ಹವ್ಯಕ ಸಮ್ಮೇಳನ

ವಿಶ್ವ ಹವ್ಯಕ ಸಮ್ಮೇಳನ

ಲೋಕದ ಒಳಿತಿಗಾಗಿ ಆರ್ವಿಭವಿಸಿದ ಸಮಾಜ ಹವ್ಯಕ ಸಮಾಜ. ಉತ್ತರದ ಅಹಿಚ್ಛತ್ರದಿಂದ ರಾಜ ಮಯೂರವರ್ಮ 30 ವೈದಿಕ ಕುಟುಂಬಗಳನ್ನು ಕರೆತಂದ. ಇದೇ ಕುಟುಂಬಗಳು ಹವ್ಯಕ ಸಮುದಾಯವಾಗಿ ರೂಪುಗೊಂಡು ಲೋಕವಿಖ್ಯಾತವಾಯಿತು.

ಹವ್ಯಕ ಸಮುದಾಯ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಸಮಾಜಕ್ಕೆ ಹೆಮ್ಮೆಯ ವಿಚಾರ. ಹವ್ಯಕರು ತಮ್ಮದೇ ಆದ ಹವಿಗನ್ನಡ ಭಾಷೆಯನ್ನು ಹೊಂದಿದೆ, ಅಡಿಕೆ ಕೃಷಿ ನಮ್ಮ ಪಾರಂಪರಿಕ ಕೃಷಿಯಾದರೆ, ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಕರ ಕೊಡುಗೆ ಅನುಪಮವಾದದ್ದು. ಹಾಗೆಯೇ ಹವ್ಯಕರಲ್ಲಿ ಅನಕ್ಷರಸ್ಥರು ಇಲ್ಲ ಎಂಬುದು ಗಮನಾರ್ಹ.

ಐತಿಹಾಸಿಕವಾದ ಪ್ರಥಮ ವಿಶ್ವ ಹವ್ಯಕ ಸಮ್ಮೇಳನ ಸರಿಯಾಗಿ 22 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸಂಪನ್ನವಾಗಿತ್ತು. ಹವ್ಯಕರ ಸಂಸ್ಕೃತಿ ಸಂಪ್ರದಾಯವನ್ನು ಜಗತ್ತಿನ ಮುಂದೆ ತೆರೆದಿಡಲು ಇದೀಗ ಮತ್ತೆ ಐತಿಹಾಸಿಕವಾದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಅಮೃತಮಹೋತ್ಸವದ ಜೊತೆಜೊತೆಗೆ ಆಯೋಜಿಸಲಾಗಿದೆ. ಈ ಬೃಹತ್ ಕಾರ್ಯಕ್ರಮದ ಆಯೋಜನೆಯ ಹಿಂದೆ ಸಹಸ್ರಾರು ಸುಸಂಸ್ಕೃತ ಸಂಸ್ಕೃತಿಯ ಸಹೃದಯಗಳು ಕೈಜೋಡಿಸಿವೆ. ಐತಿಹಾಸಿಕ ದಾಖಲೆಯ ಅನೇಕ ಕಾರ್ಯಕ್ರಮ ಸರಣಿಗಳು ಈ ಸಮ್ಮೇಳನದಲ್ಲಿ ಇರಲಿವೆ. ಎಲ್ಲಾ ಸುಮನಸ್ಸುಗಳಿಗೂ ಕಾರ್ಯಕ್ರಮಕ್ಕೆ ಸ್ವಾಗತ ಎಂದು ಸಮ್ಮೇಳನದ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿದರು.

Author Details


Srimukha

Leave a Reply

Your email address will not be published. Required fields are marked *