ತದೆ. ಶತ್ರುವಿನಿಂದ ದೂರ ಇರಿ. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು, ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶಾಂತಾಕಾರಂ ಭುಜಗಶಯನಂ

ಪದ್ಮನಾಭಂ ಸುರೇಶಂ  

ವಿಶ್ವಾಧಾರಂ ಗಗನಸದೃಶಂ

ಮೇಘವರ್ಣಂ ಶುಭಾಂಗಮ್ |

ಲಕ್ಷ್ಮೀಕಾಂತಂ ಕಮಲನಯನಂ

ಯೋಗಿಹೃದ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ

ಸರ್ವಲೋಕೈಕನಾಥಮ್  ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Leave a Reply

Your email address will not be published. Required fields are marked *