ಬೆಂಗಳೂರು: ಪ್ರತಿ ಮನೆಗೆ ಆರೋಗ್ಯಪೂರ್ಣ ಮತ್ತು ನೈಸರ್ಗಿಕ ಆಹಾರ ಪದಾರ್ಥಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಆರಂಭವಾದ ಶ್ರೀಮಠದ ಮಹತ್ವಾಕಾಂಕ್ಷಿ ಯೋಜನೆ ‘ಗ್ರಾಮರಾಜ್ಯ’ದ ಉತ್ಪನ್ನಗಳು ಈಗ ಪುತ್ತೂರಿನಲ್ಲಿಯೂ ಸಿಗಲಿವೆ.
ಶ್ರೀಸಂಸ್ಥಾನದವರ ಸಂಕಲ್ಪದಂತೆ ಆರಂಭವಾಗಿ, ತನ್ನ ಉತ್ಪನ್ನಗಳಿಂದಾಗಿ ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಮನೆ ಮಾತಾಗಿರುವ ಗ್ರಾಮರಾಜ್ಯವು ಇದೀಗ ದಕ್ಷಿಣಕನ್ನಡದ ಪುತ್ತೂರಿಗೆ ತನ್ನ ಮಾರುಕಟ್ಟೆ ಜಾಲವನ್ನು ವಿಸ್ತರಿಸಿದ್ದು, ಈ ಭಾಗದ ಜನರ ಪ್ರತಿ ಮನೆಯ ಆಹಾರ ವಿಷಮುಕ್ತವಾಗಲಿದೆ ಎಂಬ ಸಂತೋಷ ಹೊಂದಿದೆ.
ಉತ್ಪನ್ನಗಳು ಎಲ್ಲಿ ಸಿಗುತ್ತದೆ?
ಗ್ರಾಮರಾಜ್ಯ ಬ್ರಾಂಡ್ ಆಹಾರ ವಸ್ತುಗಳು ಪುತ್ತೂರಿನ ಬೊಳುವಾರಿನ ಆರ್. ಎಚ್. ಸೆಂಟರ್ ಬಳಿಯ ‘ವೈಷ್ಣವಿ ಆರ್ಗ್ಯಾನಿಕ್ಸ್’ ಮಳಿಗೆಯಲ್ಲಿ ಲಭ್ಯವಾಗುತ್ತವೆ.
ಶ್ರೀಸಂಸ್ಥಾನದವರ ಸಂಕಲ್ಪದಂತೆ ಮುನ್ನಡೆಯುತ್ತಿರುವ ಗ್ರಾಮರಾಜ್ಯದ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಿ ಆರೋಗ್ಯಪೂರ್ಣವಾಗಿರೋಣ ಎಂಬುದು ನಮ್ಮ ಆಶಯ.
ಹೆಚ್ಚಿನ ಮಾಹಿತಿ-ಸಂಪರ್ಕಕ್ಕಾಗಿ :
ವೈಷ್ಣವಿ ಆರ್ಗ್ಯಾನಿಕ್ಸ್ – 9448318351
ಗ್ರಾಮರಾಜ್ಯ – 080 26723315