ಹವಿ – ಸವಿ ತೋರಣ – ಉದಯಕಾಲದೊಳ್ ಎದ್ದು – ೨

ಲೇಖನ

 

‘ ಉದಯ ಕಾಲದೊಳ್ ಎದ್ದು ಗೋಪಿಯು ದಧಿಯ ಮಥಿಸುವೆನೆಂಬ ಸಮಯದಿ….’ ಅಪ್ಪು.. ಅದು ಅಜ್ಜಿದೆ ದೆನಿ. ಉದೆಕಾಲಕ್ಕೆ ಎದ್ದು ಅಜ್ಜಿ ಮೊಸರು ಕಡವ ಗೌಜಿ..

ಮನೆ ಹೆಮ್ಮಕ್ಕೊ ಪ್ರತಿ ದಿನವೂ ಬೇಗ ಏಳುವ ಸಂಪ್ರದಾಯ ನಮ್ಮಲ್ಲಿ ರೂಢಿಗೆ ಬಯಿಂದು. ಹೆಮ್ಮಕ್ಕೊ ಮಾಂತ್ರಲ್ಲ, ಇದು ಎಲ್ಲರಿಂಗೂ ಅನ್ವಯ ಆವ್ತು.

‘ ಬ್ರಾಹ್ಮಿ ಮುಹೂರ್ತದಲ್ಲಿ ಭಾಗ್ಯಲಕ್ಷ್ಮಿ ಬಂದು ನಮ್ಮ ಏಳ್ಸುತ್ತಾಡ. ಅಜ್ಜಿ ಯೇವಗಲೂ ಹೇಳುವ ಮಾತಿದು.
ಆ ಹೊತ್ತಿಂಗೆ ನಾವು ಎದ್ದರೆ ನವಗೆ ಬದುಕಿಲ್ಲಿ ಎಲ್ಲಾ ಸೌಭಾಗ್ಯಂಗಳು ಸಿಕ್ಕುತ್ತಡ. ಅದರೊಟ್ಟಿಂಗೆ ಇನ್ನೊಂದು ಮಾತನ್ನು ಹೇಳುತ್ತವು
‘ ಭಾಗ್ಯಲಕ್ಷ್ಮಿ ಬ್ರಾಹ್ಮೀ ಮುಹೂರ್ತ ಆತು, ಏಳಿ ಮಕ್ಕಳೇ ‘ ಹೇಳಿ ನಮ್ಮ ಏಳ್ಸುವ ಹೊತ್ತಿಂಗೆ ಸರಿಯಾಗಿ ಜೇಷ್ಠಾ ಲಕ್ಷ್ಮಿ ಅಥವಾ ದರಿದ್ರ ಲಕ್ಷ್ಮಿ ಬಂದು
‘ಇನ್ನೂ ಒರಗು. ಈಗ ಎದ್ದು ಎಂತ ಮಾಡ್ಲಿದ್ದು ‘ ಹೇಳಿ ಕಾಲುದ್ದುಗಾಡ. ಒಳ್ಳೆತನಂದ ಹೆಚ್ಚು ಬೇಗ ಮನಸ್ಸು ಕೊಟ್ಟೋಪದು ಕೆಟ್ಟದಕ್ಕೆ ಅಲ್ಲದಾ, ಹಾಂಗಾಗಿ ಆ ಹೊತ್ತಿಲ್ಲಿ ನವಗೆ ಜೋರು ಒರಕ್ಕು ತೂಗಿ ಏಳ್ಲೇ ಮನಸ್ಸು ಬಾರದ್ದದಾಡ. ಮನೇಲಿದ್ದ ಅಜ್ಜಿಯಕ್ಕೊ ಹೇಳಿಕೊಂಡಿದ್ದ ಕಥೆಯಿದು.

ಬೆಣಚ್ಚು ಬಿಡುವನ್ನಾರ ಹಾಸಿಗೆಲಿ ಮನುಗೂಳಿ ಮನಸ್ಸಿನ ಒತ್ತಾಯ ಮಾಡುವ ದರಿದ್ರಲಕ್ಷ್ಮಿಯ ಹಿಡಿತಂದ ಬಿಡ್ಸಿ ಏಳುದು ಅಷ್ಟು ಸುಲಭಲ್ಲ. ಆದರೂ ನಾವು ಏಳ್ಲೇ ಬೇಕು.

ಉದಿಯಪ್ಪಗ ಎದ್ದರೆ ನಮ್ಮ ಮನಸ್ಸು ಶಾಂತವಾಗಿರ್ತು. ಕುಞ್ಞುದಿಯಪ್ಪಗ ಏಳೆಕು ಹೇಳಿ ನಮ್ಮ ಹೆರಿಯೋರು ಚಂದದ ಆದರ್ಶದ ಪಾಠ ಹೇಳಿಕೊಟ್ಟಿದವು. ಅವಕ್ಕೆ ಮಳೆ, ಗಾಳಿ, ಚಳಿ ಯೇವದೂ ಲಗಾವಾಗಿಂಡಿತ್ತಿಲ್ಲೆ. ಯೇವಗಲೂ ಒಂದೇ ಹೊತ್ತಿಂಗೆ ಏಳುಗು. ಎದ್ದ ಮತ್ತೆಯೂ ಒಂದು ಕ್ಷಣ ಹಾಳು ಮಾಡದ್ದೆ ಅವರ ಕರ್ತವ್ಯಂಗಳ ಮಾಡುಗು.

ಉದಿಯಪ್ಪಗ ಹಾಸಿಗೆಂದ ಏಳುದಕ್ಕೂ ಒಂದು ಕ್ರಮ ಇದ್ದೂಳಿ ನಮ್ಮ ಹೆರಿಯೋರು ಹೇಳ್ತವು.

ಬಲದ ಹೊಡೆಂಗೆ ತಿರುಗಿ ಎದ್ದು ಕೂದು ನಮ್ಮ ಅಂಗೈ ನೋಡಿಂಡು ಈ ಸ್ತೋತ್ರ ಹೇಳೆಕಾಡ

‘ ಕರಾಗ್ರೇ ವಸತೇ ಲಕ್ಷ್ಮೀ
ಕರಮಧ್ಯೇ ಸರಸ್ವತೀ
ಕರಮೂಲೇ ಸ್ಥಿತಾ ಗೌರೀ
ಪ್ರಭಾತೇ ಕರದರ್ಶನಂ ‘

ಎಷ್ಟು ಚೆಂದದ ಅರ್ಥಪೂರ್ಣ ಶ್ಲೋಕ ಅಲ್ಲದಾ, ನಮ್ಮ ಕೈಲಿಯೇ ಲಕ್ಷ್ಮಿಯು, ಸರಸ್ವತಿಯು, ಗೌರಿಯೂ ನೆಲೆಸಿದ್ದು ಹೇಳುವ ಸಂಗತಿಯೇ ಎಷ್ಟು ಕೊಶಿ.
ಒಳ್ಳೆ ಮನಸ್ಸಿಂದ ಹೀಂಗೆ ಪ್ರಾರ್ಥನೆ ಮಾಡಿಕ್ಕಿ ಎದ್ದರೆ ನಮ್ಮ ಕೈಂದ ಒಳ್ಳೆ ಕೆಲಸಂಗಳ ನಡೆಶಿಕೊಡ್ತವಾಡ ದೇವರು. ಅಜ್ಜಿ ಹೇಳಿದ ಮಾತಿದು. ಎಷ್ಟೋ ಸರ್ತಿ ಅದು ನಿಜ ಹೇಳಿಯೇ ಆವ್ತು.

ಈ ಶ್ಲೋಕ ಹೇಳಿದ ಕೂಡಲೇ ಹಾಸಿಗೆಂದ ಎದ್ದು ಓಡುದಲ್ಲ. ನಾವು ನೆಲಕ್ಕ ಮೆಟ್ಟುವ ಮೊದಲು ನಮ್ಮ ಹೊರುವ ಭೂಮಿ ಅಬ್ಬೆಯ ಕ್ಷಮೆ ಕೇಳೆಕಾಡ. ಅದಕ್ಕೇ ಈ ಸ್ತೋತ್ರ

‘ ಸಮುದ್ರ ವಸನೇ ದೇವೀ
ಪರ್ವತಸ್ತನ ಮಂಡಲೇ
ವಿಷ್ಣುಪತ್ನೀ ನಮಸ್ತುಭ್ಯಂ
ಪಾದಸ್ಪರ್ಶಂ ಕ್ಷಮಸ್ವಮೇ ‘

ಭೂಮಿ ಅಬ್ಬೆ ನಮ್ಮ ಹೊತ್ತುಕೊಂಬ ತಾಯಿ. ಅದರ ಮೆಟ್ಟಿಕೊಂಡೇ ಓಡಾಡುದು ನಾವು. ಕ್ಷಮಾಗುಣಕ್ಕೆ ಇನ್ನೊಂದು ಹೆಸರೇ ಭೂಮಿ ಆಡ. ಆರು ಎಷ್ಟು ಗರ್ಪಿ, ಬಗದು ಹಿಂಸೆ ಕೊಟ್ಟರೂ ಭೂಮಿ ಅಬ್ಬೆ ನಮಗೆ ತೊಂದರೆ ಕೊಡದ್ದೆ ನಮ್ಮ ಹೊತ್ತು ತಿರುಗುತ್ತು. ಹಾಂಗಿದ್ದ ಅಬ್ಬೆಯ ಕ್ಷಮೆ ಕೇಳಿಕ್ಕಿಯೇ ನಮ್ಮ ದಿನಚರಿ ಸುರು ಮಾಡೆಕು ಹೇಳುವ ಹೆರಿಯೋರ ಆಶಯ ಎಷ್ಟು ಚಂದ ಅಲ್ಲದಾ..!

ನಮ್ಮ ಗುರುಗಳೂ ಉದಿಯಪ್ಪಗ ಬೇಗ ಏಳುವ ವಿಶಯದ ಬಗ್ಗೆ ಒಂದು ಚೆಂದದ ಕಥೆ ಹೇಳಿದ್ದವು. ಪ್ರತೀ ದಿನ ಎಚ್ಚರಿಕೆ ಅಪ್ಪಗಳೂ ನೆಂಪಪ್ಪ ಕಥೆ ಇದು.

‘ ಮತ್ತೆ ಮತ್ತೆ ಬಂದೆ, ನೀ ಅಮೃತ ತಂದೆ ‘ ಹೇಳಿ. ದೇವರು ನವಗೆ ಕೊಡ್ಲೆ ಅಮೃತವನ್ನೇ ತೆಕೊಂಡು ಬತ್ತನಾಡ. ಬ್ರಾಹ್ಮೀ ಮುಹೂರ್ತಲ್ಲಿ ದೇವರು ನವಗೆ ಅಮೃತಕೊಡ್ಲೆ ಬಪ್ಪಗ ನಾವು ಜಡ ಹಿಡುದವರ ಹಾಂಗೆ ಒರಗಿಂಡಿರ್ತಾಡ. ಅದರ ಕಂಡರೂ ದೇವರಿಂಗೆ ನಮ್ಮತ್ರೆ ಕೋಪ ಬತ್ತಿಲ್ಲೇಡ.

‘ ಇಂದು ಒರಗು, ನಾಳಂಗೂ ಅಮೃತ ತತ್ತೆ, ಅಷ್ಟಪ್ಪಗ ತೆಕ್ಕೊ ‘ ಹೇಳಿ ದೇವರು ಸಮದಾನ ಮಾಡ್ತಾ°ಡ.
ಆದರೆ ನವಗೆ ಸಮಯದ ಮಹತ್ವ ಗೊಂತಿಲ್ಲೆ, ಬ್ರಾಹ್ಮೀ ಮುಹೂರ್ತಲ್ಲಿ ಏಳುದರ ಗುಣ ಅರ್ಥಾವ್ತಿಲ್ಲೆ. ಉದಿಯಪ್ಪಾಣ ಒರಕ್ಕು ಬಿಟ್ಟು ಏಳ್ಲೆ ಜಾಡ್ಯತನ ಬಿಡ್ತಿಲ್ಲೆ. ಹಾಂಗಾಗಿಯೇ ದೇವರು ತಂದುಕೊಡುವ ಆ ಅಮೃತವ ತೆಕ್ಕೊಂಬಲೆ ನವಗೆ ಎಡಿತ್ತಿಲ್ಲೆ.

ಕಾಲದ ಮಹತ್ವವ ನಾವು ತಿಳಿಯೆಕು. ಪ್ರತಿಯೊಂದಕ್ಕೂ ಅದರದ್ದೇ ಆದ ಸಮಯ ಇದ್ದು. ಆ ಸಮಯಲ್ಲೇ ಅದರ ಮಾಡಿದರೆ ಎರಟ್ಟಿ ಗುಣ ( ಎರಡು ಪಟ್ಟು ) ಇದ್ದು.

ಈಗಾಣ ತೆರಕ್ಕಿನ ( ಒತ್ತಡದ) ಜೀವನಕ್ರಮ ನಮ್ಮ ಸಹಜ ಜೀವನ ಕ್ರಮಂಗಳ ಬದಲ್ಸಿದ್ದು. ಒರಗುದಕ್ಕೂ, ಏಳುದಕ್ಕೂ ಹೊತ್ತಿಲ್ಲದ್ದಾಂಗಾಯಿದು. ಅದು ಬದಲಾಯೆಕು. ಸೂರ್ಯೋದಯಂದ ಮದಲೇ ಎದ್ದು, ದೇವರ ಪ್ರಾರ್ಥಿಸುತ್ತಾ ನಮ್ಮ ಚಂದದ ದಿನಚರಿಯ ಸುರು ಮಾಡಿದರೆ ನವಗೆ ಆರೋಗ್ಯ, ನೆಮ್ಮದಿ ಎರಡೂ ಸಿಕ್ಕುತ್ತು.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *