ಈಶ್ವರಮಂಗಲ: ಈಶ್ವರಮಂಗಲ ಪ್ರಾಂತ್ಯ ಹವ್ಯಕ ಬ್ರಾಹ್ಮಣ ಮಹಾಸಭಾ ನಿರ್ಮಿಸಿರುವ ‘ಜನಮಂಗಲ ಸಭಾಭವನ’ದ ಉದ್ಘಾಟನೆಯು ಶುಕ್ರವಾರ ನಡೆಯಿತು.
ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಕಾರ್ಯ ಸಮರ್ಪಕವಾಗಿ, ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಾದರೆ ಇಚ್ಛಾಶಕ್ತಿ, ಪ್ರೇರಣಾಶಕ್ತಿ ಹಾಗೂ ಸಂಘಟನಾಶಕ್ತಿ ಅಗತ್ಯ. ಇಲ್ಲಿ ಆ ಶಕ್ತಿಗಳಿಂದ ಇಂತಹದೊಂದು ವ್ಯವಸ್ಥಿತವಾದ ಸಭಾಭವನ ಲೋಕಾರ್ಪಣೆಗೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಈಶ್ವರಮಂಗಲ ಪ್ರಾಂತ್ಯದ ಹವ್ಯಕ ಮಹಾಸಭಾ ಅಧ್ಯಕ್ಷ ಶ್ರೀ ಶಿವಪ್ರಸಾದ್ ಪಟ್ಟೆ ಮಾತನಾಡಿ, 37 ವರ್ಷಗಳ ಕನಸು ಈಡೇರಿದೆ. ಮಂಗಳ ಕಾರ್ಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಭಾಭವನ ಸಿದ್ಧವಾಗಿದೆ. ಇನ್ನುಳಿದ ಅಗತ್ಯ ಕೆಲಸಗಳನ್ನು ಸದ್ಯದಲ್ಲಿಯೇ ಪೂರ್ತಿಗೊಳಿಸಲಾಗುವುದು ಎಂದರು.
ವಿಶ್ರಾಂತ ಉಪನ್ಯಾಸಕ ಶ್ರೀ ವಿ. ಬಿ. ಅರ್ತಿಕಜೆ, ನಿವೃತ್ತ ಸಹಾಯಕ ನಿರ್ದೇಶಕ ಶ್ರೀ ಕೆ. ವಿ. ಭಟ್ ಮಳಿ, ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಭಟ್, ಶಿವಮೊಗ್ಗ ಹಾಪ್ಕೋಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಶ್ರೀ ಎ. ಕೆ. ಪರಮೇಶ್ವರ ಭಟ್ ಅರ್ತ್ಯಡ್ಕ, ಪೆರಾಜೆ ಮಾಣಿ ವೇದಪಾಠ ಶಾಲೆಯ ಅಧ್ಯಕ್ಷ ಶ್ರೀ ಹಾರಕೆರೆ ನಾರಾಯಣ ಭಟ್, ಮುಳ್ಳೇರಿಯಾ ಹವ್ಯಕ ಮಂಡಲದ ಅಧ್ಯಕ್ಷ ಶ್ರೀ ಶ್ರೀಕೃಷ್ಣ ಭಟ್, ಮುಳಿಯ ಜ್ಯುವೆಲರ್ಸ್ ನ ಅಧ್ಯಕ್ಷ ಶ್ರೀ ಕೇಶವ ಪ್ರಸಾದ ಮುಳಿಯ, ಈಶ್ವರ ಮಂಗಲ ಹವ್ಯಕ ವಲಯದ ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ ಮಾಡಾವು ಶುಭ ಹಾರೈಸಿದರು.
ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷ ಶ್ರೀ ಕೃಷ್ಣಪ್ರಸಾದ ಕೊಚ್ಚಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕಾರಿ ಮಂಡಳಿಯ ಕೋಶಾಧಿಕಾರಿ ಶ್ರೀ ವೆಂಕಟಪ್ಪ ಎಮ್. ಎನ್. ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಸೂರ್ಯನಾರಾಯಣ ಭಟ್ ಪಿ. ಎಸ್. ವಂದಿಸಿದರು. ಶಿಕ್ಷಕ ಶ್ರೀ ರಾಜ್ ಗೋಪಾಲ ಪಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ವೇದಮೂರ್ತಿ ಪಟ್ಲಮೂಲೆ ಶ್ರೀ ಕೃಷ್ಣಕುಮಾರ್ ಉಪಾಧ್ಯಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ಜರುಗಿತು.
ತಿದ್ದುಪಡಿ:-ಕಾರ್ಯಕಾರೀ ಸಮಿತಿಯ ಕೋಶಾಧಿಕಾರಿ ವೆಂಕಟಕೃಷ್ಣ .ಯಮ್.ಯನ್.ಎಂದು ಆಗ ಬೇಕಿದ್ದು ತಪ್ಪು ಹೆಸರು ಅಚ್ಚಾಗಿರುತ್ತದೆ.ಓದುವಾಗ ಸರಿಪಡಿಸಿಕೊಳ್ಳಲು ವಿನಂತಿ.
-ಯಲ್.ಬಿ.ಪೆರ್ನಾಜೆ.ಶಿಷ್ಯ ಮಾಧ್ಯಮ ವಿಭಾಗ,ಈಶ್ವರಮಂಗಲ ಹವ್ಯಕ ವಲಯ.