ಗೋಸ್ವರ್ಗದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ

ಗೋವು ಶಿಕ್ಷಣ ಸುದ್ದಿ

ಸಾವಿರದ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಸಪ್ತದೇವತೆಗಳ ಸನ್ನಿಧಿಯಾದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಸ್ವರ್ಗದಲ್ಲಿ ಕರ್ನಾಟಕ ರಾಜ್ಯ ಗೋಪರಿವಾರದ ಆಶ್ರಯದಲ್ಲಿ ನವೆಂಬರ್ 23,24,25 ರಂದು ಗವ್ಯೋತ್ಪನ್ನಗಳ ತಯಾರಿಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಗೋಮಯ, ಗೋಮೂತ್ರ ಸೇರಿದಂತೆ ಆರೋಗ್ಯ, ಕೃಷಿ, ಪರಿಸರದ ಸಮೃದ್ಧಿಗೆ ಸಹಕಾರವಾಗುವ ವಿವಿಧ ಗವ್ಯೋತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯ ಜೊತೆ ತರಬೇತಿ ನೀಡಲಾಗುವುದು. ಮೂರು ದಿನಗಳ ವಸತಿ ಸಹಿತ ಶಿಬಿರದಲ್ಲಿ ಊಟೋಪಚಾರ ಹಾಗೂ ಸಾಮೂಹಿಕ ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು.

ಆಸಕ್ತರು ನವೆಂಬರ್ 20ನೇ ತಾರೀಖಿನ ಒಳಗೆ ನಿಗದಿತ ಶುಲ್ಕದೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಲು ಕೋರಿದೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು ಈ ಕೆಳಗಿನವರನ್ನು ಸಂಪರ್ಕಿಸಲು ಕೋರಿದೆ.

ಕೇವಲ 50 ಜನರಿಗೆ ಮಾತ್ರ ಅವಕಾಶ ಇದೆ.

ಡಾ|| ರವಿ : 9483942776
ಮಹೇಶ ಚಟ್ನಳ್ಳಿ : 9449595277
ಮಧು ಗೋಮತಿ: 9449595278

ಭಾರತೀಯ ಗೋಪರಿವಾರ-
ಕರ್ನಾಟಕ_ರಾಜ್ಯ

Author Details


Srimukha

2 thoughts on “ಗೋಸ್ವರ್ಗದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ

    1. Please contact Dr.Ravi 9483942776 or Mahesh Chatnalli 9449595277 or Madhu Gomati 9449595278 and confirm your participation.

Leave a Reply

Your email address will not be published. Required fields are marked *