ಶನಿವಾರ ರಾಮಾಶ್ರಮದಲ್ಲಿ ರಾಮಪದ ಸತ್ಸಂಗ

ಕಲೆ ~ ಸಾಹಿತ್ಯ ಸುದ್ದಿ


ಬೆಂಗಳೂರು:- ಏಕಾದಶಿಯ ಹರಿದಿನದಂದು ಶ್ರೀಸಂಸ್ಥಾನದವರು ಶಿಷ್ಯರೊಡಗೂಡಿ ರಾಮಪದಗಳನ್ನು ಹಾಡುವ ರಾಮಪದ ಸಹಜ ಸತ್ಸಂಗ ಕಾರ್ಯಕ್ರಮ ಶನಿವಾರ(೩-೧೧-೨೦೧೮) ದಂದು ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದೆ.

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿರುವ ಈ ರಾಮಪದದಲ್ಲಿ ಪ್ರತಿಬಾರಿಯಂತೆ ಶ್ರೀಸಂಸ್ಥಾನ ರಾಮಪದತಲದಲ್ಲಿ ಕುಳಿತು ಶ್ರೀರಾಮನ ಹಾಡುಗಳನ್ನು ಹಾಡುತ್ತ‌ ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತ ಸತ್ಸಂಗ ನಡೆಸಲಿದ್ದಾರೆ.

ಈ ಬಾರಿಯ ರಾಮಪದ ಕಾರ್ಯಕ್ರಮದಲ್ಲಿ ಗಾಯಕರಾಗಿ ಹಿಂದೂಸ್ಥಾನಿ ಸಂಗೀತಕ್ಷೇತ್ರದ ಉದಯೋನ್ಮುಖ‌ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಪಾಲ್ಗೊಳ್ಳಲಿದ್ದಾರೆ. ಕಲಾರಾಮ ಅರ್ಪಿಸುವ ಈ ಅಪರೂಪದ ರಾಮಪದ ಕಾರ್ಯಕ್ರಮದಲ್ಲಿ ನೀವೆಲ್ಲರೂ ಭಾಗಿಯಾಗಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಕಲಾರಾಮ ಕಾರ್ಯದರ್ಶಿ ಶ್ರೀಮತಿ ಅನುರಾಧಾ ಪಾರ್ವತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Author Details


Srimukha

1 thought on “ಶನಿವಾರ ರಾಮಾಶ್ರಮದಲ್ಲಿ ರಾಮಪದ ಸತ್ಸಂಗ

Leave a Reply

Your email address will not be published. Required fields are marked *