ಮುಜುಂಗಾವು ವಿದ್ಯಾಪೀಠಕ್ಕೆ ಹ್ಯಾಪಿ ಹವ್ಯಕ ವಾಟ್ಸಪ್ ಬಳಗದಿಂದ ದೇಣಿಗೆ ಸಮರ್ಪಣೆ

ವಿದ್ಯಾಲಯ

ಮುಳ್ಳೇರಿಯಾ: ಮಂಡಲದ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನೂತನವಾಗಿ‌ ನಿರ್ಮಿಸುತ್ತಿರುವ ಭೊಜನ ಶಾಲೆಗೆ ಹ್ಯಾಪಿ ಹವ್ಯಕ ವಾಟ್ಸಪ್ ಬಳಗದಿಂದ ಸಹಾಯಧನವನ್ನು ವಿತರಿಸಲಾಯಿತು.

 

ಗುಂಪಿನಲ್ಲಿರುವ 60 ಜನರು ಈ ಕಾರ್ಯದಲ್ಲಿ ಭಾಗಿಯಾಗಿ 60606 ರೂ. ಸಂಗ್ರಹಿಸಿ ವಿದ್ಯಾಪೀಠಕ್ಕೆ ಸಮರ್ಪಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ ಹಿಳ್ಳೆಮನೆ, ಕೋಶಾಧಿಕಾರಿ ಉದನೇಶ್ವರ ಪ್ರಸಾದ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಭೆ ಮಾರ್ಗ, ಹಿರಿಯ ಅಧ್ಯಾಪಕರಾದ ಬಾಲಕೃಷ್ಣ ಶರ್ಮ ದೇಣಿಗೆಯನ್ನು ಸ್ವೀಕರಿಸಿದರು.

 

ಕಾಸರಗೋಡು ವಲಯದ ಕಾರ್ಯದರ್ಶಿ ಹಾಗೂ ಹ್ಯಾಪಿ‌ ಹವ್ಯಕ ಬಳಗದ ನೇತೃತ್ವವನ್ನು ವಹಿಸಿದ ಮಹೇಶ ಮನ್ನಿಪ್ಪಾಡಿ, ಸದಸ್ಯರಾದ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಕೋಶ ವಿಭಾಗದ ಪರಮೇಶ್ವರ ಪೆರುಮುಂಡ,  ಗುರುಕುಲ ಪ್ರಕಲ್ಪ ವಿಭಾಗದ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ಕಾಸರಗೋಡು ವಲಯ ಅಧ್ಯಕ್ಷರಾದ ಗೋವಿಂದ ಭಟ್ ವೈ.ವಿ, ಗುರುಕುಲ ಪ್ರಕಲ್ಪ ವಿಭಾಗದ ಈಶ್ವರ ಭಟ್ ಉಳುವಾನ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಹರಿಪ್ರಸಾದ್ ನಿರೂಪಿಸಿದರು‌.

Leave a Reply

Your email address will not be published. Required fields are marked *