ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಶಾಸನತಂತ್ರ – ಸೇವಾಖಂಡ ಕಾರ್ಯಾಗಾರ

ಮಠ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಭಾನುವಾರ ಸೇವಾಖಂಡದ ಕಾರ್ಯಾಗಾರ ನಡೆಯಿತು.

ಗುರುಮಂದಿರ, ಶ್ರೀರಾಮ ದೇವರ ಸನ್ನಿಧಿ ಗಣಪತಿ ಮತ್ತು ಸುಬ್ರಹ್ಮಣ್ಯ ಸನ್ನಿಧಿ ಗುರುಪೀಠಗಳ ಮುಂಭಾಗದಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ದೀಪ ಪ್ರಜ್ವಲನ, ಫಲ ಸಮರ್ಪಣೆ, ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ವಿದ್ವಾನ್ ಶಿವರಾಮ ಅಗ್ನಿಹೋತ್ರಿ ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ರೀತಿ, ಕಾರ್ಯಕರ್ತರ ನಡವಳಿಕೆ ಬಗ್ಗೆ ಮನೋಜ್ಞವಾಗಿ ತಿಳಿಸಿ ಕೊಟ್ಟರು. ಯೋಜನಾ ಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶ ಶರ್ಮಾ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು. ಅಧ್ಯಕ್ಷತೆ ವಹಿಸಿದ ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಶ್ರೀಮಠದ ಶಾಸನ ತಂತ್ರದ ಸಮಗ್ರ ಮಾಹಿತಿ ನೀಡಿದರು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು ಕಾರ್ಯಕರ್ತರ ಸೇವಾಭಾವದ ಬಗ್ಗೆ ಮಾತನಾಡಿದರು. ಸೇವಾಖಂಡದ ಸ್ವರೂಪದ ಹಾಗು ವ್ಯಾಪ್ತಿಯ ಸಂಪೂರ್ಣ ಮಾಹಿತಿಯನ್ನು ಖಂಡದ ಶ್ರೀಸಂಯೋಜಕ ಕೇಶವ ಪ್ರಕಾಶ ಮುಣ್ಚಿಕಾನ ತಿಳಿಸಿದರು. ಉಪಖಂಡದ ಸಮಗ್ರವಾದ ವಿವರಣೆ ಖಂಡದ ಸಂಯೋಜಕಾರದ ಶಿವರಾಜ ಪೆರ್ಮುಖ ಗುಂಪು ಚಟುವಟಿಕೆ ನಡೆಸಿದರು.

ಕಾರ್ಯಗಾರದಲ್ಲಿ ಸಂವಾದವನ್ನು ಸಂಯೋಜಕರಾದ ವಿಷ್ಣು ಭಟ್ ಕವಲಕ್ಕಿ ನಡೆಸಿಕೊಟ್ಟರು. ಕಾರ್ಯಕರ್ತರ ಅಭಿಪ್ರಾಯ ಗಳನ್ನು ಕಿರಣ್ ಭೀಮನಕೋಣೆ ಸಂಗ್ರಹಿಸಿದರು.

ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ವಿಶೇಷ ಅಭ್ಯಾಗತರಾದ ಹಿರಿಯ ನ್ಯಾಯವಾದಿ ಅರುಣ ಶ್ಯಾಮ್ ಮಾತನಾಡಿ ಶ್ರೀಮಠದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಆರಂಭಿಸಿದ ತನಗೆ, ಸೇವಾ ತತ್ಪರತೆ ಮತ್ತು ಗುರು ಅನುಗ್ರಹ ನಿಜ ಜೀವನದಲ್ಲಿ ಸಾಧನೆಗೆ ಹೇಗೆ ಬೆಳಕಾಗುತ್ತದೆ ಎಂದು ತಿಳಿಸಿದರು.

ಸೇವಾ ಖಂಡದ ಮುಂದಿನ ಕಾರ್ಯಗಳ ನಿರ್ಣಯಗಳನ್ನು ಶಾಸನ ತಂತ್ರ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಎಡಪ್ಪಾಡಿ ಮಂಡಿಸಿದರು. ಶಾಸನತಂತ್ರ ಕಾರ್ಯಾಲಯ ಕಾರ್ಯದರ್ಶಿ ಅನುರಾಧ ಪಾರ್ವತಿ ವೇದಿಕೆಯಲ್ಲಿದ್ದರು. ಹವ್ಯಕ ಮಹಾಮಂಡಲದ ಕೋಶಾಧ್ಯಕ್ಷರು ಹಾಗೂ ವಿದ್ಯಾರ್ಥಿವಾಹಿನಿ ಪ್ರಧಾನರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ೬೦ಕ್ಕೂ ಹೆಚ್ಚಿನ ಸೇವಾಖಂಡದ ಸೇವಾ ಬಿಂದುಗಳು ಭಾಗವಹಿಸಿದ್ದರು.

ಸಂಯೋಜಕಿ ದಿವ್ಯಾ ಮಹೇಶ್ ಜೋಶಿ ವಂದಿಸಿದರು. ಸಂಯೋಜಕ ಸುರೇಶ್ ಭಟ್ ಸೂರ್ಡೆಲು ಕಾರ್ಯಗಾರವನ್ನು ನಿರೂಪಿಸಿದರು.

 

Leave a Reply

Your email address will not be published. Required fields are marked *