ಆರ್ ವಿ ದೇಶಪಾಂಡೆ

ವಿಶ್ವ ಹವ್ಯಕ ಸಮ್ಮೇಳನ

ಆರ್ ವಿ ದೇಶಪಾಂಡೆ

ಹವ್ಯಕ ಸಮಾಜದ ಜೊತೆಗೆ ನಾನು ಅವಿನಾಭಾವದ ಸಂಬಂಧವನ್ನು ಹೊಂದಿದ್ದೇನೆ. ಹವ್ಯಕ ಸಮಾಜ ತನ್ನಲ್ಲಿ ಅನೇಕ ಗುಣಾತ್ಮಕ ಬದಲಾವಣೆಗಳೊಂದಿಗೆ ಮುನ್ನೆಡೆಯುತ್ತಿದೆ. ಇದು ಪ್ರಜ್ಞಾವಂತ ಸಮುದಾಯವಾಗಿದೆ. ರಾಮಚಂದ್ರಾಪುರಮಠದ ಶ್ರೀಗಳ ನೇತೃತ್ವದಲ್ಲಿ ಸಮಾಜ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು, ಸಮಾಜದಲ್ಲಿ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಬೆಳೆಸುತ್ತಿರುವ ಕಾಯಕದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಾರ್ಯ ಅನುಪಮವಾದದ್ದು. ಮನುಷ್ಯ ಸಮಾಜಕ್ಕಷ್ಟೇ ಅಲ್ಲದೇ, ಪೂಜ್ಯ ಶ್ರೀಗಳು ಗೋವಿಗಾಗಿ ಜಗತ್ತಿನ ಮೊದಲ ಸ್ವರ್ಗವನ್ನು ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜ ಮುಂದುವರಿಯಲಿ.

ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣರ ಹೆಗಡೆಯವರು ರಾಷ್ಟ್ರದ ರಾಜಕಾರಣಕ್ಕೆ ಹವ್ಯಕ ಸಮುದಾಯದ ಕೊಡುಗೆಯಾಗಿದೆ. ಅವರು ಕೈಗೊಂಡ ಅನೇಕ ದೂರದೃಷ್ಟಿಯ ಯೋಜನೆಗಳು ಸದಾ ಮಾರ್ಗದರ್ಶಕವಾಗಿವೆ.

ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು, ಸಮಾಜದ ಶ್ರೇಯಸ್ಸಿಗೆ ತೊಡಗಿಸಿಕೊಳ್ಳಬೇಕು. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಮುಂದುವರಿಯಲಿ.

Leave a Reply

Your email address will not be published. Required fields are marked *