ಶತಕಂಠ ಗಾಯನ

ಲೇಖನ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಸ್ವಭಾಷಾ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮದ ಅಂಗವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಲಯ ಅಶೋಕೆ, ಗೋಕರ್ಣದ ವಿದ್ಯಾರ್ಥಿಗಳು ವಿ. ವಿ. ವಿಯ ಗುರುದೃಷ್ಟಿ ಸಭಾಭವನದಲ್ಲಿ ಶತಕಂಠ ಗಾಯನ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ನಡೆಸಿಕೊಟ್ಟರು.

ಶ್ರೀ ಸಂಸ್ಥಾನದವರ ದಿವ್ಯ ಉಪಸ್ಥಿತಿಯಲ್ಲಿ ಅವರೇ ರಚಿಸಿದ, ರಾಜೀವ ಪೀಠದಲಿ ರಾರಾಜಿಸುವ ನಮ್ಮ ರಾಜಾಧಿರಾಜ ರಘುನಾಯಕನ ಕಂಡೆ ಮತ್ತು ಪುರಂದರದಾಸರಿಂದ ರಚಿತವಾದ ರಾಮ ನಾಮವ ಹಿಡಿ ಹಿಡಿ ಕಾಮಕ್ರೋಧಗಳ ಬಿಡಿ ಬಿಡಿ ಎಂಬ ಹಾಡುಗಳನ್ನು 150ಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಂಠದಲ್ಲಿ ಹಾಡಿ ನೆರೆದಿದ್ದ ಅಪಾರ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.

 

ಈ ಮೂಲಕ ವಿಶ್ವವಿದ್ಯಾಲಯ ಎಂಬುದು ಹೊಸ ಹೊಸ ಪ್ರಯೋಗಗಳಿಗೆ ಅಣಿಯಾಗಬೇಕು ಎಂಬ ಮಾತಿಗೆ  ಮಾದರಿಯಾದರು.‌

13 ಬಾನ್ಸುರಿ, 2 ಕೊಳಲು, 2 ಸಂವಾದಿನಿ, 2 ಪಿಟೀಲು, 4 ವೀಣೆ, 2 ಮೃದಂಗ, 7 ತಬಲ ವಿದ್ಯಾರ್ಥಿಗಳು ವಾದ್ಯ ಸಹಕಾರ ನೀಡಿದರು.  ಶತಕಂಠ ಗಾಯನದ ಹಾಡುಗಳಿಗೆ ರಾಗ ಸಂಯೋಜಿಸಿ, ವಾದ್ಯ ಸಂಯೋಜನೆ ಮಾಡುವುದರೊಂದಿಗೆ ಎಲ್ಲರಿಗೂ ತರಬೇತಿಯನ್ನು ವಿವಿವಿ ಸ್ವರಾತ್ಮ ಗುರುಕುಲದ ಪ್ರಾಚಾರ್ಯರಾದ ಡಾ. ಹರೀಶ್ ಹೆಗಡೆ ಮತ್ತು ಕಲಾವಿಭಾಗದ ಸಂಯೋಜಕಿ ಕವಿತಾ ಹೆಗಡೆ ನೀಡಿದರು.

ಪರಂಪರಾ ಗುರುಕುಲದ ಪ್ರಾಚಾರ್ಯರಾದ ನರಸಿಂಹ ಭಟ್, ಸಾರ್ವಭೌಮ ಗುರುಕುಲದ ಮುಖ್ಯ ಶಿಕ್ಷಕರಾದ ಸೌಭಾಗ್ಯ ಭಟ್, ಪದವಿ ಪೂರ್ವ ವಿಭಾಗದ ಮುಖ್ಯಸ್ಥೆ ಶಶಿಕಲಾ ಕೂರ್ಸೆ, ಪೂಜಾ ಭಟ್, ಚಂಪಕಾ ಭಟ್, ಸ್ನೇಹಾ ಗೌರಿ, ಮಂಜುನಾಥ ಶರ್ಮ, ಸದಾನಂದ ಹೆಬ್ಬಾರ್, ಅಕ್ಷಯ ಆರ್ಯ, ಸುಧನ್ವ ಶಾಸ್ತ್ರಿ, ವಿಜಯ ಅರ್ಯ, ಶಾಂತಲಾ ಹೆಗಡೆ, ಶಕುಂತಲಾ ವಿವಿವಿಯ ಎಲ್ಲಾ ಆಡಳಿತ ವರ್ಗದವರು ಸಹಾಯ ಸಹಕಾರವನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಿ ವಿ ವಿ ಯ ಅಧಿಕಾರಿಗಳಾದ ಮಂಜುನಾಥ ಭಟ್ ಸುವರ್ಣಗದ್ದೆ, ಡಾ ಪ್ರಸನ್ನ ಕುಮಾರ್ ಟಿ., ಅರುಣ ಹೆಗಡೆ, ಶ್ರೀಕಾಂತ ಪಂಡಿತ ಮತ್ತಿತರರು ಉಪಸ್ಥಿತರಿದ್ದರು. ಶತಕಂಠ ಗಾಯನದ  ನಿರೂಪಣೆಯನ್ನು ಸುಧನ್ವ ಶಾಸ್ತ್ರಿಗಳು ನಡೆಸಿಕೊಟ್ಟರು.

 

ಲೇಖನ: ಡಾ. ಹರೀಶ ಹೆಗಡೆ
ಪ್ರಾಚಾರ್ಯರು, ಸ್ವರಾತ್ಮ ಗುರುಕುಲಮ್, ವಿವಿವಿ

Leave a Reply

Your email address will not be published. Required fields are marked *