ಬಸರೀಕಟ್ಟೆಯ ‘ಶ್ರೀಸದ್ಗುರು ವಿದ್ಯಾನಿಕೇತನ’ದಲ್ಲಿ ‘ಭಾರತ ಸಂಸ್ಕೃತಿ ಶಿಕ್ಷಣ ಶಿಬಿರ’

ಪ್ರಕಟಣೆ

 

ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು, ಬಸರೀಕಟ್ಟೆಯ ‘ಶ್ರೀಸದ್ಗುರು ವಿದ್ಯಾನಿಕೇತನ’ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸಂಸ್ಕೃತಿ ಶಿಕ್ಷಣ ಶಿಬಿರವೊಂದನ್ನು ಆಯೋಜಿಸಲಾಗಿದೆ.

 

* ದಿನಾಂಕ 11.04.2019 ರಿಂದ 18.04.2019 ರವರೆಗೆ ಎಂಟು ದಿನಗಳ ಕಾಲ ಈ ಶಿಬಿರ ನಡೆಯಲಿದೆ.

 

* 10ರಿಂದ 24ವರ್ಷ ವಯೋಮಾನದ ತ್ರಿಮತಸ್ಥ ಬ್ರಾಹ್ಮಣ ಯುವಕ ಮತ್ತು ಯುವತಿಯರು ಈ ಶಿಬಿರಕ್ಕೆ ಶಿಬಿರಾರ್ಥಿಗಳಾಗಿ ಸೇರಬಹುದಾಗಿರುತ್ತದೆ.

 

* ವೇದಮಂತ್ರಗಳು, ಸ್ತೋತ್ರಗಳು, ಧರ್ಮ ಸಂಸ್ಕೃತಿ, ಆಚಾರಗಳು, ಆಹಾರ, ಸಂಸ್ಕಾರಗಳು, ಸ್ತ್ರೀ ಶಿಕ್ಷಣ, ಭಾರತ ದೇಶದ ಸಂಸ್ಕೃತಿಯ ವೈಭವ ಮುಂತಾದ ಅನೇಕ ಸದ್ವಿಚಾರಗಳ ಬಗ್ಗೆ ಶಿಕ್ಷಣ ನೀಡಲಾಗುತ್ತದೆ.

 

* ಆಸಕ್ತರು ದಿನಾಂಕ 1.04.2019 ರೊಳಗೆ ಈ ಕೆಳಕಂಡ ಮೊಬೈಲ್ ನಂಬರುಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಮೌಖಿಕವಾಗಿ ನೊಂದಾಯಿಸಬೇಕು. ಅನಂತರ ಶಿಬಿರಾರ್ಥಿಯ ಹೆಸರು , ವಯಸ್ಸು , ಪೋಷಕರ ಹೆಸರು, ಮನೆಯ ವಿಳಾಸ ಮುಂತಾದ ವಿವರಗಳನ್ನು ಇದೇ ಮೊಬೈಲ್ ನಂಬರುಗಳಿಗೇ ವಾಟ್ಸ್ ಆಪ್ ಅಥವಾ ಎಸ್.ಎಮ್.ಎಸ್. ಮೂಲಕ ಕಳುಹಿಸಿಕೊಡಬೇಕು.

 

* ಮೊದಲು ನೊಂದಾಯಿಸಿದ 50 ಜನರನ್ನು ಮಾತ್ರ ಶಿಬಿರಕ್ಕೆ ಆಯ್ಕೆ ಮಾಡಲಾಗುವುದು.

 

* ಮೈಸೂರಿನ ‘ಭಾರತೀ ಯೋಗಧಾಮ’ದ ಮುಖ್ಯಸ್ಥರೂ, ನಾಡಿನ ಶ್ರೇಷ್ಠ ವಿದ್ವಾಂಸರಲ್ಲೊಬ್ಬರಾದ ಡಾ. ಕೆ.ಎಲ್.ಶಂಕರನಾರಾಯಣ ಜೋಯ್ಸ್ ಮತ್ತು ಅವರ ತಂಡದವರು ಈ ಶಿಬಿರವನ್ನು ನಡೆಸಿಕೊಡುವರು.

 

ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಕೋರಿಕೆ.
ಸಂಪರ್ಕಿಸ ಬಹುದಾದ ದೂರವಾಣಿ ಸಂಖ್ಯೆಗಳು:

9448964366
9449759241
08265248564

Author Details


Srimukha

Leave a Reply

Your email address will not be published. Required fields are marked *